@Oneplus_in ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ Oneplus 8T ಮೊಬೈಲ್ ಬಿಡುಗಡೆಗೊಳ್ಳುವ ದಿನಾಂಕ ಅಕ್ಟೋಬರ್ 14 ಎಂದು ಪ್ರಕಟಿಸಿತ್ತು. ಇದರ ಬೆನ್ನಲ್ಲೇ Amazon websiteನಲ್ಲಿ ಜಾಹಿರಾತುಗಳು ಕಾಣಿಸಿಕೊಂಡಿದ್ದವು. Oneplus 8T ಇದೇ ವರ್ಷ ಬಿಡುಗಡೆಗೊಳಿಸಿದ Oneplus 8ನ ನವೀಕರಿಸಿದ ಆವೃತ್ತಿಯಾಗಿದೆ.
ಆಕಸ್ಮಿಕವಾಗಿ ಅಮೆಜಾನ್ UK websiteನಲ್ಲಿ ಕಾಣಿಸಿಕೊಂಡಿದ್ದ 8T ಮೊಬೈಲ್ ನ ವಿವರಣೆಯಿರುವ ಪುಟವನ್ನು ಟೆಕ್ ಉತ್ಸಾಹಿ @ishanagarwal24 ಟ್ವಿಟ್ಟರ್ ನಲ್ಲಿ ಹಂಚಿದ್ದಾರೆ. ಇದರ ಪ್ರಕಾರ ಕ್ವಾಲ್ಕಮ್(Qualcomm)ಸ್ನ್ಯಾಪ್ ಡ್ರ್ಯಾಗನ್ 865 ಪ್ರೊಸೆಸರ್, 5G ಬೆಂಬಲ ಹೊಂದಿದ್ದು, 8 GB RAM, 6.5 ಇಂಚಿನ 120 Hz refresh rateನ ಪರದೆ, 4500 mAHನ Warp Charge ಬೆಂಬಲಿಸುವ ಬ್ಯಾಟರಿ ಇದೆ.

ಒಟ್ಟು ನಾಲ್ಕು, 48 MP(w/ OIS) + 16 MP + 5 MP + 2 MP ಮುಖ್ಯ ಕ್ಯಾಮೆರಾ ಹಾಗು 16 MP ಸೆಲ್ಫಿ ಕ್ಯಾಮೆರಾ ಒಳಗೊಂಡಂತೆ Aquamarine Green ಮತ್ತು Lunar Silver, ಎರಡು ಬಣ್ಣಗಳಲ್ಲಿ ಲಭ್ಯವಿರುವ ಸೂಚನೆ ದೊರೆತಿದೆ. ಇನ್ನು ಇದರ ಮಾರಾಟ ಬೆಲೆಯು Oneplus 8 ಬಿಡುಗಡೆಯಾದಾಗ ಇದ್ದ ಬೆಲೆಗಿಂತಲೂ ಕಡಿಮೆ ಇರುವ ಸಾಧ್ಯತೆಯಿದೆ.
OnePlus ಈ ಹಿಂದೆ ಬಿಡುಗಡೆಗೊಳಿಸುತಿದ್ದ Pro(ಪ್ರೊ) ಮಾದರಿಯ ಮೊಬೈಲುಗಳ ರೀತಿಯಲ್ಲಿ OnePlus 8T Pro ಮಾರುಕಟ್ಟೆಗೆ ಬರುವುದಿಲ್ಲವೆಂದು ಕಂಪನಿಯ ಕಟ್ಟುಗ ಮತ್ತು ಸಿ. ಇ. ಓ. Liu Zuohu (aka Pete Lau) ತಿಳಿಸಿದ್ದಾರೆ ಎಂದು Android Authority ವರದಿ ಮಾಡಿದೆ.
ಪ್ರೊಸೆಸರ್ | Qualcomm® Snapdragon™ 865 |
ಗಾತ್ರ | 160.7 x 74.1 x 8.4 mm |
ತೂಕ | 188 grams |
ಪರದೆಯ ಗಾತ್ರ | 6.5″ 120 Hz Full HD+ |
RAM | 8 GB or 12 GB |
ಸ್ಟೋರೇಜ್ | 128 GB or 256 GB |
Expandable ಸ್ಟೋರೇಜ್ | ಲಭ್ಯವಿಲ್ಲ |
ಬ್ಯಾಟರಿ | 4500 mAH Battery, 65 W Warp Charge |
ಆಪರೇಟಿಂಗ್ ಸಿಸ್ಟಮ್ ಆವೃತ್ತಿ | Android 11 |
ಕ್ಯಾಮೆರಾ | – ಹಿಂಭಾಗ: 48 MP (w/ OIS) +16 MP + 5 MP +2 MP –ಮುಂಭಾಗ: 16 MP |
ಬಣ್ಣಗಳ ಆಯ್ಕೆ | Aquamarine Green, Lunar Silver |
ಬೆಲೆ | ಲಭ್ಯವಿಲ್ಲ |