ಸಿಲ್ವರ್ ಲೇಕ್ ನಿಂದ ರಿಲೈನ್ಸ್ ರಿಟೈಲ್ ವೆಂಚರ್ಸ್ ನಲ್ಲಿ 1 ಬಿಲಿಯನ್ ಹೂಡಿಕೆ.(silver lake to invest 1 Billion USD in Reliance retail ventures)

Share

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(RIL)ನ ಭಾಗವಾಗಿರುವ ರಿಲೈನ್ಸ್ ರಿಟೈಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ ಅಮೆರಿಕಾದ ಸಿಲ್ವರ್ ಲೇಕ್ ಕಂಪನಿಯು ಬರೋಬ್ಬರಿ 1 ಬಿಲಿಯನ್ ಡಾಲರ್ ( ಸುಮಾರು 7500 ಕೋಟಿ ರೂ ) ಹೂಡಲಿದೆ ಎಂದು RIL ಹೇಳಿದೆ. ಈ ಹೂಡಿಕೆ ಸಿಲ್ವರ್ ಲೇಕ್ ಗೆ RIL ನ 1.75% ಷೇರು ದೊರಕಿಸಿಕೊಡಲಿದೆ .

ಸಿಲ್ವರ್ ಲೇಕ್ ಈ ಹಿಂದೆ ರಿಲಯನ್ಸ್ ನ ಡಿಜಿಟಲ್ ಪ್ಲಾಟ್ಫಾರ್ಮ್ ಜಿಯೊನಲ್ಲಿ (JIO) ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ 1.35 ಬಿಲಿಯನ್ ಡಾಲರ್ ಹೂಡಿತ್ತು. ಸಿಲ್ವರ್ ಲೇಕ್ ಅಲ್ಲದೇ ಫೇಸ್ಬುಕ್ , ಕ್ವಾಲ್ಕಾಮ್, ಇಂಟೆಲ್ ಮತ್ತು ಗೂಗಲ್ RIL ಮೇಲೆ ಹೂಡಿಕೆ ಹಾಕಿವೆ. ಈ ಹಿನ್ನೆಲೆಯಲ್ಲಿ ರಿಲಯನ್ಸ್ ನ ಷೇರು ದರ ನಿನ್ನೆಗಿಂತ ಶೇಕಡಾ 1.5 % ನಷ್ಟು ಹೆಚ್ಚಾಗಿದೆ. ಈ ಹೊತ್ತಿಗೆ ರಿಲ್ಯಾನ್ಸ್ ನ 1 ಷೇರಿನ ದರ 2,123.35 ರೂ.

ರಿಲಯನ್ಸ್ ನಿಧಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ಕಾಲಿಡುತ್ತಿದ್ದು ಭಾರತದ ಆನ್ಲೈನ್ ಶಾಪಿಂಗ್ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಯತ್ನಿಸುತ್ತಿದೆ .