ಈ ಆಂಡ್ರಾಯ್ಡ್ ಫೋನ್ ನ ಬೆಲೆ ರೂ.5000 ಕ್ಕೂ ಕಡಿಮೆ!!

Share

ರಿಲಯನ್ಸ್ ನ ಜಿಯೋ ಟೆಲಿಕಾo ಗೂಗಲ್ ನ ಸಹಭಾಗಿತ್ವದಲ್ಲಿ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಆಂಡ್ರಾಯ್ಡ್ ಮೊಬೈಲ್ ಒಂದನ್ನು ಸಿದ್ಧಪಡಿಸುತ್ತಿದೆ. ಇದರ ಬೆಲೆ ಸುಮಾರು 4000 ರೂ. ಗಳ  ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.

ಬ್ಲೂಮ್ ಬರ್ಗ್ ಜಾಲತಾಣದ ಮಾಹಿತಿಯ ಪ್ರಕಾರ ಜಿಯೋ ಬರುವ ಎರಡು ವರ್ಷದಲ್ಲಿ 20 ಕೋಟಿ ಮೊಬೈಲುಗಳನ್ನು ತಯಾರಿಸುವ ಗುರಿ ಹೊಂದಿದ್ದು, ಇನ್ನೂ ಇಂಟೆರ್ನೆಟ್ ಗೆ ಕಾಲಿಡದ ಕೋಟ್ಯಾಂತರ ಭಾರತೀಯರನ್ನು ಈ ಮುಖಾಂತರ ತನ್ನ ಚಂದಾದಾರರನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. 

ಈ ಆಂಡ್ರಾಯ್ಡ್ ಫೋನ್ ಭಾರತದಲ್ಲೇ ತಯಾರಾಗಲಿದ್ದು, ಗೂಗಲ್ ಇದಕ್ಕೆಂದೇ ವಿನ್ಯಾಸಗೊಳಿಸಿರುವ ಹೊಸ ಆಂಡ್ರಾಯ್ಡ್ ಆವೃತ್ತಿಯನ್ನು ಸಿದ್ಧಪಡಿಸುತ್ತಿದೆ. ರಿಲಯನ್ಸ್ ಜಿಯೋ ನೆಟ್ವರ್ಕ್ ಈಗಾಗಲೇ 5G ತರಂಗಗಳಿಗೆ ಸಿದ್ಧವಿರುವುದರಿಂದ, ಈ ಮೊಬೈಲು 4G ಅಥವಾ 5G ಬೆಂಬಲಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. 

ಕಡಿಮೆ ಬೆಲೆಯ ಈ ಸ್ಮಾರ್ಟ್ ಫೋನ್, ಜಿಯೋ ಬ್ರಾಂಡ್ ಹೊಂದಿರಲಿದ್ದು , ಡಿಸೆಂಬರ್ 2020ರಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬರಲಿದೆ ಎಂಬ ಮಾಹಿತಿ ಇದೆ.

ಇತ್ತೀಚಿಗೆ ನಡೆದ ರಿಲಯನ್ಸ್ ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ(AGM) ಹುಟ್ಟುಹಾಕುಗ ಮುಕೇಶ್ ಅಂಬಾನಿ ಗೂಗಲ್, ರಿಲಯನ್ಸ್ ಜಿಯೋಗೆ $4.5 ಬಿಲಿಯನ್ ಹೂಡಿಕೆ ಮಾಡುವ ಸುದ್ದಿಯನ್ನು ಹೇಳಿದ್ದರು. ಈ ಪಾಲುದಾರಿಕೆಯಲ್ಲಿ ಜಿಯೋ ಆಂಡ್ರಾಯ್ಡ್ ಮೊಬೈಲ್ ಮೊದಲ ಹೆಜ್ಜೆ.