realme ಯಾ ಸ್ಮಾರ್ಟ್ ಫೋನ್ ಗಳು ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕಂಪನಿಯು ಎಲೆಕ್ಟ್ರಿಕ್ ಟೂತ್ ಬ್ರಷ್, ಎಂ ೧ ಸೋನಿಕ್ (M1 sonic) ಮಾರುಕಟ್ಟೆಗೆ ಬಿಡಲು ತಯಾರಿ ನಡೆಸಿದೆ. ಕಂಪನಿಯ ಸಿ ಇ ಒ (CEO ) ಮಾಧವ್ ಸೇತ್ ಈ ವಿಷಯವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, ನಾಳೆ ಮಧ್ಯಾಹ್ನ 12:30ಕ್ಕೆ , ಎಂ ೧ ಸೋನಿಕ್ (M1 sonic) ಖರೀದಿಸಲು realme ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ .
realme ವೆಬ್ಸೈಟಿನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಎಂ ೧ ಸೋನಿಕ್ (M1 sonic) 4 ಬಗೆಯ ಕ್ಲೀನಿಂಗ್ ಆಯ್ಕೆಗಳಿವೆ. ಸೂಕ್ಷ್ಮ ಹಲ್ಲುಗಳಿಗೆ ಸೆನ್ಸಿಟಿವ್ ಮೋಡ್ (sensitive mode), ದಿನನಿತ್ಯ ಬಳಕೆಗೆ ಕ್ಲೀನ್ ಮೋಡ್ (clean mode), ಆಳವಾದ ಸ್ವಚ್ಛತೆಗೆ ಡೀಪ್ ಕ್ಲೀನ್ ಮೋಡ್(deep-clean mode) ಮತ್ತು ಹೊಳೆಯುವಂತ ಹಲ್ಲುಗಳನ್ನು ಪಡೆಯಲು ಪಾಲಿಷ್ ಮೋಡ್(polish mode) ಆಯ್ಕೆಗಳು ಇವೆ . ಎಂ ೧ ಸೋನಿಕ್ (M1 sonic) antibacterial ಬ್ರಿಸ್ಟ್ಲೆಸ್ ಹೊಂದಿದೆ. 90 ದಿನಗಳ ಬ್ಯಾಟರಿ ಲೈಫ್ ಜೊತೆಗೆ ವೈರ್ ಲೆಸ್ ಚಾರ್ಗಿಂಗ್ ಕೂಡ ಅಳವಡಿಸಲಾಗಿದೆ. ಎಂ ೧ ಸೋನಿಕ್ (M1 sonic) ಅತ್ಯಂತ ಕಡಿಮೆ ಸದ್ದು ಮಾಡುವ (<60dB )ಮೋಟಾರ್ ಹೊಂದಿದೆ.
realme ಕಂಪನಿಯು ಎಂ ೧ ಸೋನಿಕ್ (M1 sonic) ಜೊತೆಗೆ realme 7 ಮತ್ತು realme 7 pro ಸ್ಮಾರ್ಟ್ ಫೋನ್ ಗಳನ್ನು ನಾಳೆ ಮಧ್ಯಾಹ್ನ 12:30ಕ್ಕೆ ಮಾರುಕಟ್ಟೆಗೆ ಬಿಡಲಿದ್ದಾರೆ. ಎಂ ೧ ಸೋನಿಕ್ (M1 sonic) ನ ದರ ಸುಮಾರು 500 ರೂ -1000 ರೂ ಎಂದು ಅಂದಾಜಿಸಲಾಗಿದ್ದೂ ನಿಖರವಾದ ಬೆಲೆಗೆ ಕಾದು ನೋಡಬೇಕಷ್ಟೇ.