OTT ವೇದಿಕೆಯ contentಗೂ ಕತ್ತರಿ!

Share

ಈ ವರೆಗೆ ನೀವು ಆನಂದಿಸಿದ OTT ವೇದಿಕೆಯಲ್ಲಿರುವ contentಗೆ ಸರ್ಕಾರ ತನ್ನ ರೀತಿ ರಿವಾಜುಗಳನ್ನು ಹೇರಲಿದೆ. ಇದುವರೆಗೆ ಕೇವಲ ಸಿನಿಮಾ, ಜಾಹಿರಾತು ಮತ್ತು ಧಾರಾವಾಹಿಗಳು ಸರ್ಕಾರದ ವಿವಿಧ ಅಂಗಗಳ ಕಾನೂನಿಗೆ ಒಳಪಡುತ್ತಿದ್ದು, OTT ವೇದಿಕೆಯ content ಮತ್ತು ಸುದ್ದಿಗೆ ಯಾವುದೇ ಅಡೆತಡೆ ಇರಲಿಲ್ಲ.

ಕೇಂದ್ರ ಸರ್ಕಾರ ತನ್ನ 361ನೇ ಸಂವಿಧಾನದ ತಿದ್ದುಪಡಿಯಲ್ಲಿ OTT ವೇದಿಕೆಯ ಆಡಿಯೋ ಮತ್ತು ವಿಡಿಯೋ ಕಂಟೆಂಟ್ ಜೊತೆಗೆ ಆನ್ಲೈನ್ ಸುದ್ದಿ ಸಮಾಚಾರಗಳು, ಮಾಹಿತಿ ಮತ್ತು ಪ್ರಸಾರ ಇಲಾಖೆಯಡಿಯ ರೀತಿ ರಿವಾಜುಗಳಿಗೆ ಒಳಪಡುತ್ತವೆ ಎಂದು ಆದೇಶ ಹೊರಡಿಸಿದೆ.

ಈ ಮೂಲಕ ಸರ್ಕಾರ ಲಭ್ಯವಿರುದ ಆಡಿಯೋ ಮತ್ತು ವಿಡಿಯೋ ಮಾಧ್ಯಮಗಳ ಮೇಲೆ ತನ್ನ ಹಿಡಿತ ಸಾಧಿಸಿದಂತಾಗಿದೆ. ಇನ್ನು ಮುಂದೆ OTT ವೇದಿಕೆಯಲ್ಲಿರುವ ಕಂಟೆಂಟ್ ಮಾಹಿತಿ ಮತ್ತು ಪ್ರಸಾರ ಇಲಾಖೆಯಡಿಯಲ್ಲಿ censor ಆಗುವ ಎಲ್ಲ ಸಾಧ್ಯತೆ ಇದೆ.

ಹಲವಾರು ಕಲಾವಿದರು, ನಿರ್ದೇಶಕರು ಮತ್ತು ನಿರ್ಮಾಪಕರು ಈ ನಡೆಯಿಂದ ಸೃಜನಶೀಲತೆ (creativity)ಗೆ ಧಕ್ಕೆಯಾಗುತ್ತದೆಂದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಈ ನಿಲುವಿಗೆ ಅಮೆಜಾನ್ ಪ್ರೈಮ್, Netflix ಸೇರಿದಂತೆ ಉಳಿದ OTT ವೇದಿಕೆಯಲ್ಲಿರುವ ಕಂಪನಿಗಳು ಹೇಗೆ ಪ್ರತಿಕ್ರಿಯಿಸುತ್ತವೆಂದು ಕಾದುನೋಡಬೇಕಷ್ಟೆ.

ಮೂಲ ಸುದ್ದಿ: ಭಾರತ ಸರ್ಕಾರ press release