ಇತ್ತೀಚಿನ ದಿನಗಳಲ್ಲಿ ವಾಟ್ಸ್ ಅಪ್ ಬಹಳಷ್ಟು ಅಪ್ಡೇಟ್ ಗಳನ್ನು ಪರೀಕ್ಷಿಸುತಿದ್ದು, ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳೊಂದಿಗೆ ಅಪ್ಲಿಕೇಶನ್ ಬಳಸುವ ಅನುಭವವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿದೆ. ಸರಣಿ ಅಪ್ಡೇಟುಗಳಲ್ಲಿ ಹೊಸದೇನಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಿದ್ದೇನೆ.
ಇದರಲ್ಲಿ ಪ್ರಮುಖವಾದದ್ದು ಶಾಶ್ವತವಾಗಿ ಚಾಟ್ ಗಳನ್ನು ಮ್ಯೂಟ್ ಮಾಡಬಹುದಾದ ವೈಶಿಷ್ಟ್ಯ. WAbetainfo ಮಾಹಿತಿಯ ಪ್ರಕಾರ ಚಾಟ್ ಗಳನ್ನು ಮ್ಯೂಟ್ ಮಾಡುವ ಆಯ್ಕೆಯಲ್ಲಿ ‘1 year’ ಬದಲಿಗೆ ‘Always’ ಆಯ್ಕೆಯನ್ನು ಪರಿಚಯಿಸಲಾಗಿದೆ.

ಪರಿಶೀಲಿಸಿದ ವಾಟ್ಸ್ ಅಪ್ ಬಿಸಿನೆಸ್ ಖಾತೆಗಳಿಗೆ ಆಡಿಯೋ ಮತ್ತು ವಿಡಿಯೋ ಕರೆಗಳ ಬಟನ್ ಮಾಯವಾಗಿವೆ. ಆದರೆ ಪ್ರೊಫೈಲ್ ಮೇಲೆ ಒತ್ತಿದಾಗ ಈ ಆಯ್ಕೆಗಳು ಲಭ್ಯವಾಗುತ್ತಿವೆ. ಈ ಗೊಂದಲಗಳಿಗೆ ಅಪ್ಡೇಟ್ ಬಂದಾಗಲೇ ಉತ್ತರ ದೊರೆಯಲಿದೆ.

“ಮೀಡಿಯಾ ಗೈಡ್ ಲೈನ್ಸ್ ” ವೈಶಿಷ್ಟ್ಯದಡಿಯಲ್ಲಿ ಸ್ಟಿಕ್ಕರ್, ಟೆಕ್ಸ್ಟ್ ಬಳಸಿ ವಿಡಿಯೋ ಅಥವಾ ಫೋಟೋ ಗಳನ್ನು ಎಡಿಟ್ ಮಾಡುವಾಗ ಸರಿಯಾಗಿ ಹೊಂದಿಸಲು ಗ್ರಿಡ್ ಗೆರೆ ಗಳು ಮೂಡಿಬರಲಿವೆ.
