ವಾಟ್ಸಾಪ್ ನ ಹೊಸ “ಗೌಪ್ಯತಾ ನೀತಿ”

Share

ಮುಂದೆ ಓದುವ ಮುನ್ನ ನಿಮಗೆ ತಿಳಿದಿರಬೇಕಾದ ಒಂದು ಅಂಶವೆಂದರೆ ವಾಟ್ಸಾಪ್ ಸ್ವತಂತ್ರ ಕಂಪನಿಯಾಗಿರದೆ, ಫೇಸ್ಬುಕ್ ನ ಒಡೆತನಕ್ಕೆ ಫೆಬ್ರವರಿ 19, 2014 ರಂದು ಸೇರಿದೆ. ನನ್ನ ಅಭಿಪ್ರಾಯದ ಪ್ರಕಾರ ವಾಟ್ಸಾಪ್ ಸ್ವತಂತ್ರವಾಗಿದ್ದರೆ ಈ ಕೆಳಗೆ ವಿವರಿಸಿದ ನೀತಿಗಳನ್ನು ಜಾರಿಗೊಳಿಸುತ್ತಿರಲಿಲ್ಲವೆಂದುಕೊಳ್ಳುತ್ತೇನೆ.

ಈ ಹಿಂದಿನ ಗೌಪ್ಯತಾ ನೀತಿಗೂ, ಜನವರಿ 4 ರಂದು ಬಿಡುಗಡೆಗೊಳಿಸಿದ ನೀತಿಗೂ ಬಹಳ ವ್ಯತ್ಯಾಸವೇನಿಲ್ಲ. ಹೊಸ ನೀತಿಯಲ್ಲಿ ವಾಟ್ಸಾಪ್ ನಲ್ಲಿ ನಿಮ್ಮ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ತನ್ನ ಫೇಸ್ಬುಕ್ ಕುಟುಂಬದ ಕಂಪನಿಗಳಿಗೆ ಹಂಚಲು ನೀವು ಒಪ್ಪಿಗೆ ಸೂಚಿಸಬೇಕಷ್ಟೆ.

ನಿಮ್ಮ ಚಾಟ್ ಗಳು ಈಗಲೂ ಸುರಕ್ಷಿತವಾಗಿದ್ದು, ನೀವು ಖಾತೆ ತೆರೆಯಲು ನೀಡಿದ ಮಾಹಿತಿಗಳಾದ, ಹೆಸರು, ಫೋನ್ ಸಂಖ್ಯೆ, ಕಾಂಟಾಕ್ಟ್ ವಿವರಗಳು, location ಮಾಹಿತಿ, ಫೋನಿನ ನೆಟ್ವರ್ಕ್, ಪ್ರೊಫೈಲ್ ಫೋಟೋ ಮತ್ತು status ಮಾಹಿತಿ ಫೇಸ್ಬುಕ್ ಕುಟುಂಬದ ಕಂಪನಿಗಳಿಗೆ ಹಂಚಲಾಗುತ್ತದೆ.

ಇವುಗಳೊಟ್ಟಿಗೆ ನೀವು ಯಾವುದೇ ಸುದ್ದಿ ಸಮಾಚಾರ,ಆನ್ಲೈನ್ ನಲ್ಲಿ ನೀವು ನೋಡಿದ ಯಾವುದೇ ವಿಡಿಯೋ ತುಣುಕು ಮತ್ತು ಶಾಪಿಂಗ್ ಮಾಡುವಾಗ ಇಷ್ಟವಾದ ವಸ್ತುವನ್ನು ಸ್ನೇಹಿತರಿಗೆ ಕಳಿಸಲು ವಾಟ್ಸಾಪ್ ಬಳಸಿದ್ದಲ್ಲಿ, ನೀವು ವಾಟ್ಸಾಪ್ payment ಬಳಸುತ್ತಿದ್ದಲ್ಲಿ transaction ವಿವರಗಳು ಕೂಡ ವಾಟ್ಸಾಪ್ ನ ಬಳಿ ಇರಲಿದೆ.

“ವಾಟ್ಸಾಪ್ ಬಿಸಿನೆಸ್” ಖಾತೆಗಳೊಟ್ಟಿಗೆ ನಿಮ್ಮ ಸಂಭಾಷಣೆ ಕೂಡ ಆಯಾ ಬ್ಯುಸಿನೆಸ್ ಖಾತೆಯ ನೀತಿಗೆ ಒಳಪಡಲಿದ್ದು ಅವುಗಳು ಫೇಸ್ಬುಕ್ ನ server ಗಳನ್ನು ಡೇಟಾ store ಮಾಡಲು ಬಳಸಿದ್ದಲ್ಲಿ ನಿಮ್ಮ ಡೇಟಾ ಫೇಸ್ಬುಕ್ ಕೈಸೇರಲಿದೆ.

ಈ ಡೇಟಾ ದಿಂದಾಗುವ ಉಪಯೋಗವೆನೆಂದು ನೀವು ಯೋಚಿಸುತ್ತಿರಬಹುದು. ನಿಮ್ಮ ಬಗೆಗಿನ ಎಲ್ಲ ಮಾಹಿತಿಯನ್ನು ತನ್ನ ವಿವಿಧ ಸಾಮಾಜಿಕ ಜಾಲತಾಣ ದ ಅಪ್ಲಿಕೇಶನ್ ಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ನಿಮಗೆ ಸಂಬಂಧಿಸಿದ content ತೋರಿಸಿ ಆದಷ್ಟು ಸಮಯ ನೀವು ಅವರ ಜಾಲತಾಣದಲ್ಲಿ ಕಳೆಯುವಂತೆ ಮಾಡುವುದಲ್ಲದೆ ಜಾಹಿರಾತುಗಳ ಮೂಲಕ ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಕೊಳ್ಳುಬಾಕ ಸಂಸ್ಕೃತಿಗೆ ನೂಕಲಾಗುತ್ತದೆ.

ಕೃಪೆ : ವಾಟ್ಸಾಪ್ ಗೌಪ್ಯತಾ ನೀತಿ

ವಾಟ್ಸಾಪ್ ನಲ್ಲಿ ಇದುವರೆಗೆ ಯಾವುದೇ ಜಾಹಿರಾತುಗಳನ್ನು ತೋರಿಸುತ್ತಿರಲಿಲ್ಲ. ಹೊಸ ನೀತಿಯಲ್ಲೂ ಸಹ ಇದನ್ನು ಬಿಂಬಿಸಲಾಗಿದೆ ಆದರೆ, ಮುಂದೆ ಜಾಹೀರಾತು ಬರುವ ಎಲ್ಲ ಸಾಧ್ಯತೆಗಳಿವೆ ಎಂದು ಸ್ಪಷ್ಟ ಸುಳಿವು ನೀಡಿದೆ.

ಕೃಪೆ : ವಾಟ್ಸಾಪ್ ಗೌಪ್ಯತಾ ನೀತಿ

ಈ ಹೊಸ ನೀತಿಗೆ ಒಪ್ಪಿಗೆ ಸೂಚಿಸಲು ಈ ವರ್ಷದ ಫೆಬ್ರವರಿ 7 ರ ವರೆಗೆ ಗಡುವು ನೀಡಲಾಗಿದ್ದು. ನೀವು ಒಪ್ಪದಿದ್ದರೆ ವಾಟ್ಸಾಪ್ ಡಿಲೀಟ್ ಮಾಡುವ ಮೂಲಕ ನಿಮ್ಮ ಡೇಟಾ ರಕ್ಷಿಸಿಕೊಳ್ಳಬಹುದಾಗಿದೆ.

ಕೇವಲ ಫೋನಿನಿಂದ ವಾಟ್ಸಾಪ್ uninstall ಮಾಡುವುದರಿಂದ ನಿಮ್ಮ ಡೇಟಾ ವಾಟ್ಸಾಪ್ ನ server ಗಳಿಂದ ನಾಶಗೊಳ್ಳುವುದಿಲ್ಲ, ಅಪ್ಲಿಕೇಶನ್ ನಲ್ಲಿ Settings>Account>Delete my account ಆಯ್ಕೆ ಮಾಡಬೇಕಾಗುತ್ತದೆ.

ಮೂಲ ಸುದ್ದಿ: WhatApp privacy policy