ಮೊಬೈಲ್ ಕ್ಯಾಮೆರಾವನ್ನು ವೆಬ್‌ಕ್ಯಾಮ್‌ನಂತೆ ಬಳಸುವುದು ಹೇಗೆ?

Share

ಬಹಳ ಸುಲಭವಾಗಿ ಸೆಟಪ್ ಮಾಡಬಹುದಾದಂತಹ ಉಚಿತವಾಗಿ ಲಭ್ಯವಿರುವ ತತ್ರಾಂಶಗಳಲ್ಲಿ “Dev47Apps” ನಿರ್ಮಿತ “DroidCam” ನಿಮ್ಮ ಹಳೆಯ ಅಥವ ಪ್ರಸ್ತುತ ಮೊಬೈಲ್ ಕ್ಯಾಮೆರಾವನ್ನು ವೆಬ್‌ಕ್ಯಾಮ್‌ ಆಗಿ ಬಳಸುವಂತೆ ಉಪಕಾರಿಯಾಗಿದೆ. 

ಇದು windows ಮತ್ತು linux PC/laptopನಲ್ಲಿ iOS/android ಫೋನಿಗೆ ವೈಫೈ ಅಥವಾ ಯುಎಸ್‌ಬಿ ಕೇಬಲ್ ಮೂಲಕ ಸಂಪರ್ಕಿಸಬಹುದಾಗಿದೆ. ಯುಎಸ್‌ಬಿಗಿಂತ ವೈಫೈನ ಮುಖಾಂತರ ಸಂಪರ್ಕಿಸುವುದು ಸರಳವಾಗಿದೆ.

ವಿಂಡೋಸ್‌ನೊಂದಿಗೆ ನಿಮ್ಮ ಫೋನ್ ಕ್ಯಾಮೆರಾ ಬಳಸಲು

  • ಮೊದಲು androidನ ಪ್ಲೇ ಸ್ಟೋರ್‌ / iOSನ ಆಪ್ ಸ್ಟೋರಿನಿಂದ DroidCam(ಡ್ರಾಯಿಡ್‌ಕ್ಯಾಮ್‌)ನ ಉಚಿತ ಆವೃತ್ತಿಯನ್ನು ಇನ್ಸ್ಟಾಲ್ ಮಾಡಿಕೊಳ್ಳಿ.
  • ನಿಮ್ಮ ಡೆಸ್ಕ್‌ಟಾಪ್‌ನಲ್ಲಿ DroidCamApp ಐಕಾನ್ ಅನ್ನು ನೋಡಬಹುದು. ಅದನ್ನು ತೆರೆಯಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. ನಿಮ್ಮ ಡೆಸ್ಕ್‌ಟಾಪ್ ಮತ್ತು ಫೋನ್ ಒಂದೇ ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಿ (ನಿಮ್ಮ ಡೆಸ್ಕ್‌ಟಾಪ್ ಈಥರ್ನೆಟ್ ಮೂಲಕ ಸಂಪರ್ಕಗೊಂಡಿದ್ದರು ಸಹ ಇದು ಕಾರ್ಯನಿರ್ವಹಿಸುತ್ತದೆ).
  • ಮೊಬೈಲ್ ಅಪ್ಲಿಕೇಶನ್‌ ತೆರೆದಾಗ ಗೋಚರಿಸುವ ವೈ-ಫೈ ಐಪಿ ಮತ್ತು ಡ್ರಾಯಿಡ್‌ಕ್ಯಾಮ್ ಪೋರ್ಟ್ ಸಂಖ್ಯೆಗಳನ್ನು ಪಿಸಿ ಕ್ಲೈಂಟ್‌ನಲ್ಲಿ ಕೊಟ್ಟಿರುವರುವ ಜಾಗದಲ್ಲಿ ನಮೂದಿಸಿ. ವೀಡಿಯೊ ಮತ್ತು ಆಡಿಯೋ ಎರಡು ಆಯ್ಕೆಯಾಗಿದೆಯೇ ಎಂದು ಖಚಿತಪಡಿಸಿಕೊಂಡು, ‘Start’ ಒತ್ತಿರಿ.
  • ಫೋನಿನಲ್ಲಿ ಅಪ್ಲಿಕೇಶನ್ ಕ್ಯಾಮೆರಾವನ್ನು ಪ್ರಾರಂಭಿಸಿ ಮತ್ತು ಅದೇ ಫೀಡ್ ಅನ್ನು ಪಿಸಿ ಕ್ಲೈಂಟ್‌ನಲ್ಲಿ ನೋಡಲು ಸಾಧ್ಯವಾಗುತ್ತದೆ

ವೀಡಿಯೊಕಾನ್ಫರೆನ್ಸಿಂಗ್ ಸಾಫ್ಟ್‌ವೇರ್‌ನೊಂದಿಗೆ ಕೆಲಸ ಮಾಡಲು ಈಗ ನೀವು ಯಾವಾಗಲೂ ಡ್ರಾಯಿಡ್‌ಕ್ಯಾಮ್ ಪಿಸಿ ಕ್ಲೈಂಟ್ ಮತ್ತು ಅಪ್ಲಿಕೇಶನ್ ಅನ್ನು ಮೊದಲು ಪ್ರಾರಂಭಿಸಬೇಕಾಗುತ್ತದೆ.

Rich result on Google's SERP when searching "google meet input setting"

ನಂತರ, ನಿಮ್ಮ ವೀಡಿಯೊಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಕ್ಯಾಮೆರಾ ಇನ್‌ಪುಟ್ ಅನ್ನು “DroidCam Source 2” ಅಥವಾ “DroidCam Source 3” ಗೆ ಮತ್ತು ಮೈಕ್ರೊಫೋನ್ ಇನ್‌ಪುಟ್ ಅನ್ನು “DroidCam Virtual Audio” ಗೆ ಬದಲಾಯಿಸಿ. ಆಗ ನಿಮ್ಮ ಫೋನ್‌ನ ಹಾರ್ಡ್‌ವೇರ್ ಅನ್ನು ಬಳಸಲು ಪ್ರಾರಂಭಿಸುತ್ತದೆ.

ನಾನು ವಯಕ್ತಿಕವಾಗಿ ಬಳಸಿ ಈ ಅಂಕಣವನ್ನು ಬರೆದಿದ್ದೇನೆ. ಕುದ್ದಾಗಿ ಗೂಗಲ್ನಲ್ಲಿ ಹುಡುಕಿದಾಗ ಬಹಳಷ್ಟು ಜನ DroidCamApp ಬಗ್ಗೆ ಬರೆದಿದ್ದನ್ನು ನೋಡಿ ಉಪಯೋಗಿಸಿದೆ. ಉಚಿತವಾಗಿ ಲಭ್ಯವಿರುವ ತತ್ರಾಂಶವು ಜಾಹಿರಾತುಗಳು ಬರುತ್ತದೆ ಅನ್ನುವುದೊಂದು ಬಿಟ್ಟು ಇನ್ನೆಲ್ಲವೂ ಚೆನ್ನಾಗಿದೆ.

ಬೇಕಿದ್ದಲ್ಲಿ ಇನ್ನಷ್ಟು ಆಯ್ಕೆಗಳೊಂದಿಗೆ “DroidCamX” ಅನ್ನು ಒಮ್ಮೆ ಪಾವತಿಸಿ ಬಳಸಬಹುದು. ಆದರೆ ವಿಡಿಯೋ ಕರೆಗಳಿಗೆ ಮಾತ್ರ ಉಪಯೋಗಿಸಲು ಉಚಿತ ಅಪ್ಲಿಕೇಶನ್ ಸಾಕಾಗುತ್ತದೆ.

ನಿಮ್ಮ laptop/PC ಯಲ್ಲಿರುವ ಕ್ಯಾಮೆರಾದ ಗುಣಮಟ್ಟಕ್ಕಿಂತ, ಮೊಬೈಲಿನದು ಚೆನ್ನಾಗಿರುವ ಕಾರಣ ನೀವು ಈ ತತ್ರಾಂಶವನ್ನು ಉಪಯೋಗಿಸಬಹುದು. ಕೊನೆಯಲ್ಲಿ ಇದು ತುಂಬಾ ಬ್ಯಾಟರಿ ತಿನ್ನುವುದರಿಂದ ಚಾರ್ಜ್ ಗೆ ಇಟ್ಟು ಅಥವಾ ಪವರ್‌ಬ್ಯಾಂಕ್ ಬಳಸಿ.