ಹೌದು ವಿಶ್ವದ ಆನ್ಲೈನ್ ಶಾಪಿಂಗ್ ನ ದಿಗ್ಗಜ ಅಮೆಜಾನ್ ಗೆ ಅಮೇರಿಕಾದ ವಾಯುಮಾನ ಆಡಳಿತ ಮಂಡಳಿ( Federal aviation administration)FAA ಇಂದ ಡೆಲಿವರಿಗೆ ಡ್ರೋನ್ ಬಳಸಲು ಒಪ್ಪಿಗೆ ಸೂಚಿಸಿದೆ. ಅಮೆಜಾನ್ ಈ ಸೇವೆಗೆ ಪ್ರೈಮ್ ಏರ್ (prime air ) ಎಂದು ಹೆಸರಿಡಲಾಗಿದೆ.
ಅಮೆಜಾನ್ ಕಳೆದ ವರ್ಷ ಅಮೇರಿಕಾದ ವಾಯುಮಾನ ಆಡಳಿತ ಮಂಡಳಿಗೆ (FAA) ಡ್ರೋನ್ ಬಳಸುವ ಬಗ್ಗೆ ಪ್ರಸ್ತಾವನೆ ಮುಂದಿಟ್ಟಿತ್ತು. ಪ್ರಸ್ತಾವನೆಯಲ್ಲಿ 5 ಪೌಂಡ್ ಅಥವಾ ಅದ್ಕಕಿಂತ ಕಡಿಮೆ ತೂಕವಿರುವ ಸಾಮಗ್ರಿಗಳನ್ನು, ಜನದಟ್ಟಣೆ ಕಡಿಮೆ ಇರುವ ನಗರ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಡೆಲಿವೆರಿ ಗೆ ಅವಕಾಶ ಕೊಡಲು ಕೇಳಿಕೊಳ್ಳಲಾಗಿತ್ತು . FAA, ಡೆಲಿವರಿಗೆ ಬಳಸುವ ಡ್ರೋನ್ ಗಳು ಜನರ ಸುರಕ್ಷತೆಗೆ ಯಾವುದೇ ಅಪಾಯವಿಲ್ಲವೆಂದು ಪರಿಗಣಿಸಿ ,ಅಮೆಜಾನ್ ಪ್ರೈಮ್ ಏರ್ ಸೇವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಅಮೆಜಾನ್ 2016ರಲ್ಲಿ ಪ್ರಾಥಮಿಕ ಹಂತದ ಟೆಸ್ಟಿಂಗ್ ಅಂಗವಾಗಿ ಡ್ರೋನ್ ಮೂಲಕ ಡೆಲಿವರಿ ಮಾಡಿದ್ದೂ, FAA ದ ಒಪ್ಪಿಗೆ ಹಿನ್ನೆಲೆಯಲ್ಲಿ ಅಮೆಜಾನ್ ತನ್ನ ಡ್ರೋನ್ ಗಳನ್ನು ಕಠಿಣವಾದ ಆಂತರಿಕ ಟೆಸ್ಟಿಂಗ್ ಗೆ ಒಳಪಡಿಸಿದೆ. ಪ್ರೈಮ್ ಏರ್ ಸೇವೆಯ ಟೆಸ್ಟಿಂಗ್ ಗೆ ಯಾವ ನಗರಗಳನ್ನು ಆಯ್ದುಕೊಳ್ಳಲಾಗುವುದು ಹಾಗೂ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಸದ್ಯಕ್ಕಿಲ್ಲ .