WhatsAppನ ತನ್ನದೇ “Storage management tool”

Share

ಫೋನಿನ storageನಲ್ಲಿ ಸುಮಾರು ಅರ್ಧದಷ್ಟು ಭಾಗ WhatsAppನಿಂದ ಡೌನ್ಲೋಡ್ ಮಾಡಲಾದ GIFಗಳು, ಫೋಟೋಗಳು, ವಿಡಿಯೊಗಳೇ ತುಂಬಿಕೊಂಡಿರುತ್ತವೆ. settingsನಲ್ಲಿ autodownload ಆಯ್ಕೆಯನ್ನು ನಿಷ್ಕ್ರಿಯಗೊಳಿ ಸಿದ್ದರೂ ಅನಿವಾರ್ಯವಾಗಿ ಕೆಲವು ಫೈಲುಗಳನ್ನು ಡೌನ್ಲೋಡ್ ಮಾಡಿಬಿಟ್ಟಿರುತ್ತೇವೆ.

ಫೋನಿನ storage ಈ ರೀತಿ ತುಂಬಿಕೊಳ್ಳುವುದರಿಂದ ಕಾರ್ಯಕ್ಷಮತೆ ಕಡಿಮೆಯಾಗುದಲ್ಲದೆ, ಅಪ್ಲಿಕೇಶನ್ ಗಳು ಮಂದಗತಿಯಲ್ಲಿ ಕಾರ್ಯನಿರ್ವಹಿಸಲಾರಂಭಿಸುತ್ತವೆ. ಇನ್ನುಮುಂದೆ WhatsAppನಲ್ಲಿ ಡೌನ್ಲೋಡ್ ಮಾಡಲಾದ ಫೈಲುಗಳನ್ನು ನಿಭಾಯಿಸಲು “storage management tool” ಅಪ್ಲಿಕೇಶನ್ ನಲ್ಲಿಯೇ ಲಭ್ಯವಿದೆ.

ಹೆಚ್ಚು ಫಾರ್ವರ್ಡ್ ಮಾಡಲಾದ media ಫೈಲುಗಳು ಹಾಗು 5ಎಂಬಿ ಗಿಂತಲೂ ಹೆಚ್ಚು ಮೆಮೊರಿ ಹೊಂದಿರುವ ಫೈಲುಗಳ ಗುಂಪು ಮಾಡಲಾಗಿದ್ದು ಬಳಕೆದಾರರಿಗೆ ಫೈಲುಗಳನ್ನು ಒಮ್ಮೆಲೆ ಆಯ್ಕೆ ಮಾಡಿ ಡಿಲೇಟ್ ಮಾಡುವುದು ಸುಲಭವಾದಂತಾಗಿದೆ. storage management tool ಈಗಾಗಲೇ ಕೆಲವು ದೇಶದಲ್ಲಿ ಲಭ್ಯವಿದ್ದು ಮುಂಬರುವ ದಿನಗಳಲ್ಲಿ ವಿಶ್ವದೆಲ್ಲಡೆ ದೊರೆಯಲಿದೆ ಎಂದು ಹೇಳಲಾಗಿದೆ.

https://twitter.com/WhatsApp/status/1323414851255857154

ಹೆಚ್ಚು ಮೆಮೊರಿ ಹೊಂದಿರುವ ಫೈಲುಗಳು ಪಟ್ಟಿಯಲ್ಲಿ ಮೇಲೆ ಬರಲಿದ್ದು, ಆಯ್ಕೆ ಮಾಡಿ ಡಿಲೀಟ್ ಮಾಡುವ ಮೂಲಕ ಫೋನಿನ storageಅನ್ನು ಮುಕ್ತಿಗೊಳಿಸಲು ಸಹಕಾರಿಯಾಗಲಿದೆ.