2018-19 ರಲ್ಲಿ ಐ ಐ ಟಿ ಮದ್ರಾಸ್ ನ ( IIT madras ) ವಿದ್ಯಾರ್ಥಿಗಳು ಹಾಗು ಪ್ರಾದ್ಯಾಪಕರು ಭಾರತದ ಮೊದಲ ಮೈಕ್ರೋಪ್ರೊಸೆಸರ್ ‘ಶಕ್ತಿ’ಯನ್ನು ವಿನ್ಯಾಸಗೊಳಿಸಿದ್ದರು . ಶಕ್ತಿ ಇಸ್ರೋನಲ್ಲಿ ವಿನ್ಯಾಸನಗೊಂಡಿರುವ ಮೈಕ್ರೋಚಿಪ್(microchip) ಬಳಸಿ ನಿರ್ಮಿಸಲಾಗಿದೆ . ಶಕ್ತಿ RISC -V ISA(Instruction Set Architecture) ಹೊಂದಿದ್ದು 180nm ಟೆಕ್ನಾಲಾಜಿ ಬಳಸಲಾಗಿದೆ. RISC -V ISA open source ಆಗಿದೆ. ಅಂದರೆ RISC-V ISA ಬಳಸಲು ಯಾವುದೇ ಶುಲ್ಕ ಪಾವತಿಸುವ ಅವಶ್ಯಕತೆ ಇಲ್ಲ. ‘ಶಕ್ತಿ’ ಮೈಕ್ರೋಪ್ರೊಸೆಸರ್ಗಳು ಅನೇಕ ವಿಧಗಳಲ್ಲಿವೆ. ಹೆಚ್ಚಿನ ಮಾಹಿತಿಗೆ ಶಕ್ತಿ ವೆಬ್ಸೈಟ್ ಗೆ ಭೇಟಿ ಕೊಡಿ.
ಪ್ರಧಾನಿ ಮೋದಿಯವರ “ಸ್ವಾವಲಂಬಿ ಭಾರತ” ಕರೆಗೆ ಓಗೊಟ್ಟು, ಭಾರತ hardware computing ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬೇಕೆಂಬ ಉದ್ದೇಶದಿಂದ ಐ ಐ ಟಿ ಮದ್ರಾಸ್, C-DAC, XILINX ಹಾಗೂ CoreEL ಭಾರತ ಸರ್ಕಾರದ ಜೊತೆಗೂಡಿ ಸ್ವದೇಶಿ ಮೈಕ್ರೋಪ್ರೊಸೆಸರ್ ಸ್ಪರ್ಧೆ ಏರ್ಪಡಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಪ್ರಾಜೆಕ್ಟ್ ಐಡಿಯಾಗಳನ್ನು ಮುಂದಿಡಬೇಕು. ಆಯ್ಕೆಗೊಂಡ 100 ತಂಡಗಳು ಸೆಮಿಫೈನಲ್ ಹಂತ ತಲುಪಲಿದ್ದು, ತಮ್ಮ ಪ್ರಾಜೆಕ್ಟ್ ಅಭಿವೃದ್ಧಿ ಪಡಿಸಲು ಶಕ್ತಿ ಪ್ರೊಸೆಸರ್ ಗಳು ಹಾಗು FPGA ಬೋರ್ಡುಗಳ ಜೊತೆಗೆ ತಲ 1ಕೋಟಿ ರೂ. ದೊರೆಯಲಿದೆ. ಫೈನಲ್ ಹಂತ ತಲುಪಿದ 25 ತಂಡಗಳಿಗೆ ಪ್ರೊಜೆಕ್ಟ್ ಮುಂದುವರಿಸಲು ತಲ 1 ಕೋಟಿ ರೂ ದೊರೆಯಲಿದೆ. ಕೊನೆಯಹಂತದಲ್ಲಿ ಆಯ್ಕೆಗೊಂಡ 10 ತಂಡಗಳಿಗೆ ತಮ್ಮ ಪ್ರಾಜೆಕ್ಟ್ ಕಾರ್ಯ ರೂಪಕ್ಕ್ಕೆತರಲು 1 ವರ್ಷಗಳ ಕಾಲ ಕಾಲಾವಕಾಶ ದೊರೆಯಲಿದ್ದು ತಲಾ 2.5ಕೋಟಿ ಸಹಾಯ ಧನ ಕೂಡ ಸಿಗಲಿದೆ. ಕೊನೆ ಹಂತ ತಲುಪಿದ ತಂಡಗಳಿಗೆ ಕಛೇರಿ ವ್ಯವಸ್ಥೆ ಕೂಡ ಕೊಡಲಾಗುವುದು.
ಶಕ್ತಿ ಪ್ರೊಸೆಸರ್ ಗಳ ಮೂಲಕ ಭಾರತ hardware computing ಕ್ಷೇತ್ರದಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಇದನ್ನು ಪೋಷಿಸಿ ಮುಂದಿನ ಹಂತಕ್ಕೆ ಒಯ್ಯುವುದು ಸರ್ಕಾರ ಹಾಗು ಯುವ ಜನತೆಯ ಮೇಲೆ ಅವಲಂಬಿತವಾಗಿದೆ. ಪ್ರಾಜೆಕ್ಟ್ ಐಡಿಯಾಗಳನ್ನು ಸಲ್ಲಿಸಲು ಕಡೆಯ ದಿನಾಂಕ ಸೆಪ್ಟೆಂಬರ್ 20. ಶಕ್ತಿ ಪ್ರೊಸೆಸರ್ಗಳು ಹಾಗು ಸ್ವದೇಶಿ ಮೈಕ್ರೋಪ್ರೊಸೆಸರ್ ಸ್ಪರ್ಧೆಯ ಸಂಪೂರ್ಣ ಮಾಹಿತಿಗಾಗಿ ಲಿಂಕ್ ಮೇಲೆ ಕ್ಲಿಕ್ಕಿಸಿ.