ಫೇಸ್ಬುಕ್ ನ ಒಡೆತನದಲ್ಲಿರುವ ವಾಟ್ಸ್ಅಪ್, ಬಳಕೆದಾರರ ಗೌಪ್ಯತೆಗೆ ಪ್ರಾಮುಖ್ಯತೆ ನೀಡುವ ಸಲುವಾಗಿ ಅಪ್ಡೇಟುಗಳನ್ನು ಮಾಡುತ್ತಿದೆ. WABetaInfo ಮಾಹಿತಿಯ ಪ್ರಕಾರ ವಾಟ್ಸ್ಅಪ್ ನ ಹೊಸ ಫೀಚರ್ ನಲ್ಲಿ ಬಳಕೆದಾರ ವಿಡಿಯೋ ಅಥವಾ ಫೋಟೋಗಳನ್ನು ಹಂಚಿಕೊಳ್ಳುವ ಮುನ್ನ ಅವುಗಳು ಒಮ್ಮೆ ಮಾತ್ರ ವೀಕ್ಷಿಸುವಂತೆ ಆಯ್ದುಕೊಳ್ಳಬಹುದು. ಈ ಫೀಚರ್ ಗೆ “Expiring Media”ಎಂದು ಹೆಸರಿಡಲಾಗಿದೆ.

ಉದಾಹರಣೆಗೆ ನೀವು ಹಂಚಿಕೊಳ್ಳಲು ಇಚ್ಛಿಸುವ ಫೋಟೋ ಅಥವಾ ವಿಡಿಯೋವನ್ನು Expiring Media ಆಯ್ಕೆಯೊಂದಿಗೆ ಹಂಚಿಕೊಂಡರೆ, ಚಾಟ್ ನಲ್ಲಿ ಇವುಗಳನ್ನು ಸ್ವೀಕರಿಸಿದವರು, ಒಮ್ಮೆ ನೋಡಿದ ತಕ್ಷಣವೇ ಅವುಗಳು ಸೆಲ್ಫ್ ಡಿಲಿಟ್ ಆಗಲಿವೆ ಮತ್ತು ಚಾಟ್ ನಲ್ಲಿ ಇದರ ಯಾವುದೇ ಸುಳಿವು ಇರುವುದಿಲ್ಲ. ವಿಡಿಯೋ ಅಥವಾ ಫೋಟೋಗಳು ಚಾಟ್ ನಲ್ಲಿ ಬೇರೆ ರೀತಿಯಲ್ಲಿ ಕಾಣಲಿವೆ

Expiring media ಆಯ್ಕೆ ಬಳಸಿ ಹಂಚಿಕೊಳ್ಳಲಾದ ಫೋಟೋ ಅಥವಾ ವಿಡಿಯೋ ಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಿಲ್ಲದ ಕಾರಣ, ಅತಿ ಸೂಕ್ಷ್ಮ ವಿಚಾರಗಳನ್ನು ಇನ್ನು ಮುಂದೆ ವಾಟ್ಸ್ಅಪ್ ಮೂಲಕ ಕಳುಹಿಸಬಹುದು ಎಂದೆನ್ನಲಾಗುತ್ತಿದೆ. ಇದಿನ್ನೂ ಬೀಟಾ ಟೆಸ್ಟಿಂಗ್ ಹಂತದಲ್ಲಿದ್ದು, ಬಳಕೆದಾರರಿಗೆ ಮುಂದಿನ ಅಪ್ಡೇಟ್ ನಲ್ಲಿ ದೊರೆಯಲಿದೆ.
ವಾಟ್ಸ್ಅಪ್ ಬಹಳಷ್ಟು ಅಪ್ಡೇಟ್ ಗಳ ಮೇಲೆ ಕೆಲಸ ಮಾಡುತ್ತಿದ್ದು ಈ ಬಗ್ಗೆ ತಿಳಿಯಲು ವಾಟ್ಸ್ಅಪ್ ವೆಬ್ ಗೆ ವಿಡಿಯೋ ಹಾಗು ಆಡಿಯೋ ಕರೆಗಳ ಫೀಚರ್ ಬರಲಿದೆ ಮತ್ತು ವಾಟ್ಸ್ ಆಪ್ ಗೆ ಈಗ storage optimisation feature ಬರಲಿದೆ ಲೇಖನಗಳನ್ನು ಓದಿ.
ಮೂಲ ಸುದ್ದಿ : WABetaInfo
1 Response
[…] ಹಿಂದೆ WhatsApp, ಒಮ್ಮೆ ಮಾತ್ರ ನೋಡಬಹುದಾದ ಮೆಸೇಜ್ ವೈಶಿಷ್ಟ್ಯವನ್ನು […]