ಬೇರೊಂದು ಬಳಕೆದಾರನ ಟ್ವೀಟ್, ರಿಟ್ವೀಟ್ ಮಾಡದೆ ಟ್ವಿಟರ್ ವೀಡಿಯೊನ್ನು ಪೋಸ್ಟ್ ಮಾಡುವುದು ಸಾಧ್ಯ. ಮಾಡುವ ಬಗೆ ಸುಲಭವಾಗಿದ್ದು, ಆದರೆ ಅಂಡ್ರಾಯ್ಡ್ ಅಥವಾ ಐಫೋನ್ ಬಳಸುವಾಗ ಸ್ವಲ್ಪ ಬೇರೆ ರೀತಿ ಅನುಸರಿಸಬೇಕು. ಇನ್ನು ಟ್ವಿಟರ್ ಡೆಸ್ಕ್‌ಟಾಪ್ ಆವೃತ್ತಿಯನ್ನು ಬಳಸಿ ನೇರವಾಗಿ ಇನ್ನೊಬ್ಬರ ವೀಡಿಯೊನ್ನು ಟ್ವೀಟ್ ಮಾಡುವ ಸುಲಭ ಮಾರ್ಗವೂ ಇದೆ.

ಅಂಡ್ರಾಯ್ಡ್ ಬಳಕೆದಾರರು ಅನುಸರಿಸಬೇಕಾದ ಬಗೆ:
ಹಂತ 1: ನೀವು ಬಯಸುವ ಟ್ವೀಟ್ ಲಿಂಕ್ ಅನ್ನು ನಕಲಿ ಮಾಡಿ

ಹಂತ 2: ಟ್ವೀಟ್ ಲಿಂಕ್ ಅನ್ನು ಪೇಸ್ಟ್ ಮಾಡಿ ಮತ್ತು ಟ್ವೀಟ್ URLನ ಕೊನೆಯಲ್ಲಿ /video/1 ಅನ್ನು ಸೇರಿಸಿ. ಸೇರಿಸುವ ಮೊದಲು URLನಲ್ಲಿ ಬೇಡವಾದುದನ್ನು ತೆಗೆಯಿರಿ.

ಹಂತ 3: ಟ್ವೀಟ್ URL ಜೊತೆಗೆ “/video/1” ಸೇರಿಸಿದರೆ, ರಿಟ್ವೀಟ್ ಮಾಡದೆ ಟ್ವಿಟ್ಟರ್ ವೀಡಿಯೊನ್ನು ಹಂಚಿಕೊಳ್ಳಲು ಸಾಧ್ಯ

ಡೆಸ್ಕ್ಟಾಪ್ ಕಂಪ್ಯೂಟರ್ ನಲ್ಲಿ ಅನುಸರಿಸಬೇಕಾದ ಬಗೆ:
ಹಂತ 1: ನಿಮ್ಮ PCನಲ್ಲಿ ಬ್ರೌಸರ್ ತೆರೆದು, twitter.com ಗೆ ಹೋಗಿ
ಹಂತ 2: ನೀವು ಬಯಸುವ ವೀಡಿಯೊ ಇರುವ ಟ್ವೀಟ್ ಗೆ ಹೋಗಿ, ಟ್ವೀಟ್ ನ ಬಲಗಡೆಯಲ್ಲಿರುವ ಡ್ರಾಪ್ ಡೌನ್ ಬಟನ್ ಕ್ಲಿಕ್ ಮಾಡಿ

ಹಂತ 3: “Embed Tweet” ಮೇಲೆ ಕ್ಲಿಕ್ ಮಾಡಿ

ಹಂತ 4: “Copy Code” ಮೇಲೆ ಕ್ಲಿಕ್ ಮಾಡಿ, ನೀವು ನಕಲಿಸಿದನ್ನು ನೋಟ್ ಅಥವಾ ಯಾವುದೇ ಟೆಕ್ಸ್ಟ್ ಎಡಿಟರ್ ನಲ್ಲಿ ಪೇಸ್ಟ್ ಮಾಡಿ, ಅದರಿಂದ ನಿಮಗೆ ಬೇಕಾದ URL ಅನ್ನು ಹುಡುಕಿರಿ

ಐಫೋನ್ ಬಳಕೆದಾರರು ಅನುಸರಿಸಬೇಕಾದ ಬಗೆ:
ಹಂತ 1: ನೀವು ಬಯಸುವ ವೀಡಿಯೊನ್ನು ಹುಡುಕಿ, ವೀಡಿಯೊದ ಪ್ಲೇ ಬಟನ್ ಮೇಲೆ ಹೊತ್ತಿಡಿಯಬೇಕು. ಇದು “Tweet video” ಅಥವಾ “Share Via.” ಎಂಬ ಆಯ್ಕೆಗಳನ್ನು ಒಳಗೊಂಡ ಸೆಟ್ಟಿಂಗ್ಸ್ ಮೆನುವನ್ನು ತೆರೆಯುತ್ತದೆ.

ಹಂತ 2: Tweet video ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರಿಂದ, ಹೊಸ ಟ್ವೀಟ್ ಸಂದೇಶದಲ್ಲಿ ಟ್ವಿಟರ್ URL ಬರುತ್ತದೆ. ಹಾಕಲ್ಪಟ್ಟಿರುವ URL ಕೊನೆಯಲ್ಲಿ “/video/1” ಅನ್ನು, “” ಬಳಸದೆ ಸೇರಿಸಿ ಟ್ವೀಟ್ ಮಾಡಿ.
ಈಗ ನೀವು ಹೇಳಬೇಕಾದುದನ್ನು ರಚಿಸಿ, ಕೊನೆಯಲ್ಲಿ URL ಅನ್ನು ಪೇಸ್ಟ್ ಮಾಡಿ ಟ್ವೀಟಿಸಿದರೆ, ಬೇರೆಯವರ ವೀಡಿಯೊವನ್ನು ನೀವು ಹಂಚಿಕೊಳ್ಳಬಹುದಾಗಿದೆ.
ಮೂಲ: https://medium.com/@AndrewLeeReal/one-important-twitter-tip-you-should-know-in-2018-d9d4e62371e6