ಡಿಸೆಂಬರ್ 23 ವಿಶ್ವ ರೈತರ ದಿನದಂದು ಸೊನಾಲಿಕ ಕಂಪನಿಯು ಭಾರತದ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಅನ್ನು ಅನಾವರಣಗೊಳಿಸಿತು. ಟ್ರ್ಯಾಕ್ಟರ್ ಗೆ ಸೊನಾಲಿಕ ಟೈಗರ್ ಎಲೆಕ್ಟ್ರಿಕ್ ಎಂದು ನಾಮಕರಣ ಮಾಡಲಾಗಿದ್ದು ನೀವು ಇದನ್ನು ಕೊಳ್ಳಲು 5.99 ಲಕ್ಷ ನೀಡಬೇಕಾಗುತ್ತದೆ.
ಟೈಗರ್ ಎಲೆಕ್ಟ್ರಿಕ್ 35HP ಟ್ರ್ಯಾಕ್ಟರ್ ಗಳ ವಿಭಾಗಕ್ಕೆ ಸೇರಲಿದ್ದು 11 ಕಿಲೋ ವಾಟ್ ನ induction Motorನ ಸಹಾಯದಿಂದ ಕಾರ್ಯವಹಿಸಲಿದೆ. 25.5 KWHನ ಸಾಮರ್ಥ್ಯ ಹೊಂದಿರುವ ಲಿಥಿಯಂ ion ಬ್ಯಾಟರಿ ಹೊಂದಿದೆ. ಕಂಪನಿ ಹೇಳುವ ಪ್ರಕಾರ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಲು ಮನೆಯ ವಿದ್ಯುತ್ತಿನಿಂದ 10 ಗಂಟೆ ಮತ್ತು fast charging system ಬಳಸಿದರೆ 4 ಗಂಟೆಗಳ ಕಾಲ ತೆಗೆದುಕೊಳ್ಳಲಿದೆ.
ಟೈಗರ್ ಎಲೆಕ್ಟ್ರಿಕ್ ಒಂದು ಸಂಪೂರ್ಣ ಚಾರ್ಜ್ ನಲ್ಲಿ 2 ಟನ್ ತೂಕದ trollyಯೊಂದಿಗೆ 8 ಗಂಟೆಗಳ ಕಾಲ ಸುಲಭವಾಗಿ ಕಾರ್ಯ ನಿರ್ವಹಿಸಬಲ್ಲದು ಹಾಗು ಗರಿಷ್ಟ ವೇಗ ಗಂಟೆಗೆ 24.9ಕಿಮೀ.
ಈ ಟ್ರ್ಯಾಕ್ಟರ್ ಭಾರತದಲ್ಲೇ ಉತ್ಪಾದಿಸಿದ್ದಾದರೂ ವಿನ್ಯಾಸ ಮಾತ್ರ ಯುರೊಪ್ ನದ್ದು. ಕಂಪನಿಯು ಇನ್ನು ಹೆಚ್ಚಿನ ಸಾಮರ್ಥ್ಯವಿರುವ ಟ್ರ್ಯಾಕ್ಟರ್ ಗಳ ಬಗ್ಗೆ ಸಂಶೋಧನೆ ನಡೆಸಿದ್ದು ಮುಂಬರುವ ದಿನಗಳಲ್ಲಿ ದೊಡ್ಡ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಗಳು ಹೊರಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.