ನಿಮ್ಮ ಮನೆಯಲ್ಲೇ ರೆಕಾರ್ಡಿಂಗ್ ಸ್ಟುಡಿಯೋ – ನಾದ್ ಸಾಧನ

Share

Artificial Intelligence(AI) ಹೊಂದಿರುವ ಕೃತಕ ಗಾಯನದ ಸ್ಟುಡಿಯೋ ರೀತಿಯ ಅನುಭವ ನೀಡಬಲ್ಲ ಮೊಬೈಲ್ ಅಪ್ಲಿಕೇಶನ್ ಬಂದಿದೆ. ಮೊದಲಿಗೆ ಕೇವಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯಲು ಬೇಕಾದ ರಾಗಗಳನ್ನು ಮಾತ್ರ ಹೊಂದಿದ್ದ ನಾದ್ ಸಾಧನ, ಈಗ ೭ ವಿವಿಧ ಸಂಗೀತ ಪ್ರಕಾರಗಳಿಗೆ ಬೇಕಾಗುವ ರಾಗಗಳನ್ನು ಹೊಂದಿದೆ.

AI ನ ಸಹಾಯದಿಂದ ಗಾಯಕನ ಹಾಡನ್ನು ಆಲಿಸುತ್ತ, ಸ್ವರಗಳ ನಿಖರತೆ ಬಗ್ಗೆ ಕ್ಷಣದಲ್ಲೇ ಪ್ರತಿಕ್ರಿಯಿಸುತ್ತದೆ. ತಬಲ, ವೀಣೆ ಮತ್ತು ಹಾರ್ಮೋನಿಯಂ ಸೇರಿದಂತೆ ಇನ್ನು ಹತ್ತು ಹಲವು ಸಂಗೀತ ವಾದ್ಯಗಳು ಗಾಯನಕ್ಕೆ ತಕ್ಕಂತೆ ನುಡಿಸುತ್ತವೆ. ನಾದ್ ಸಾಧನ ಅಪ್ಲಿಕೇಶನ್, ಇತ್ತೀಚೆಗೆ ನಡೆದ ಆಪಲ್ ಕಂಪನಿಯ 2021ರ ಆವೃತ್ತಿಯ WWDC ಕಾರ್ಯಕ್ರಮದಲ್ಲಿ, ಅಪ್ಲಿಕೇಶನ್ ಗೆ (ಆವಿಷ್ಕಾರ) innovation ವಿಭಾಗದಲ್ಲಿ ಅತ್ಯುನ್ನತ ಗೌರವವಾದ “ಆಪಲ್ ಡಿಸೈನ್ ಅವಾರ್ಡ್” ನೀಡಲಾಗಿದೆ.

ಪುಣೆ ಮೂಲದ ಸಂದೀಪ್ ರಾನಡೆ ಈ ಅಪ್ಲಿಕೇಶನ್ ವಿನ್ಯಾಸಗೊಳಿಸಿ ಕಾರ್ಯರೂಪಕ್ಕೆ ತರುವಲ್ಲಿ ಬಹಳಷ್ಟು ಶ್ರಮಪಟ್ಟಿದ್ದಾರೆ. ಈ ಅಪ್ಲಿಕೇಶನ್ ಬಳಸಿ ಹಾಡಲಾದ “na corona karo” ಮತ್ತು “anand barsao” ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಕೃಪೆ : ಯೌಟ್ಯೂಬ್

ಕೊರೊನದಿಂದಾಗಿ ಹೇರಲಾದ ನಿರ್ಬಂಧಗಳ ತರುವಾಯ ಸಂಗೀತ ತರಬೇತಿಗಳಿಂದ ದೂರವಾದ ಗಾಯಕರಿಗೆ ಈ ಅಪ್ಲಿಕೇಶನ್ ವರದಾನವಾದಂತಾಗಿದೆ. ಸದ್ಯಕ್ಕೆ ನಾದ್ ಸಾಧನ ಕೇವಲ iOS ನಲ್ಲಿ ಮಾತ್ರ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ nadsadhana ಜಾಲತಾಣಕ್ಕೆ ಭೇಟಿ ನೀಡಿ.

ಮೂಲ ಸುದ್ದಿ: Deccan Herald ಮತ್ತು naadsadhana