Virgin Hyperloopನ ಮೊದಲ ಪ್ರಯಾಣಿಕ Trail run ಯಶಸ್ವಿ

Share

Virgin Hyperloopನ ಬಗ್ಗೆ ಕೇಳಿರುತ್ತೀರಿ. ಇದೊಂದು hyperloop ರೈಲುಗಳನ್ನು ತಯಾರಿಸುವ ಕಂಪೆನಿಯಾಗಿದ್ದು magnetic levitation ತಂತ್ರಜ್ಞಾನ ಬಳಸಿ ಗಂಟೆಗೆ 1080 ಕಿ.ಮೀ. ವೇಗದಲ್ಲಿ ಚಲಿಸಬಲ್ಲ ಬೋಗಿಗಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಇಷ್ಟು ವೇಗದಲ್ಲಿರುವ ಮತ್ತು vacuumನಲ್ಲಿ ಚಲಿಸಬೇಕಾದ ಪ್ರಯಾಣಿಕರ ಭದ್ರತೆಯ ಬಗ್ಗೆ ಬಹಳಷ್ಟು ಮಂದಿ ಪ್ರಶ್ನಿಸಿದ್ದರು. ಕಂಪನಿಯು ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿದೆ.

ಇಬ್ಬರು ಉದ್ಯೋಗಿಗಗಳು, ಕಂಪನಿಯ DevLoop Test facilityನಲ್ಲಿ testing ಸಲುವಾಗಿ ತಯಾರಿಸಿದ ಬೋಗಿಯಲ್ಲಿ(XP -2) ಕೇವಲ 15 ಸೆಕೆಂಡುಗಳಲ್ಲಿ 500 ಮೀಟರ್ ದೂರ ಕ್ರಮಿಸುವ ಮೂಲಕ ಪ್ರಯಾಣಿಕರ ಭದ್ರತೆಗೆ ಯಾವುದೇ ಧಕ್ಕೆಯಿಲ್ಲ ಎಂದು ಸಾಬೀತು ಮಾಡಿದೆ.

ವಾಣಿಜ್ಯ ಬಳಕೆಗೆ 28 ಮಂದಿ ಸಾಮರ್ಥ್ಯ ಹೊಂದಿರುವ ಬೋಗಿಗಳನ್ನು ತಯಾರಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಈ ಎಲ್ಲ ಭದ್ರತಾ testing ಪ್ರಕ್ರಿಯೆಯು ಪ್ರತಿಷ್ಠಿತ ಕಂಪನಿಯಿಂದ ಪ್ರಮಾಣೀಕರಿಸಲ್ಪಟ್ಟಿದೆ ಎಂದು ತಿಳಿಸಲಾಗಿದೆ. ತುರ್ತು ಸಮಯವನ್ನು ಗುರುತಿಸಿ ಸರಿಯಾದ ಪ್ರಕ್ರಿಯೆ ಜರುಗಿಸಲು ಅತ್ಯುತ್ತಮ ಗುಣಮಟ್ಟದ control system ಅಳವಡಿಸಲಾಗಿದ್ದು ಪ್ರಯಾಣಿಕರ ಭದ್ರತೆಗೆ ಬಹಳಷ್ಟು ಒತ್ತು ನೀಡಿರಿವುದಾಗಿ ಕಂಪನಿ ಹೇಳಿದೆ.

ಈ ಹಿಂದೆ ವರದಿ ಮಾಡಿದಂತೆ ನಮ್ಮ ಬೆಂಗಳೂರಿಗೆ hyperloop ರೈಲು ತರಲು ಈಗಾಗಲೇ ಕರ್ನಾಟಕ ಸರ್ಕಾರ ಮತ್ತು ಕಂಪನಿಯ ನಡುವೆ ಮಾತುಕತೆ ನಡಿದಿದೆ. ಇದರೊಟ್ಟಿದೆ ಮುಂಬೈ-ಪುಣೆ ಹಾದಿಯಲ್ಲಿ hyperloop ರೈಲಿನ ಯೋಜನೆಗೆ ಮಹಾರಾಷ್ಟ್ರ ಸರ್ಕಾರ Virgin Hyperloop ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಮೂಲ ಸುದ್ದಿ: Virgin Hyperloop press Release