ಜುಲೈ 30, 2020 ರಂದು ಭೂಮಿಯಿಂದ ಚಿಮ್ಮಿದ Perseverance ರೋವರ್, ಎಲ್ಲ ಅಂದುಕೊಂಡಂತೆ ಆದರೆ ಇಂದು ಮಂಗಳಕ್ಕೆ ಕಾಲಿಡಲಿದೆ. ಮಂಗಳನಲ್ಲಿ ಸೂಕ್ಶ್ಮಜೀವಿಗಳು ಜೀವಿಸಿದ್ದ ಯಾವುದಾದರೂ ಕುರುಹು ಸಿಗಬಹುದೇ ಎಂದು ತಿಳಿಯಲು ಅಲ್ಲಿನ ಮೇಲ್ಪದರದ ಮಣ್ಣಿನ ಮಾದರಿ ಸಂಗ್ರಹಿಸುವುದು ರೋವರ್ ನ ಗುರಿಯಾಗಿದೆ.
Perseverance ಅನ್ನು Curiosity ರೋವರ್ ಮಾದರಿಯಲ್ಲೇ ನಿರ್ಮಿಸಲಾಗಿದ್ದು ಹೊಸ ಟೆಕ್ನಾಲಜಿಯಿಂದ ನವೀಕರಿಸಲಾಗಿದೆ, ಪರಿಣಾಮ Perseverance ರೋವರ್ ಹೆಚ್ಚು ವೇಗವಾಗಿ ಮತ್ತು ಹೆಚ್ಚು ದೂರ ಚಲಿಸಬಲ್ಲದು. ಇನ್ನೊಂದು ವಿಶೇಷವೆಂದರೆ ಡ್ರೋನ್(Ingenuity) ಕೂಡ ರೋವರ್ ನೊಂದಿಗೆ ಇರಿಸಲಾಗಿದೆ.
ಮಂಗಳನ ವಾತಾವರಣದಿಂದ ಆಮ್ಲಜನಕ ಉತ್ಪಾದಿಸುವ ಒಂದು ಸಣ್ಣ ಪ್ರಯೋಗ ಮಾಡಲು ಬೇಕಾದ ಸಲಕರಣೆಗಳನ್ನು ಕೂಡ ರೋವರ್ ನಲ್ಲಿ ಇರಿಸಲಾಗಿದ್ದು ಜೊತೆಗೆ 23 ಕ್ಯಾಮೆರಾಗಳಿಗೂ ಸ್ಥಾನ ಕಲ್ಪಿಸಿಕೊಡಲಾಗಿದೆ.

ಬರೋಬ್ಬರಿ 7 ತಿಂಗಳ ದೀರ್ಘ ಪ್ರಯಾಣದ ನಂತರ Perseverance ರೋವರ್ ಮೊದಲೇ ನಿರ್ಧರಿಸಿದ ಜೆಜಿರೋ ಎಂಬ ಕುಳಿಯಲ್ಲಿರುವ ನದಿಮುಖಜ ಭೂಮಿಯಲ್ಲಿ ಕಾಲೂರಿ, ಅಲ್ಲಿನ ಕಲ್ಲು ಹಾಗು ಮಣ್ಣಿನ ಮಾದರಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ನಾಸಾದ ಮುಂದಿನ misson ನಲ್ಲಿ ಮಾದರಿಗಳನ್ನು ಭೂಮಿಗೆ ತರಿಸಿಕೊಳ್ಳಾಗುವುದು ಹಾಗು ಈ ಹಿಂದೆ ಮಂಗಳನಲ್ಲಿ ಜೀವಿಗಳೇನಾದರೂ ಜೀವಿಸಿದ್ದವೇ? ಎಂದು ಪತ್ತೆಹಚ್ಚಲಾಗುವುದು.
ಕೆಂಪು ಗ್ರಹದಲ್ಲಿ ರೋವರ್ ಇಳಿಸುವುದು ಸುಲಭದ ಮಾತಲ್ಲ. ಭೂಮಿಯಿಂದ ಮಂಗಳನಲ್ಲಿಗೆ ರೇಡಿಯೋ ಸಿಗ್ನಲ್ ಕಲಿಸಲು ಕನಿಷ್ಠ 7 ನಿಮಿಷಗಳ ಕಾಲವಧಿ ಬೇಕಾಗುತ್ತದೆ. ಆದರಿಂದ ರೋವರ್ ತನ್ನ ಎಲ್ಲ landing ಪ್ರಕ್ರಿಯೆಯನ್ನು ಸ್ವತಃ ತಾನೇ ನೋಡಿಕೊಳ್ಳಬೇಕಾಗಿದ್ದು, ತನ್ನ ವೇಗವನ್ನು ಸರಿಯಾದ ಸಮಯಕ್ಕೆ ನಿಯಂತ್ರಿಸಿಕೊಳ್ಳಬೇಕಾಗುತ್ತದೆ.
ನಾಸಾದ ಈ mission ಯಶಸ್ವಿಯಾಗಲೆಂದು ವಿಶ್ವದಾದ್ಯಂತ ಬಾಹ್ಯಾಕಾಶ ಉತ್ಸುಕರು ಹಾರೈಸಿದ್ದಾರೆ. ನೀವು ಸಹ Perseverance ರೋವರ್ ಮಂಗಳನಲ್ಲಿ ಇಳಿಯುವ ಪ್ರಕ್ರಿಯೆಯನ್ನು ನೇರ ಪ್ರಸಾರದಲ್ಲಿ ನೋಡಬಹುದಾಗಿದೆ. ಭಾರತದ ಕಾಲಮಾನದ ಪ್ರಕಾರ ಇಂದು ರಾತ್ರಿ 12 ಗಂಟೆ 45 ನಿಮಿಷಕ್ಕೆ ನೇರಪ್ರಸಾರ ಆರಂಭವಾಗಲಿದೆ.
ಮೂಲ ಸುದ್ದಿ: ನಾಸಾ ತಂತ್ರಾಂಶ ಮತ್ತು Vox news