ಎನ್ವಿಡಿಯ ಆರ್ಮ್ ಕಂಪನಿಯನ್ನು ಖರೀದಿಸಲಿದೆ(Nvidia is acquiring arm)

Share

ಹೌದು ಎನ್ವಿಡಿಯ ಆರ್ಮ್ ಕಂಪನಿಯನ್ನು ಬರೋಬ್ಬರಿ 40 ಬಿಲಿಯನ್ ಡಾಲರ್ ಗಳಿಗೆ ಖರೀದಿಸಲಿದೆ. ಆರ್ಮ್ ಮೂಲತಹ ಬ್ರಿಟೀಷ್ ಕಂಪೆನಿಯಾಗಿದ್ದು ಸಧ್ಯಕ್ಕೆ ಸಾಫ್ಟ್ ಬ್ಯಾಂಕ್ ನ ಒಡೆತನದಲ್ಲಿದೆ. ಇದನ್ನು ಖರೀದಿಸಲು ಎನ್ವಿಡಿಯ ಸಾಫ್ಟ್ ಬ್ಯಾಂಕ್ ಜೊತೆ ಮಾತುಕತೆ ನಡೆಸಿದೆ .

ನಿಮಗೆ ಗೊತ್ತಿರುವಂತೆಯೇ ಎನ್ವಿಡಿಯ ಗ್ರಾಫಿಕ್ಸ್ ಕಾರ್ಡ್ಗಳು ಗೇಮಿಂಗ್ ಪ್ರಪಂಚದಲ್ಲಿ ಹೆಸರುವಾಸಿ. ಇದರೊಟ್ಟಿಗೆ ಎನ್ವಿಡಿಯ artificial intelligence(AI) ಕ್ಷೇತ್ರದಲ್ಲೂ ಸಕ್ರಿಯವಾಗಿದೆ. ಆರ್ಮ್ ತನ್ನ ಮೊಬೈಲ್ ಹಾಗು ಕಂಪ್ಯೂಟರ್ ಪ್ರೊಸೆಸರ್ ಚಿಪ್ ಗಳ ತಂತ್ರಜ್ಞಾನವನ್ನು ಸ್ಯಾಮ್ ಸಂಗ್ , ಕ್ವಾಲ್ಕಾಮ್ ಹಾಗೂ ಆಪಲ್ ಕಂಪನಿಗಳಿಗೆ ನೀಡುತ್ತಿದೆ.

ಎನ್ವಿಡಿಯದ ಸಿ ಇ ಒ (CEO) ಈ ಮಾಹಿತಿಯನ್ನು ಖಚಿತಪಡಿಸಿದ್ದೂ, ಆರ್ಮ್ ನ ಕಾರ್ಯಕ್ಷಮತೆಯಲ್ಲಿ ಯಾವುದೇ ಅಡ್ಡಿಯಾಗುವುದಿ ಲ್ಲವೆಂದು ಹೇಳಿಕೆ ನೀಡಿದ್ದಾರೆ. ಎನ್ವಿಡಿಯ AI ತಂತ್ರಜ್ಞಾನವನ್ನು ಆರ್ಮ್ ಚಿಪ್ಗಳ ಮೇಲೆ ಬಳಸಿ ಈ ಕ್ಷೇತ್ರದಲ್ಲಿ ಇನ್ನಷ್ಟು ಸಕ್ರಿಯವಾಗಲು ಉತ್ಸುಕವಾಗಿದೆ.

ಮಾಹಿತಿ ಮೂಲ : bloomberg.