Samsung ಕಂಪನಿಯು ತನ್ನ ಪ್ರಮುಖ ಮೊಬೈಲ್ಗಳಾದ Galaxy S ಹಾಗು Note ಅವತರಣಿಕೆಯಲ್ಲಿ ದೇಶದ ಆಧಾರದ ಮೇಲೆ ಎರೆಡೆರಡು ರೀತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತದೆ. ಪ್ರಪಂಚದಲ್ಲಿ ಮೊಬೈಲ್ ತಯಾರಿಕ ಕಂಪನಿಗಳಾದ Apple ಮತ್ತು Huawei ಬಿಟ್ಟರೆ, ತನ್ನ ಶ್ರೇಣಿಗಳ ಅನುಸಾರ System on Chip(SoC)ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತದಲ್ಲಿ ಲಭ್ಯವಿರುವ ಮಾದರಿಯಲ್ಲಿ Exynos ಚಿಪ್ಗಳು ಕಾರ್ಯನಿರ್ವಹಿಸುತ್ತಿದೆ. ಆದರೆ ಇದೇ ಮಾದರಿಯನ್ನು ನಾರ್ತ್ ಅಮೇರಿಕಾ, ಚೈನಾ ಮತ್ತು ಇನ್ನು ಕೆಲವು ಪ್ರದೇಶದಲ್ಲಿ Qualcommನ ಪ್ರಮುಖ Snapdragon ಚಿಪ್ಗಳನ್ನೊಳಗೊಂಡಿರುವ ಮೊಬೈಲ್ಗಳನ್ನು ಮಾರಾಟ ಮಾಡುತ್ತಿದೆ.
ಇದೇ ವರ್ಷದಲ್ಲಿ ಬಿಡುಗಡೆಗೊಂಡ Galaxy S 20ಯಲ್ಲಿ Exynos 990, ಅಗಸ್ಟ್ ತಿಂಗಳ Note 20 Ultraನಲ್ಲಿ Exynos 9825 ಅಳವಡಿಸಿದೆ. Snapdragon 865 ಪ್ರೊಸೆಸರ್ ಜೊತೆಯಲ್ಲಿ ಹೋಲಿಕೆ ಈ ಕೆಳಗಿನಂತಿದೆ.
Exynos 990 | Exynos 9825 | Snapdragon 865 | |
---|---|---|---|
CPU | 2x Mongoose 5th gen 2x Cortex-A76 4x Cortex-A55 | 2x Mongoose 4th gen 2x Cortex-A75 4x Cortex-A55 | 1x semi-custom Cortex A77 @ 2.85GHz 3x semi-custom Cortex-A77 @ 2.4GHz 4x semi-custom Cortex-A55 @ 1.8GHz |
GPU | Mali-G77 MP11 | Mali-G76 MP12 | Adreno 650 |
RAM | LPDDR5 | LPDDR4X | LPDDR5 |
Modem | Exynos Modem 5123 (external) 7350 Mbps down N/A up SA/NSA mmWave Sub-6GHz | 4G modem (integrated) 2000Mbps down 316Mbps up | X55 5G & RF system (external) 7500 Mbps down 3000 Mbps up SA/NSA mmWave Sub-6GHz |
Cameras | 108MP single / 24.8MP and 24.8MP dual | 22MP single / 16MP and 16MP dual | 200MP snapshots / 64MP single / 64MP and 64MP dual |
Process | 7nm EUV | 7nm EUV | 7nm EUV |
ಮೊದಲೆನೆಯದಾಗಿ Qualcommನ ಚಿಪ್ Exynos ಚಿಪ್ಗಲಿಗಿಂತ ಸುಮಾರು 20%ಗಳಷ್ಟು ಅಧಿಕ ಪ್ರೊಸೆಸಿಂಗ್ ವೇಗವನ್ನು ಹೊಂದಿದ್ದು, single core ಹಾಗು multiple coreಗಳೆರಡರಲ್ಲೂ ಪಾರುಪತ್ಯ ಮೆರೆದಿದೆ.
YouTubeನ JerryRigEverything ಚಾನೆಲ್ನಲ್ಲಿ ನಡೆಸಿದ ಪರೀಕ್ಷೆಯ ಆಧಾರದ ಮೇಲೆ Note 20 Ultraದ Exynos ಮಾದರಿಯ ಮೊಬೈಲ್ ತನ್ನದೇ Qualcomm ಚಿಪ್ ಬಳಸಿರುವ ಮೊಬೈಲ್ ಮುಂದೆ ಸೋಲನ್ನೋಪ್ಪಿಕೊಂಡಿದೆ.
ಮಾರುಕಟ್ಟೆಯ ದರದಲ್ಲಿ ಇವೆರಡಕ್ಕೂ ಅಂತರ ತೀರಾ ಕಡಿಮೆಯಿದ್ದರೂ ಲಭ್ಯವಿರುವ ಮಾದರಿಯು ಎಲ್ಲಾ ರೀತಿಯಲ್ಲೂ ರಾಜಿಯಾಗಿದೆ. ಈ ದ್ವಂದ್ವ ನೀತಿಗೆ Samsungನವರೇ ಉತ್ತರಿಸಬೇಕಾಗುತ್ತದೆ.