Under-Display ಕ್ಯಾಮೆರಾ ತಂತ್ರಜ್ಞಾನ

Share

ಮೊಬೈಲ್ ಸೆಲ್ಫಿ ಕ್ಯಾಮೆರಾ ಸ್ಥಾನ ಕಾಲಕ್ರಮೇಣ ಬದಲಾಗುತ್ತಲೇ ಬಂದಿದೆ. ಇದು ಪರದೆಯ ಅಳತೆಗೆ ನೇರವಾಗಿ ಪರಿಣಾಮ ಬೀಳುವುದು. ಹಾಗೆಯೇ ನಾವು ಅನುಭವಿಸುವ ದೃಶ್ಯಗಳು ಪರಿಪೂರ್ಣವಾಗಿ ಅಡಚಣೆಯಿಲ್ಲದೆ ಪೂರ್ಣ ಪರದೆಯಲ್ಲಿ ನೋಡಲು ಸಹ ಕಾರಣವಾಗುವುದು. ಪರದೆ ಹಿಂದಿನ ಕ್ಯಾಮೆರಾ ರಚನೆಯಲ್ಲಿ ಅದರದೇ ಆದ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸೆಲ್ಫಿ ಫೋಟೋಗಳು ಹಾಗು ಮಸೂರ ಇರುವ ಜಾಗದಲ್ಲಿ ಪ್ರದರ್ಶಿಸುವ ದೃಶ್ಯಗಳ ಗುಣಮಟ್ಟದಲ್ಲಿ ರಾಜಿಯಾಗಬೇಕಾಗುತ್ತದೆ.

ಆದರೆ ಶಿಯೋಮಿ ನಿರ್ಮಿಸಿರುವ ಮೂರನೆಯ ಆವೃತ್ತಿಯ ವಿನ್ಯಾಸದಲ್ಲಿ ಈಗಿರುವ ಸಾಂಪ್ರದಾಯಿಕ ಕ್ಯಾಮೆರಾ ಮತ್ತು ಪರದೆಯ ಗುಣಮಟ್ಟದಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ.

ಶಿಯೋಮಿ

ಹೊಸ ಪಿಕ್ಸೆಲ್ ಜೋಡಣೆಯಿಂದಾಗಿ ಈಗ ಉಪ-ಪಿಕ್ಸೆಲ್‌ಗಳ ಮದ್ಯೆಯಿರುವ ಜಾಗದಲ್ಲಿ ಬೆಳಕನ್ನು ಹಾದುಹೋಗವಂತೆ ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಫೋಟೋಗಳು ಸ್ಪಷ್ಟವಾಗಿ ಸರಿಯಾದ ಬಣ್ಣಗಳೊಂದಿಗೆ ಚಿತ್ರಿಸುತ್ತದೆ.

ಶಿಯೋಮಿ ಮೊಬೈಲ್ಗಾಗಿ ನೀವು ಮುಂದಿನ ವರ್ಷದವರೆಗೂ ಕಾಯಬೇಕಾಗುತ್ತದೆ. ಆದರೆ Under-Display ಕ್ಯಾಮೆರಾ ತಂತ್ರಜ್ಞಾನ ಹೊಂದಿದ ZTE’s Axon 20 5G ಮೊಬೈಲ್ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ.

ZTE Axon 20 5G