ಫೇಸ್ಬುಕ್ ನ ಒಡೆತನದಲ್ಲಿರುವ ವಾಟ್ಸ್ ಆಪ್ ಜಗತ್ತಿನಲ್ಲಿ ಅತಿ ಹೆಚ್ಚು ಉಪಯೋಗಿಸುತ್ತಿರುವ ಮೆಸೇಜಿಂಗ್ ಅಪ್ಲಿಕೇಶನ್ (messaging application). ನೀವು ಫೋನಿನಲ್ಲಿ ವಾಟ್ಸ್ ಆಪ್ ಬಳಸಿದಂತೆಯೇ , ಲ್ಯಾಪ್ಟಾಪ್ ಹಾಗು ಕಂಪ್ಯೂಟರ್ ನಲ್ಲೂ ಬ್ರೌಸರ್ ನಲ್ಲಿ ವಾಟ್ಸ್ ಅಪ್ ಗೆ ಲಾಗಿನ್ ಆಗಿ ಬಳಸಬಹುದು. ವಾಟ್ಸ್ ಅಪ್ ವೆಬ್ ಈಗಾಗಲೇ ಟೆಕ್ಕಿಗಳಿಗೆ ಅಚ್ಚುಮೆಚ್ಚು.
ಈಗಿರುವ ವಾಟ್ಸ್ ಅಪ್ ವೆಬ್ ನಲ್ಲಿ ಯಾವುದೇ ಕರೆಗಳನ್ನು ಮಾಡುವ ಆಯ್ಕೆ ಇಲ್ಲ. ವಾಟ್ಸ್ ಅಪ್ ಇದುವರೆಗೆ ಕೇವಲ ತನ್ನ ಮೊಬೈಲ್ ಅಪ್ಲಿಕೇಶನ್ ಗೆ ಅಪ್ಡೇಟ್ ಗಳನ್ನು ಹೊರಬಿಡುವುದರಲ್ಲಿ ಸಕ್ರಿಯವಾಗಿತ್ತು ಆದರೆ ಈಗ ವಾಟ್ಸ್ ಅಪ್ ವೆಬ್ ಕಡೆ ಕೂಡ ಗಮನ ಹರಿಸಿದೆ. WABetaInfo ಮಾಹಿತಿ ಪ್ರಕಾರ ಈಗ ವಾಟ್ಸ್ ಅಪ್ ವೆಬ್ ಗೆ ವಿಡಿಯೋ ಹಾಗು ಆಡಿಯೋ ಕರೆಗಳ ಫೀಚರ್ ಬರಲಿದೆ. ಈ ಫೀಚರ್ ಟೆಸ್ಟಿಂಗ್ ಹಂತದಲ್ಲಿದ್ದು ಬಗ್ ರಹಿತ ವಾಟ್ಸ್ ಅಪ್ ವೆಬ್ ಮುಂದಿನ ಅಪ್ಡೇಟ್ ನಲ್ಲಿ ಬರಲಿದೆ.

ಈಗಿರುವ ವಾಟ್ಸ್ ಅಪ್ ವೆಬ್ ನ ಅಟ್ಯಾಚ್ಮೆಂಟ್ ಆಯ್ಕೆಯಡಿಯಲ್ಲಿ ಲ್ಯಾಪ್ಟಾಪ್ ಕ್ಯಾಮೆರಾ ಅಥವಾ ವೆಬ್ ಕ್ಯಾಮೆರಾ ಬಳಸಿ ಫೋಟೋ ಕ್ಲಿಕ್ಕಿಸಬಹುದು. ಕರೆಗಳನ್ನು ಮಾಡುವ ಆಯ್ಕೆ ದೊರೆತರೆ ವಾಟ್ಸ್ ಅಪ್ ವೆಬ್, ಜೂಮ್ (zoom ) ಹಾಗು ಗೂಗಲ್ ಮೀಟ್ (google meet ) ಅಪ್ಲಿಕೇಶನ್ ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಸುದ್ದಿಯ ಮೂಲ: WABetaInfo
2 Responses
[…] ಮುಂದಿನ ದಿನಗಳಲ್ಲಿ ವಾಟ್ಸ್ ಅಪ್ ವೆಬ್ ಗೆ ಆಡಿಯೋ ಮತ್ತು ವಿಡಿಯೋ ಕರೆಗಳ ಫೀಚರ್ ಕೂಡ ಬರಲಿದ್ದು ಈ ಬಗ್ಗೆ ತಿಳಿಯಲು ಈ ಲೇಖನ ಓದಿ. […]
[…] […]