ಪ್ರಧಾನಿ ಮೋದಿಯ ವೈಯಕ್ತಿಕ ವೆಬ್ಸೈಟ್ ನ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದ್ದೂ, ಅಕೌಂಟ್ನಿಂದ cryptocurrency (ಬಿಟ್ ಕಾಯಿನ್ ) ಮೂಲಕ, ಪ್ರಧಾನಿ ಮಂತ್ರಿ ಕೋವಿಡ್ 19 ಪರಿಹಾರ ನಿಧಿಗೆ ಹಣ ನೀಡುವಂತೆ ಟ್ವೀಟ್ ಮಾಡಲಾಗಿದೆ. ‘ಟ್ವಿಟ್ಟರ್ ‘ ಈ ಮಾಹಿತಿಯನ್ನು ಖಚಿತಪಡಿಸಿದ್ದು, ಅಗತ್ಯದ ಕ್ರಮಗಳನ್ನು ಕೈಗೊಂಡು ಅಕೌಂಟ್ ಸುರಕ್ಷಿತಗೊಳಿಸಲಾಗಿದೆ ಎಂದು ತಿಳಿಸಿದೆ. ಅಕೌಂಟ್ ಸುರಕ್ಷಿತಗೊಂಡ ನಂತರ 2 ಟ್ವೀಟ್ ಗಳನ್ನೂ ತೆಗೆಯಲಾಗಿದೆ.
ಕೃಪೆ : ಟ್ವಿಟ್ಟರ್
ಈ ರೀತಿ ಹೆಸರಾಂತ ವ್ಯಕ್ತಿಗಳ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿರುವುದು ಇದೇ ಮೊದಲಲ್ಲ . ಜುಲೈ ತಿಂಗಳಲ್ಲಿ ಅಮೇರಿಕಾ ದ ಮಾಜಿ ಅಧ್ಯಕ್ಷ ಬರಾಕ್ ಒಬಾಮ , ಅಮೆಜಾನ್ ನ ಜೆಫ್ ಬೆಝೋಜ್, ಎಲೊನ್ ಮಸ್ಕ್ ಹಾಗು ಹಲವರ ಟ್ವಿಟ್ಟರ್ ಅಕೌಂಟ್ಸ್ ಹ್ಯಾಕ್ ಮಾಡಲಾಗಿದ್ದು ಇದೆ ರೀತಿ cryptocurrency ನೀಡಿದವರಿಗೆ ದ್ವಿಗುಣ ಮೊತ್ತವನ್ನು ಕೊಡುವದಾಗಿ ಟ್ವೀಟ್ ಮಾಡಲಾಗಿತ್ತು.
ಮೋದಿಯವರ ಅಕೌಂಟ್ ಜೊತೆ ಮತ್ತೆ ಯಾವೆಲ್ಲ ಅಕೌಂಟ್ ಹ್ಯಾಕ್ ಮಾಡಲಾಗಿದೆ ಎಂದು ತನಿಖೆ ನಡೆಸಲಾಗುತ್ತಿದ್ದೂ , ಸಧ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ‘ಟ್ವಿಟ್ಟರ್ ‘ ತಿಳಿಸಿದೆ . ಹೀಗೆ ಸದ್ದಿಲ್ಲದೇ ನಡೆಯುತ್ತಿರುವ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಗಳು ‘ಟ್ವಿಟ್ಟರ್’ ಅಧಿಕಾರಿಗಳ ನಿದ್ದೆಗೆಡಿಸಿವೆ .
2 Responses
[…] ಬಳಸಬಹುದು. ಕಳೆದ ತಿಂಗಳಲ್ಲಿ ಆದ ಸರಣಿ ಟ್ವಿಟ್ಟರ್ ಖಾತೆ ಗಳ ಹ್ಯಾಕ್ ಒಂದು ಅತ್ಯುತ್ತಮ […]
[…] 3ರಂದು ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಯನ್ನು … ಮಾಡಿ, ಪ್ರಧಾನಿ ಮಂತ್ರಿ ಕೋವಿಡ್ 19 ಪರಿಹಾರ […]