Google Meetನಲ್ಲಿ ವಿಡಿಯೋ ಕರೆಗಳ ಹಿನ್ನೆಲೆ ಈಗ ನಿಮ್ಮ ಆಯ್ಕೆ.

Share

Google Meet ತನ್ನ ಹೊಸ ಅಪ್ಡೇಟ್ ನಲ್ಲಿ ಬಳಕೆದಾರರಿಗೆ ತಮ್ಮ ವಿಡಿಯೋ ಕರೆಗಳ ಹಿನ್ನೆಲೆಯನ್ನು ಆಯ್ದುಕೊಳ್ಳುವ ಆಯ್ಕೆ ಹೊರಬಿಟ್ಟಿದೆ. ಈ ಆಯ್ಕೆ ಸದ್ಯಕ್ಕೆ windows ಮತ್ತು MAC OS ಹೊಂದಿರುವ chrome ಬ್ರೌಸರ್ ನಲ್ಲಿ ಮಾತ್ರ ಲಭ್ಯವಿದ್ದು ಮೊಬೈಲ್ ಗಳಲ್ಲಿ ಮುಂಬರುವ ದಿನಗಳಲ್ಲಿ ದೊರೆಯುವ ಮಾಹಿತಿ ನೀಡಿದೆ.

ಸದ್ಯಕ್ಕೆ ಹಿನ್ನೆಲೆಗೆ ಫೋಟೋವನ್ನು ಮಾತ್ರ ಬಳಸಬಹುದಾಗಿದ್ದು ವಿಡಿಯೋವನ್ನು ಬಳಸುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. Google Meetನಲ್ಲಿ ಈಗಾಗಲೇ ಒದಗಿಸಲಾಗಿರುವ ಫೋಟೋಗಳನ್ನು ಹಿನ್ನೆಲೆಗೆ ಬಳಸಬಹುದಾಗಿದೆ, ಅಥವಾ ನಿಮ್ಮ ಇಚ್ಛೆಯ ಫೋಟೋವನ್ನು ಅಪ್ಲೋಡ್ ಮಾಡಿ ಹಿನ್ನೆಲೆಗೆ ಉಪಯೋಗಿಸಬಹುದು.

ಕೃಪೆ: Google Meet

Google Meet ಈ ಹಿಂದೆ ವಿಡಿಯೋ ಕರೆಗಳ ಹಿನ್ನೆಲೆಯನ್ನು blur ಮಾಡುವ ಆಯ್ಕೆ ಹಾಗೂ background noise cancellation ವೈಶಿಷ್ಟ್ಯವನ್ನು ಹೊರಬಿಟ್ಟಿತ್ತು. ಇವೆರಡರ ಜೊತೆಗೆ ಹೊಸ ಅಪ್ಡೇಟ್, ಬಳಕೆದಾರರ ವಿಡಿಯೋ ಕರೆಗಳ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಿದಂತಾಗಿದೆ. ಹಿನ್ನೆಲೆ ಆಯ್ಕೆ chrome ಬ್ರೌಸರ್ ನಲ್ಲಿ ಯಾವುದೇ software ಅಳವಡಿಸಿಕೊಳ್ಳುವ ಅಗತ್ಯವಿಲ್ಲದೆ ಕಾರ್ಯ ನಿರ್ವಹಿಸುತ್ತದೆ ಎಂದು Google ಖಚಿತಪಡಿಸಿದೆ.

ಮೂಲ ಸುದ್ದಿ: ಗೂಗಲ್ blogpost