ಬರಲಿದೆ ಯೂಟ್ಯೂಬ್ ಶಾರ್ಟ್ಸ್, ಯೂಟ್ಯೂಬ್ ನ ಟಿಕ್ ಟಾಕ್ ಅವತರಣಿಕೆ( YouTube launches ‘shorts’)

Share

ಭಾರತ ಸರ್ಕಾರ ಟಿಕ್ ಟಾಕ್ ಬ್ಯಾನ್ ಮಾಡಿದ ಬೆನ್ನಲ್ಲೇ , ಇನ್ಸ್ಟಾಗ್ರಾಮ್ ತನ್ನ 15ಸೆಕೆಂಡ್ ಗಳ ವಿಡಿಯೋ ರೆಕಾರ್ಡ್ ಹಾಗು ಶೇರ್ ಮಾಡುವ ರೀಲ್ಸ್ ಅನ್ನು ಭಾರತದಲ್ಲಿ ಹೊರಬಿಟ್ಟಿತ್ತು . ಈಗ ಯೂಟ್ಯೂಬ್ ನ ಸರದಿ. ಯೂಟ್ಯೂಬ್ ಶಾರ್ಟ್ಸ್ ಕೂಡ ವಿಡಿಯೋಗಳನ್ನು 15 ಸೆಕೆಂಡ್ಗಳಿಗೆ ಸೀಮಿತವಾಗಿಸಿದೆ.

ಯೂಟ್ಯೂಬ್ ನ ಪ್ರಕಟಣೆಯ ಪ್ರಕಾರ, ಯೂಟ್ಯೂಬ್ ಶಾರ್ಟ್ಸ್ ಭಾರತದಲ್ಲಿ ಪ್ರಯೋಗಾತ್ಮಕವಾಗಿ ಟೆಸ್ಟಿಂಗ್ ಗೆ ಬಿಡಲಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲ ಬಳಕೆದಾರರಿಗೂ ದೊರೆಯಲಿದೆ. ಕ್ರಿಯೇಟ್ ಬಟನ್ (+) ನ್ಯಾವಿಗೇಷನ್ ಬಾರ್ ನ ಮಧ್ಯಭಾಗಕ್ಕೆ ಬಂದಿದೆ. ಇದನ್ನು ಒತ್ತಿ ‘ವಿಡಿಯೋ’ ಆಯ್ಕೆಯನ್ನು ಕ್ಲಿಕ್ಕಿಸಿದ ಕೂಡಲೇ ನಿಮಗೆ “ಕ್ರಿಯೇಟ್ ಶಾರ್ಟ್ ವಿಡಿಯೋ ” ಎಂಬ ಆಯ್ಕೆ ಬಂದರೆ ‘ಶಾರ್ಟ್ಸ್’ನ ಕ್ಯಾಮೆರಾ ಲಭ್ಯವಿದ್ದು ಜೊತೆಗೆ ನೀವು 15 ಸೆಕೆಂಡ್ ನ ವಿಡಿಯೋ ರೆಕಾರ್ಡ್ ಮಾಡಬಹುದು. ಎಡಿಟ್ ಮಾಡಲು ಸ್ಪೀಡ್ ಕಂಟ್ರೋಲ್, ಟೈಮರ್ ಹಾಗು ಆಡಿಯೋ ಕ್ಲಿಪ್ ಬಳಸಲು “ಆಡ್ ಮ್ಯೂಸಿಕ್” ಆಯ್ಕೆಗಳು ಇವೆ.

ಕೃಪೆ : ಯೂಟ್ಯೂಬ್

ನಿಮ್ಮಲ್ಲಿ ‘ಶಾರ್ಟ್ಸ್ ‘ ಸದ್ಯಕ್ಕೆ ಇಲ್ಲದಿದ್ದರೂ ಸಹ ನೀವು 1 ನಿಮಿಷದೊಳಗಿನ ವಿಡಿಯೋವನ್ನು ರೆಕಾರ್ಡ್ ಮಾಡಿ ವಿವರಣೆಯಲ್ಲಿ #shorts ಬಳಸಿದರೆ ಇವುಗಳನ್ನು ಸಹ ಹೋಂ ಪೇಜ್ ನಲ್ಲಿ ಪ್ಲೇ ಮಾಡಲಾಗುತ್ತದೆ. ಇನ್ಸ್ಟಾಗ್ರಾಮ್ ನ ರೀಲ್ಸ್ ನ ಮಾಹಿತಿಗೆ ಈ ಲೇಖನ ಓದಿ.

ಮೂಲ ಪ್ರಕಟಣೆ : ಯೂಟ್ಯೂಬ್ ಬ್ಲಾಗ್