ಐಫೋನ್12 ಬಿಡುಗಡೆ ನಂತರ ಹಿಂದಿನ ಆವೃತ್ತಿಯ ಫೋನುಗಳ ಮೇಲೆ ಬಾರಿ ರಿಯಾಯಿತಿ(iPhone’s previous versions get heavy discounts ahead of iPhone 12 Launch)

Share

ನಿಮಗೆಲ್ಲ ತಿಳಿದಿರುವಂತೆಯೇ ನಾಳೆ ಅಂದರೆ ಅಕ್ಟೋಬರ್ 16ರಂದು ಫ್ಲಿಪ್ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಮತ್ತು 17ಕ್ಕೆ ಅಮೆಜಾನ್ ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಗಳು ಆರಂಭಗಳ್ಳಲಿವೆ. ಬಟ್ಟೆ, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್ ಸೇರಿದಂತೆ ಸ್ಮಾರ್ಟ್ ಫೋನ್ ಗಳ ಮೇಲೆ ಬಾರಿ ರಿಯಾಯಿತಿ ದೊರೆಯಲಿದ್ದು ಇದರ ಸದುಪಯೋಗ ಪಡೆಯಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

ನಿನ್ನೆಯಷ್ಟೇ ಜರುಗಿದ ಆಪಲ್ ನ ವಾರ್ಷಿಕ ಕಾರ್ಯಕ್ರಮದಲ್ಲಿ ಐಫೋನ್ 12 ಅನಾವರಣಗೊಳಿಸಲಾಯಿತು. ಇದರ ಹಿನ್ನೆಲೆಯಲ್ಲೇ ಐಫೋನ್ ಸರಣಿಯ ಹಿಂದಿನ ಆವೃತ್ತಿಗಳಾದ ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ SE ಯ ನೂತನ ಬೆಲೆಯನ್ನು ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ನಲ್ಲಿ ಬಹಿರಂಗಪಡಿಸಲಾಗಿದೆ.

ಐಫೋನ್ 11 ಅಮೆಜಾನ್ ನಲ್ಲಿ ಕೇವಲ 47999 ಗೆ ಲಭ್ಯವಾಗಲಿದೆ. ಐಫೋನ್ 11 ಪ್ರೊ ಫ್ಲಿಪ್ಕಾರ್ಟ್ ನಲ್ಲಿ 79999 ರೂ. ಮತ್ತು ಐಫೋನ್ SE 25999 ರೂ. ಗೆ ದೊರೆಯಲಿದೆ. ಈ ಮೂಲಕ ಐಫೋನ್ ಆಕಾಂಕ್ಷಿಗಳಿಗೆ ಸಿಹಿಸುದ್ದಿ ಬಂದಂತಾಗಿದೆ.

ಇತ್ತೀಚೆಗಷ್ಟೇ ಐಫೋನ್ ನ ಬಿಡಿಭಾಗಗಳ ಜೋಡಣೆಯ ಜವಾಬ್ದಾರಿ ಹೊತ್ತಿರುವ ಫಾಕ್ಸ್ ಕಾನ್(FoxConn), ವಿಸ್ಟ್ರನ್ (Wistron) ಹಾಗು ಪೆಗಟ್ರಾನ್(Pegatron) ಕಂಪನಿಗಳು ಭಾರತದಲ್ಲಿ 900 ಮಿಲಿಯನ್ ಡಾಲರ್(ಸುಮಾರು 6700 ಕೋಟಿ ರೂ.) ಹೂಡಲು ನಿರ್ಧರಿಸಿವೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತೀಯರಿಗೆ ಐಫೋನ್ ಗಳು ಜಾಗತಿಕ ದರದಲ್ಲೇ ಲಭ್ಯವಾಗಬಹುದು.