Starlink ನ ಇಂಟರ್ನೆಟ್ ಸೇವೆ ಈಗ ಲಭ್ಯ!

Share

Space X ನ starlink ಯೋಜನೆಯಡಿಯಲ್ಲಿ ಈಗಾಗಲೇ 700ಕ್ಕೂ ಹೆಚ್ಚು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದು, ಭೂಮಿಯ ಸುತ್ತಲೂ ನಿರ್ದಿಷ್ಟ ಕಕ್ಷೆಯಲ್ಲಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಸುಮಾರು 12000 ಉಪಗ್ರಹಗಳು ಭೂಮಿಯ ಕಕ್ಷೆಯಲ್ಲಿದ್ದು ಪ್ರತಿ ಮೂಲೆಗೂ ವೇಗದ ಇಂಟರ್ನೆಟ್ ಸೇವೆ ಕಲ್ಪಿಸುವುದು ಈ ಯೋಜನೆಯ ಗುರಿಯಾಗಿದೆ.

ಈಗಾಗಲೇ ಕಳಿಸಲಾದ ಉಪಗ್ರಹಗಳ ಬಳಸಿ ಕಂಪನಿಯು ಉತ್ತರ ಅಮೇರಿಕಾ ಮತ್ತು ಕೆನಡಾದ ಕೆಲವು ಭಾಗಗಳಲ್ಲಿ ಟೆಸ್ಟಿಂಗ್ ಅಂಗವಾಗಿ internet ಸೇವೆ ನೀಡಲು ನಿರ್ಧರಿಸಿದೆ. “Better Than Nothing Beta” ಹೆಸರಿನಡಿಯಲ್ಲಿ ಟೆಸ್ಟಿಂಗ್ ಆರಂಭವಾಗಿದ್ದು ಅಮೆರಿಕನ್ನರಿಗೆ ಭಾಗವಹಿಸಲು ಇಮೇಲ್ ಮೂಲಕ ಆಹ್ವಾನಿಸಲಾಗಿದ್ದು, CNBCಯ ವರದಿಯ ಪ್ರಕಾರ 150Mbps ವೇಗದ ಇಂಟರ್ನೆಟ್ ಕಲ್ಪಿಸುವ, Starlink ನ ಸಂಪೂರ್ಣ Kit 499 ಡಾಲರ್ ಮತ್ತು ಪ್ರತಿ ತಿಂಗಳ ಸೇವೆಗೆ 99 ಡಾಲರ್ ಗೆ ಲಭ್ಯವಿರಲಿದೆ ಎಂದು ತಿಳಿಸಲಾಗಿದೆ.

ಇನ್ನೂ ಹೆಚ್ಚು ಮಂದಿಗೆ ಟೆಸ್ಟಿಂಗ್ ಸೇವೆಯಲ್ಲಿ ಭಾಗವಹಿಸಲು ಅಹ್ವಾನ ನೀಡಲಾಗುವುದೆಂದು ಎಲಾನ್ ಮಸ್ಕ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈವರೆಗೆ ಕೇವಲ ಅಮೆರಿಕಾ ಮಾತ್ರ Starlinkನ ಸೇವೆಗೆ ಒಪ್ಪಿಗೆ ಸೂಚಿಸಿತ್ತು ಆದರೆ ಈಗ ಕೆನಡಾ ಕೂಡ ಜೊತೆಗೂಡಿದ್ದು ಈ ಬಗ್ಗೆ ಅಧಿಕಾರಿಗಳು tweet ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

2020ರ ಕೊನೆಯಲ್ಲಿ ಅಮೇರಿಕಾ ಮತ್ತು ಕೆನಡಾ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಇಂಟರ್ನೆಟ್ ಸೇವೆ ಲಭಿಸಲಿದ್ದು 2021ರ ಅಂತ್ಯಕ್ಕೆ ವಿಶ್ವದೆಲ್ಲೆಡೆ ದೊರೆಯಲಿದೆ ಎಂದು starlink ತಿಳಿಸಿದೆ.ನಿಮ್ಮ ಪ್ರದೇಶದಲ್ಲಿ Starlink ನ ಇಂಟರ್ನೆಟ್ ಲಭ್ಯವಾಗುವ ಬಗ್ಗೆ ಅಪ್ಡೇಟ್ ಪಡೆಯಲು Starlink ಗೆ ಭೇಟಿ ಕೊಡಿ.