ವೈರ್-ಲೆಸ್ charging ನಿಮ್ಮ ಫೋನಿಗೆ ಮಾರಕ!

Share

ನಿಮ್ಮ ಫೋನ್ ಅನ್ನು ವೈರ್-ಲೆಸ್ charging ಮಾಡುವ ಮುನ್ನ ಒಮ್ಮೆ ನಮ್ಮ ಅಂಕಣ ಓದಿ, ಯೋಚಿಸಿ ನಂತರ ಮುಂದುವರಿಯಿರಿ.

ವೈರ್-ಲೆಸ್ chargingನ ಎರಡು ಪ್ರಮುಖ ಹಾನಿಕಾರಕ ಅಂಶಗಳೆಂದರೆ, ಫೋನಿನ ಬ್ಯಾಟರಿ ವೇಗವಾಗಿ ಅವನತಿ ಹೊಂದುವುದು ಮತ್ತು ಶೇಕಡಾ ೩೦ ರಷ್ಟು ವಿದ್ಯುಚ್ಚಕ್ತಿ ವ್ಯರ್ಥವಾಗುವುದು.

cable ಬಳಸಿ ಚಾರ್ಜ್ ಮಾಡುವುದರಿಂದ ವಿದ್ಯುಚ್ಚಕ್ತಿಯು ನೇರವಾಗಿ ನಿಮ್ಮ ಫೋನಿಗೆ ರವಾನೆಯಾಗುತ್ತದೆ. ಆದರೂ ಈ ಪ್ರಕ್ರಿಯೆಯಲ್ಲಿ ಶೇಕಡಾ ೩೦ ರಷ್ಟು ವಿದ್ಯುಚ್ಚಕ್ತಿಯು ವ್ಯರ್ಥವಾಗುತ್ತದೆ. ಉದಾಹರಣೆಗೆ 12 WHr(Watt Hour) ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಲು 18 WHr ನಷ್ಟು ವಿದ್ಯುತುಚ್ಛಕ್ತಿ ಬೇಕಾಗುತ್ತದೆ ಹಾಗು ಬ್ಯಾಟರಿಯ ತಾಪಮಾನ 29 ಸೆಲ್ಸಿಯಸ್ ಒಳಗೆ ಇರುವುದೆಂದು ಕಂಡುಬಂದಿದ್ದು ಬ್ಯಾಟರಿಯ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.

ವೈರ್-ಲೆಸ್ charging ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಡಕ್ಷನ್ (Electromagnetic Induction) ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಮ್ಯಾಗ್ನೆಟಿಕ್ ಫೀಲ್ಡ್ (Magnetic Field) ಮೂಲಕ cableನ ಅಗತ್ಯವಿಲ್ಲದೆಯೇ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ.

Electromagnetic induction - solenoid to loop - animation.gif
By PonorOwn work, CC BY-SA 4.0, Link

ಮ್ಯಾಗ್ನೆಟಿಕ್ ಫೀಲ್ಡ್ ಉತ್ಪತ್ತಿ ಮಾಡಲು ಒಂದು coil ಅನ್ನು ಫೋನಿನಲ್ಲೂ ಹಾಗು ಮತ್ತೊಂದು coil ಅನ್ನು ಚಾರ್ಗಿಂಗ್ ಪ್ಯಾಡ್ ನಲ್ಲೂ ಅಳವಡಿಸಲಾಗಿರುತ್ತದೆ. ಈ ರೀತಿ ಮ್ಯಾಗ್ನೆಟಿಕ್ ಫೀಲ್ಡ್ ಉತ್ಪಾದಿಸುವಲ್ಲಿಯೇ ಬಹಳಷ್ಟು ಶಕ್ತಿಯು ವ್ಯರ್ಥವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಶೇಕಡಾ 100 ರಷ್ಟು ವಿದ್ಯುಚ್ಛಕ್ತಿಯು ವ್ಯರ್ಥವಾಗುತ್ತದೆ ಹಾಗು ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಉದಾಹರಣೆಗೆ 12 WHr ಬ್ಯಾಟರಿಯನ್ನು ಚಾರ್ಜ್ ಮಾಡಲು 24 WHr ನಷ್ಟು ಶಕ್ತಿಯು ಬೇಕಾಗುತ್ತದೆ ಅದಲ್ಲದೆ ಬ್ಯಾಟರಿಯ ತಾಪಮಾನವು 40 ಸೆಲ್ಸಿಯಸ್ ರಷ್ಟು ಹೆಚ್ಚಾಗುತ್ತದೆ. ಇದರಿಂದ ಬ್ಯಾಟರಿಯ ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಹಾಗೆಯೇ ಹೆಚ್ಚಿನ ತಾಪಮಾನದಿಂದ ಫೋನಿನ ಕಾರ್ಯಕ್ಷಮತೆಯ ಮೇಲು ದುಷ್ಪರಿಣಾಮ ಬೀರಬಹುದಾಗಿದೆ.

ಎರಡೂ ಪ್ರಕ್ರಿಯೆಯನ್ನು ತಾಳೆ ಹಾಕಿ ನೋಡಿದಾಗ ವೈರ್ ಲೆಸ್ charging ಆಧುನಿಕ ಮತ್ತು ಮಾಯಾವಿಯಾಗಿ ಕಂಡುಬಂದರೂ ಅದರ ದುಷ್ಪರಿಣಾಮಗಳು ಹೆಚ್ಚಿವೆ. ಫೋನ್ ಚಾರ್ಜ್ ಮಾಡಲು ಕೇಬಲ್ ಬಳಸುವುದರಿಂದ ಫೋನಿನ ಹಾಗು ಬ್ಯಾಟರಿಯ ಬಾಳಿಕೆಯು ಹೆಚ್ಚುತ್ತದೆ.