ಈ ಹಿಂದೆ WhatsApp, ಒಮ್ಮೆ ಮಾತ್ರ ನೋಡಬಹುದಾದ ಮೆಸೇಜ್ ವೈಶಿಷ್ಟ್ಯವನ್ನು ಅಭಿವೃದ್ಧಿಗೊಳಿಸುತ್ತಿದೆ ಎಂದು ವರದಿ ಮಾಡಿದ್ದೆವು. ಈ ವೈಶಿಷ್ಟ್ಯಕ್ಕೆ ಚೂರು ಮಾರ್ಪಾಡುಗಳೊಂದಿಗೆ ಈಗ, ಚಾಟ್ ನಲ್ಲಿರುವ ಸಂದೇಶಗಳನ್ನು 1 ವಾರ ಮಾತ್ರ ಉಳಿಸಿಕೊಂಡು ನಂತರ ಸ್ವಯಂ ಮಾಯವಾಗುವಂತೆ ಮಾಡುವ ಆಯ್ಕೆಯನ್ನು ಇತ್ತೀಚಿನ ವಾಟ್ಸಾಪ್ update ನಲ್ಲಿ ಹೊರಬಿಡಲಾಗಿದೆ.
ಈ ವೈಶಿಷ್ಟ್ಯಕ್ಕೆ “disappearing messages” ಎನ್ನಲಾಗಿದ್ದು, ಪ್ರತಿ ವ್ಯಕ್ತಿಯ ಚಾಟ್ ನಲ್ಲಿ ಇಚ್ಛೆಯನುಸಾರ ಸಕ್ರಿಯಗೊಳಿಸಬಹುದಾಗಿದೆ. ಈ ಆಯ್ಕೆಯನ್ನು ಸಕ್ರಿಯಗೊಳಿಸಿದರೂ , ಈ ಹಿಂದೆ ಮಾಡಲಾದ ಸಂದೇಶಗಳು ಚಾಟ್ ನಲ್ಲಿಯೇ ಉಳಿಯಲಿವೆ.
“disappearing messages” ಸಕ್ರಿಯವಾಗಿರುವ ಚಾಟ್ ನಿಂದ, ನಿಷ್ಕ್ರಿಯವಾಗಿರುವ ಚಾಟ್ ಗೆ ಸಂದೇಶವನ್ನು forward ಮಾಡಲಾದಾಗ, ನಿಷ್ಕ್ರಿಯವಾಗಿರುವ ಚಾಟ್ ನಲ್ಲಿ ಸಂದೇಶಗಳು ಉಳಿದುಕೊಳ್ಳುತ್ತವೆ. ಹಾಗೆಯೇ ಫೋಟೋ, ವಿಡಿಯೋ ಮತ್ತು ಇನ್ನಿತರ ಫೈಲುಗಳು ಸಹ 1 ವಾರಕ್ಕೆ ಚಾಟ್ ನಲ್ಲಿ ಮಾಯವಾಗಲಿದ್ದು, ಆದರೆ auto-download ಆಯ್ಕೆ ಸಕ್ರಿಯಗೊಳಿಸಿದ್ದರೆ ಮಾತ್ರ ಫೋನಿನ storageನಲ್ಲಿ ಲಭ್ಯವಿರುತ್ತವೆ.
ಈ ವೈಶಿಷ್ಟ್ಯವನ್ನು ಪ್ರತಿ ಚಾಟ್ ನಲ್ಲಿ ಸಕ್ರಿಯಗೊಳಿಸಬಹುದಾಗಿದ್ದು, group ಗಳಲ್ಲಿ ಇದು ಕೇವಲ adminಗಳಿಗೆ ಮಾತ್ರ ಸೀಮಿತ.
“disappearing messages” ಆಯ್ಕೆ ಸಕ್ರಿಯಗೊಳಿಸಲು ಚಾಟ್ ಅಥವಾ group ಮೇಲೆ ಒತ್ತಿ, ನಂತರ contact name/group name ಮೇಲೆ ಒತ್ತಿದಾಗ ಕೆಳಭಾಗದಲ್ಲಿ ಆಯ್ಕೆ ಲಭ್ಯವಿರುತ್ತದೆ.
ಕಳೆದ ಬಾರಿ ವರದಿ ಮಾಡಿದಂತೆ WhatsApp, ಈ update ನಲ್ಲಿ ತನ್ನದೇ Storage management tool ಹೊರಬಿಟ್ಟಿದ್ದು ಬಹುತೇಕ ಬೀಟಾ ಹಂತದಲ್ಲಿದ್ದ ಆಯ್ಕೆಗಳೇ ಇಲ್ಲೂ ಲಭ್ಯವಿವೆ. ಈ ಬಗ್ಗೆ ತಿಳಿಯಲು, WhatsAppನ ತನ್ನದೇ “Storage management tool” ಓದಿ.