Olaದ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಖಾನೆ ಹೊಸೂರಿನಲ್ಲಿ!

Share

ಬೆಂಗಳೂರು ಮೂಲದ ಟ್ಯಾಕ್ಸಿ ಸೇವೆಯಲ್ಲಿ ಖ್ಯಾತಿ ಪಡೆದ Ola, ಈ ವರ್ಷದ ಮೊದಲಲ್ಲಿ ಆಂಸ್ಟರ್ಡ್ಯಾಮ್ ಮೂಲದ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸ ಮತ್ತು ಉತ್ಪಾದನೆಯ startup ಆದ Etergoವನ್ನು ತನ್ನ ಒಡೆತನಕ್ಕೆ ಸೇರಿಸಿಕೊಂಡಿತ್ತು.

ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಉತ್ಪಾದಿಸುವ ಸಮಯ. Ola ತಮಿಳುನಾಡಿನ ಸರ್ಕಾರದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಹೊಸೂರಿನಲ್ಲಿ 2400 ರೂ. ಕೋಟಿ ವೆಚ್ಚದಲ್ಲಿ ಕಾರ್ಖಾನೆ ತೆರೆಯಲಿದೆ. ಇದರಿಂದ ಸುಮಾರು 10,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ.

Etergoದ ಸ್ಕೂಟರ್ ಈಗಾಗಲೇ ತನ್ನ ವಿನ್ಯಾಸಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದೆ. ಕಳಚಬಹುದಾದ ಬ್ಯಾಟರಿ ವಿನ್ಯಾಸ ಸಾರ್ವಜನಿಕ ಸಾರಿಗೆ ಬಳಕೆಗಾಗಿ ಬಳಸಬಹುದಾದ ಸ್ಕೂಟರ್ ಗಳ ನಿರ್ವಹಣೆಯನ್ನು ಸುಲಭವಾಗಿಸಲಿದೆ. ಒಮ್ಮೆ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 240ಕಿಮೀ ದೂರ ಚಲಿಸಬಲ್ಲದು. ಸೀಟಿನ ಅಡಿಯಲ್ಲಿ 50ಲೀಟರಿನಷ್ಟು ವಿಶಾಲಾವಾದ ಸಂಗ್ರಹಣಾ ಸ್ಥಳ ಕಲ್ಪಿಸಲಾಗಿದೆ.

ಹೊಸೂರಿನಲ್ಲಿ ಅನಾವರಣಗೊಳ್ಳುವ ಕಾರ್ಖಾನೆ ವಿಶ್ವದಲ್ಲಿಯೇ ಅತಿ ದೊಡ್ಡ ಸ್ಕೂಟರ್ ಉತ್ಪಾದನಾ ಘಟಕವಾಗಲಿದ್ದು ಈ ವೇಳೆ ಮಾತನಾಡಿದ ಕಂಪನಿಯ ಸಿಇಓ ಭವಿಶ್ ಅಗರ್ವಾಲ್ Olaದ ಈ ನಡೆ, ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ನಾಂದಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Olaದ ಸ್ಕೂಟರ್ ಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೆ, ಯುರೋಪ್ , ದಕ್ಷಿಣ ಅಮೇರಿಕಾ ಹಾಗು ಏಷ್ಯಾದ ಇತರೆ ದೇಶಗಳಿಗೂ ರಫ್ತು ಮಾಡಲಾಗುವುದು. ಒಟ್ಟಾರೆ ಎಲೆಕ್ಟ್ರಿಕ್ ಸ್ಕೂಟರಿನ ವಿನ್ಯಾಸ ಮತ್ತು ಉತ್ಪಾದನಾ ಸ್ಪರ್ಧೆಯಲ್ಲಿ ather, ola ಸೇರಿದಂತೆ ಹಲವಾರು ಕಂಪನಿಗಳು ಕಣಕ್ಕಿಳಿದಿರುವುದು ಗ್ರಾಹಕನಾಗಿ ನನಗಂತೂ ಸಂತಸದ ವಿಚಾರವೇ ಸರಿ.

ಮೂಲ ಸುದ್ದಿ: Ola press release