Photo by CHUTTERSNAP on Unsplash
ಹೌದು ಉತ್ತರ ಭಾರತದಲ್ಲಿ ಪೈರು ಮತ್ತು ಗೋಧಿ ಕಳೆಯ ಸುಡುವಿಕೆಯಿಂದ ಕಾರಣವಾಗುವ ವಾಯುಮಾಲಿನ್ಯಕ್ಕೆ ಒಂದು ಪರಿಹಾರ ದೊರೆತಂತಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ(IISc) ಸಂಶೋಧಕರು, ಕಳೆಯಿಂದ ಎಥಾನೋಲ್(Ethanol) ಉತ್ಪಾದಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ.
Deccan Herald ವರದಿಯ ಪ್ರಕಾರ ಟಿ.ವಿ. ರಾಮಚಂದ್ರ ಮತ್ತು ಅವರಡಿಯಲ್ಲಿ ಡಾಕ್ಟರೇಟ್ ಪಡೆಯಲು ಅಭ್ಯಸಿಸುತ್ತಿದ್ದ ವಿಧ್ಯಾರ್ಥಿನಿ ದೀಪ್ತಿ ಹೆಬ್ಬಾಳೆ, ತಮ್ಮ ಸಂಶೋಧನೆಯ ಫಲಿತಾಂಶವನ್ನು ಶಕ್ತಿ ಮತ್ತು ಗದ್ದೆ ಸಂಘದ(energy wetland group) 12ನೇ ದ್ವೈವಾರ್ಷಿಕ ಸಭೆಯಲ್ಲಿ ಹೊರಹಾಕಿದ್ದಾರೆ.
ಪ್ರತಿ 100 ಕೆ.ಜಿ. ಪೈರಿನ ಕಳೆಯಿಂದ 36 ಲೀಟರ್ ಹಾಗು ಅದೇ ಪ್ರಮಾಣದ ಗೋಧಿಯ ಕಳೆಯಿಂದ 53 ಲೀಟರ್ ಎಥಾನೋಲ್ ಉತ್ಪಾದಿಸಬಹುದೆಂದು ದೀಪ್ತಿ ತಿಳಿಸಿದ್ದಾರೆ. ಕಳೆಯ ಅತಿಕಡಿಮೆ ಪ್ರಮಾಣವನ್ನು ಮೇವಾಗಿ ಬಳಸಲಾಗುತ್ತಿದ್ದು ಉಳಿದ ಪ್ರಮಾಣವನ್ನು ಎಥಾನೋಲ್ ನಂತಹ ಜೈವಿಕ ಇಂಧನ ಉತ್ಪಾದನೆಯಲ್ಲಿ ಬಳಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಎಥಾನೋಲ್ ಹಲವಾರು ಕ್ಷೇತ್ರದಲ್ಲಿ ಉಪಯುಕ್ತವಾಗಿದ್ದು, ಇಂಧನ ಕ್ಷೇತ್ರದಲ್ಲಿ ಹೆಚ್ಚು ಬಳಸಲಾಗುತ್ತಿದೆ. 2019 ರಲ್ಲಿ ಭಾರತ 116 ಮಿಲಿಯನ್ ಟನ್ ನಷ್ಟು ಭತ್ತ ಮತ್ತು 103 ಮಿಲಿಯನ್ ಟನ್ ನಷ್ಟು ಗೋದಿ ಬೆಳೆಯುತ್ತಿದ್ದು, ಪ್ರತಿ ಕೆ.ಜಿ. ಭತ್ತ/ಗೋಧಿಗೆ 1.5 ಕೆ.ಜಿ. ಕಳೆ ಉಳಿಯುತ್ತದೆ.