ಟೈಟನ್ ಹಾಗು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಗೂಡಿ ಭಾರತದ ಮೊದಲ ಕಾಂಟಾಕ್ಟ್ ಲೆಸ್ ಪೇಮೆಂಟ್, “ಟೈಟನ್ ಪೆ ಸೊಲ್ಯೂಷನ್”(titan pay solution) ಹೊಂದಿರುವ 5 ಬಗೆಯ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಬಳಕೆದಾರರು ಕೈಗಡಿಯಾರವನ್ನು ಕಾಂಟಾಕ್ಟ್ ಲೆಸ್ ಪೇಮೆಂಟ್ ಯಂತ್ರಗಳ ಮೇಲೆ ಇಡುವ ಮೂಲಕ 2000 ರೂ ಗಳ ವರೆಗೆ ಯಾವುದೇ ಗುಪ್ತಪದ (password) ಅಗತ್ಯವಿಲ್ಲದೆ ಹಣ ಪಾವತಿ ಮಾಡಬಹುದಾಗಿದೆ .
2000ಕ್ಕೂ ಹೆಚ್ಚಿನ ವ್ಯವಹಾರಕ್ಕೆ ಗುಪ್ತಪದ ಅಗತ್ಯವಿದ್ದು, ಟೈಟನ್ ಪೆ ಸೊಲ್ಯೂಷನ್ ಕೇವಲ ಭಾರತೀಯ ಸ್ಟೇಟ್ ಬ್ಯಾಂಕ್ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಟೈಟನ್ ಪೆ ಹೊಂದಿರುವ ಪುರುಷರ 3 ಬಗೆಯ ಮತ್ತು ಮಹಿಳೆಯರ 2 ಬಗೆಯ ಕೈಗಡಿಯಾರಗಳು ಮಾರುಕಟ್ಟೆಯಲ್ಲಿವೆ.
ಕೈಗಡಿಯಾರದ ಪಟ್ಟಿಯಲ್ಲಿ Near Field Communication (NFC) ಅಳವಡಿಸಲಾಗಿದ್ದು. ಪುರುಷರ ಕೈಗಡಿಯಾರಗಳು 2995, 3995 ಮತ್ತು 5995 ರೂ ದರಗಳಲ್ಲಿ ಲಭ್ಯವಿವೆ. ಕೈಗಡಿಯಾರಗಳು ವೃತ್ತಾಕಾರದಲ್ಲಿದ್ದು ಕಪ್ಪು ಮತ್ತು ಕಂದು ಬಣ್ಣದ ಪಟ್ಟಿಗಳಲ್ಲಿ ಆಯ್ದುಕೊಳ್ಳಬಹುದು. ಮಹಿಳೆಯರ ಕೈಗಡಿಯಾರಗಳು 4395 ಮತ್ತು 3895 ರೂ.ಗೆ ಲಭ್ಯವಿವೆ.
ಕೈಗಡಿಯಾರಗಳನ್ನು ಭಾರತದ ಟೈಟನ್ ವೆಬ್ಸೈಟ್ ನಲ್ಲಿ ಖರೀದಿಸಬಹುದಾಗಿದೆ. ನೀವು ಈ ಕೈಗಡಿಯಾರಗಳನ್ನು ಕೊಳ್ಳುವಿರಾ? ನಿಮ್ಮಉತ್ತರಗಳನ್ನು ಕಾಮೆಂಟ್ ಪೆಟ್ಟಿಗೆಯಲ್ಲಿ ತಿಳಿಸಿ .