ಸ್ಪೇಸ್ಎಕ್ಸ್ ನ ಸ್ಟಾರ್ ಲಿಂಕ್ ಷೇರುಗಳು ಶೀಘ್ರದಲ್ಲಿ ಸಾರ್ವಜನಿಕ ಮಾರುಕಟ್ಟೆಗೆ(Space X starlink has plans for IPO)

Share

ಸ್ಪೇಸ್ಎಕ್ಸ್ ನ ಉಪ ಕಂಪನಿ ಸ್ಟಾರ್ ಲಿಂಕ್ ಬಾಹ್ಯಾಕಾಶಕ್ಕೆ ಹಲವಾರು ಉಪಗ್ರಹಗಳನ್ನು ನಿರ್ಧಿಷ್ಟ ಕಕ್ಷೆಗಳಲ್ಲಿ ಇರಿಸುವ ಮೂಲಕ ಭೂಮಿಯ ಪ್ರತಿ ಮೂಲೆಯವರೆಗೂ ಅತಿವೇಗದ ಇಂಟರ್ನೆಟ್ ಕಲ್ಪಿಸುವ ಕನಸು ಹೊಂದಿದೆ. ಈಗಾಗಲೇ ಕಂಪನಿಯು ಈ ದೆಸೆಯಲ್ಲಿ ಕಾರ್ಯ ನಡೆಸಿದ್ದು, ಈವರೆಗೆ 775 ಉಪಗ್ರಹಗಳನ್ನು ಭೂಮಿಯ ಕಕ್ಷೆಗೆ ಕಳಿಸಿದೆ.

ಟ್ವಿಟ್ಟರ್ ನಲ್ಲಿ ವ್ಯಕ್ತಿಯೊಬ್ಬ ಸ್ಟಾರ್ ಲಿಂಕ್ ನ ಷೇರುಗಳು ಸಾರ್ವಜನಿಕರಿಗೆ ಲಭ್ಯವಾಗಿಸುವ ಬಗ್ಗೆ (ಐ. ಪಿ. ಓ.) ಪ್ರಶ್ನಿಸಿದಾಗ ಕಂಪನಿಯ ಕಟ್ಟುಗ ಇಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು, ಷೇರುಗಳನ್ನು ಸಾರ್ವಜನಿಕರಿಗೆ ಸಧ್ಯಕ್ಕೆ ಬಿಡಿಲಾಗುವುದಿಲ್ಲ. ಕಂಪನಿ ಆರಂಭಿಕ ಹಂತದಲ್ಲಿರುವುದರಿಂದ ಕೊಳ್ಳಲು ಸಾರ್ವಜನಿಕರು ಹಿಂಜರಿಯಬಹುದು. ಯೋಜನೆಗಳು ಒಂದು ಹಂತ ತಲುಪಿ, ಸ್ಥಿರವಾದ ಬೆಳವಣಿಗೆ ಕಾಣುವಂತಾದಾಗ ಮುಂಬರುವ ವರ್ಷಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವುದು ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ಸ್ಟಾರ್ ಲಿಂಕ್ ನ ಷೇರುಗಳು ಸಾರ್ವಜನಿಕ ಲಭ್ಯವಾದಾಗ ನೀವು ಕೊಳ್ಳುವಿರಾ? ಕಾಮೆಂಟ್ ಪೆಟ್ಟಿಗೆಯಲ್ಲಿ ತಿಳಿಸಿ.