ಉತ್ತರ ಪ್ರದೇಶದ ಸರ್ಕಾರ ಮಾಡಿರುವ “Surveillance Platform Uttar Pradesh Covid-19” ಎಂಬ ಸಾಫ್ಟ್ ವೇರ್ ಅಗತ್ಯ ಸುರಕ್ಷತಾ ಕ್ರಮಗಳನ್ನುಕೈಗೊಳ್ಳದ ಕಾರಣ ಸುಮಾರು ೮೦ ಲಕ್ಷ ಜನರ ಮಾಹಿತಿ ಸೋರಿಕೆಯಾಗಿದೆ.
ಈ ಘಟನೆಯಲ್ಲಿ ಜನರ ಪೂರ್ತಿ ಹೆಸರು, ವಯಸ್ಸು, ಈಗಿನ ವಿಳಾಸ, ಮೊಬೈಲ್ ನಂಬರ್ ಗಳ ಮಾಹಿತಿ ಲಭ್ಯವಾಗಿದ್ದು, ಇದು ಹ್ಯಾಕಿಂಗ್ ಮತ್ತು ಫಿಷಿಂಗ್ ಮಾಡಲು ನೆರವು ನೀಡುತ್ತದೆ.
ಈ ರೀತಿ ಸಂಪೂರ್ಣ ಮಾಹಿತಿ ಸಿಗುವುದರಿಂದ, ಖದೀಮರು ಇದನ್ನು ಬಳಸಿ , ಬ್ಯಾಂಕ್ ಮತ್ತು ಇನ್ನಿತರ ಸೇವೆಗಳ ಹೆಸರಿನಲ್ಲಿ ಜನರಿಗೆ ಕರೆ ಮಾಡಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಬ್ಯಾಂಕ್ ಮಾಹಿತಿ ಕೇಳಲು ಸಹಕಾರಿಯಾಗುವುದರಿಂದ, ಬರುವ ದಿನಗಳಲ್ಲಿ ಜನರು ಜಾಗರೂಕತೆಯಿಂದ ಇಂತಹ ಕರೆಗಳಲ್ಲಿ ತಮ್ಮ ವ್ಯಯುಕ್ತಿಕ ಹಾಗೂ ಬ್ಯಾಂಕಿಂಗ್ ವಿವರಗಳನ್ನು ಹಚ್ಚಿಕೊಳ್ಳದಿರುವುದು ಉತ್ತಮ.
VPNMentor ಅವರ web scanner ಈ ಭದ್ರತಾ ಕೊರತೆಯನ್ನು ಆಗಸ್ಟ್ 1ರಂದು ಕಂಡು ಹಿಡಿದಿದ್ದು, ಆಗಸ್ಟ್ 9ರ ವರೆಗೆ ಎಲ್ಲಾ ಮಾಹಿತಿ ಸಂಗ್ರಹಿಸಿ, ಪರಿಶೀಲಿಸಿದ ನಂತರ, ಇಸ್ರೇಲ್ ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಉತ್ತರ ಪ್ರದೇಶದ ಸೈಬರ್ ಕ್ರೈಂ ಇಲಾಖೆಗೆ ಮಾಹಿತಿ ತಿಳಿಸಿದೆ.
ಸಪ್ಟೆಂಬರ್ 7ರಂದು CERT-IN (Computer Emergency Response Team)ಗೆ ಮಾಹಿತಿ ತಿಳಿದ ನಂತರ 10ನೇ ಸಪ್ಟೆಂಬರ್ ಗೆ ಈ ಲೋಪವನ್ನು ಸರಿಪಡಿಸಲಾಗಿದೆ.
ಈ ಹಿಂದೆ ಆಧಾರ್ ಕಾರ್ಡ್ ನ ಮಾಹಿತಿ ಕೂಡ ಇದೇ ರೀತಿ ಸೋರಿಕೆಯಾಗಿತ್ತು. ಇನ್ನಾದರೂ ಸರ್ಕಾರಿ ಇಲಾಖೆಗಳು ಬಳಕೆದಾರರ ಭದ್ರತೆಗೆ ಹೆಚ್ಚಿನ ಒತ್ತನ್ನು ನೀಡಬೇಕಿದೆ.