ಬರುವ ನವೆಂಬರ್ ನಲ್ಲಿ ನಡೆಯುಲಿರುವ ಅಮೇರಿಕದ ಚುನಾವಣೆಯ ಪ್ರಯುಕ್ತ, ಮುನ್ನೆಚ್ಚರಿಕಾ ಕ್ರಮವಾಗಿ ಟ್ವಿಟ್ಟರ್ ಪಾಸ್ವರ್ಡ್ ರಿಸೆಟ್(Password Reset) ಮಾಡಲು two factor authentication ಅನ್ನು ಕಡ್ಡಾಯ ಮಾಡಿದೆ.
ಇತ್ತೀಚಿಗೆ ನಡೆದ ಟ್ವಿಟ್ಟರ್ ಹ್ಯಾಕ್ಸ್ ದೆಸೆಯಿಂದ ಟ್ವಿಟ್ಟರ್ ಈ ಕ್ರಮವನ್ನುಕೈಗೊಂಡಿದ್ದು, ಇದರಿಂದ ಚುನಾವಣೆ ಹತ್ತಿರ ಬಂದಂತೆ, ರಾಜಕೀಯ ಮತ್ತು ಸರ್ಕಾರಿ ಸಂಬಂಧಿತ ಖಾತೆಗಳಿಂದ ಸುಳ್ಳು ಸುದ್ದಿಗಳು ಹಬ್ಬುವುದನ್ನು ತಡೆಯಬಹುದಾಗಿದೆ.
ಇದಲ್ಲದೇ ಚುನಾವಣೆಗೆ ಬಳಸುವ ಎಲ್ಲಾ ಟ್ವಿಟ್ಟರ್ ಖಾತೆಗಳಲ್ಲಿ ಸಂಶಯಾಸ್ಪದ ಚಟುವಟಿಕೆ ಕಂಡು ಬಂದಲ್ಲಿ ಸ್ವತಃ ಟ್ವಿಟ್ಟರ್ ಆ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ನಂತರ ವಿಚಾರಣೆ ನಡೆಸುವ ಕ್ರಮವನ್ನು ಕೂಡ ಜಾರಿಗೊಳಿಸಿದೆ.
ನೀವು ಕೂಡ two factor authentication ಅನ್ನು ನಿಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಬಳಸುವುದರಿಂದ ನಿಮ್ಮ ಖಾತೆಗಳು ಹ್ಯಾಕ್ ಆಗುವುದನ್ನುತಡೆಗಟ್ಟಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿ.
1 Response
[…] ಚುನಾವಣೆಯಲ್ಲಿ ಇದನ್ನು ತಪ್ಪಿಸಲು ಟ್ವಿಟ್ಟರ್ ಹಲವು ಭದ್ರತಾ ವೈಶಿಷ್ಟ್ಯಗಳನ್…. ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್ ನಿಮ್ಮ […]