ಮೈಕ್ರೋಸಾಫ್ಟ್ ನ ಒಡೆತನದಲ್ಲಿರುವ ಲಿಂಕ್ಡ್ ಇನ್ ಪ್ರಪಂಚದಾದ್ಯಂತ ಕೆಲಸ ಹುಡುಕುತ್ತಿರುವವರಿಗೆ ಹಾಗು ಕಂಪನಿಗಳಿಗೆ ಸೇತುವೆಯಾಗಿದೆ. ಲಿಂಕ್ಡ್ ಇನ್ ತನ್ನ ಹೊಸ ಅಪ್ಡೇಟ್ ಗಳಲ್ಲಿ , ಮೆಸೆಗಿಂಗ್ ವಿಭಾಗಕ್ಕೆ ಸಾಕಷ್ಟು ಆಯ್ಕೆಗಳನ್ನು ಹೊರಬಿಟ್ಟಿದೆ. ಇನ್ನು ಮುಂದೆ ನೀವು ಫೇಸ್ಬುಕ್ /ಇನ್ಸ್ಟಾಗ್ರಾಮ್ ನಂತೆ ಲಿಂಕ್ಡ್ ಇನ್ ನಲ್ಲೂ ಸಹ ಸ್ಟೋರೀಸ್ ಹಾಕಬಹುದು. ಹೊಸ ಅಪ್ಡೇಟ್ ಗಳು ಸದ್ಯಕ್ಕೆ ಕೆಲವು ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿದ್ದು ಮುಂಬರುವ ದಿನಗಳಲ್ಲಿ ಜಗತ್ತಿನೆಲ್ಲೆಡೆ ಲಭ್ಯವ್ಯವಾಗಲಿವೆ
ಮೆಸೇಜಿಂಗ್ ವಿಭಾಗದ ಅಪ್ಡೇಟ್ ನಲ್ಲಿ ಪ್ರಮುಖವಾದದ್ದು ವಿಡಿಯೋ ಕರೆಗಳನ್ನು ಮಾಡುವ ಆಯ್ಕೆ. ವಿಡಿಯೋ ಕರೆಯನ್ನು ಮಾಡಲು, ವ್ಯಕ್ತಿಯ ಚಾಟ್ ಆಯ್ಕೆ ಮಾಡಿ, ವಿಡಿಯೋ ಮೇಲೆ ಕ್ಲಿಕ್ಕಿಸಿದಾಗ ನಿಮಗೆ ಮೈಕ್ರೋಸಾಫ್ಟ್ ಟೀಮ್ಸ್ , ಜೂಮ್ ಅಥವಾ ಬ್ಲೂ ಜೀನ್ಸ್ ಅಪ್ಲಿಕೇಶನ್ನುಗಳ ಮೂಲಕ ಕರೆಗಳನ್ನು ಮಾಡಲು ಆಯ್ಕೆ ದೊರೆಯುತ್ತದೆ.

ನೀವು ಕಳುಹಿಸಿದ ಸಂದೇಶಗಳನ್ನು ಎಡಿಟ್ ಮತ್ತು ಡಿಲೀಟ್ ಮಾಡುವ ಆಯ್ಕೆಗಳನ್ನು ಸಹ ಕೊಡಲಾಗಿದೆ.ಇದರೊಟ್ಟಿಗೆ ಎಮೋಜಿಗಳಿಂದ ಪ್ರತಿಕ್ರಿಯೆ ನೀಡುವುದನ್ನು ಪರಿಚಯಿಸಲಾಗಿದ್ದು ಸಂದೇಶದ ಮೇಲೆ 2 ಬಾರಿ ಕ್ಲಿಕ್ಕಿಸಿದಾಗ ಇಚ್ಛೆಯನುಸಾರ ಎಮೋಜಿಗಳನ್ನು ಆಯ್ದುಕೊಳ್ಳಬಹುದಾಗಿದೆ.
ವ್ಯಕ್ತಿಯ ಜೊತೆಗಿನ ಸಂಪೂರ್ಣ ಚಾಟ್ ಕೂಡ ಡಿಲೀಟ್ ಮಾಡುವ ಆಯ್ಕೆ ಕೊಡಲಾಗಿದ್ದು , ಚಾಟ್ ನ ಮೇಲೆ ದೀರ್ಘವಾಗಿ ಒತ್ತಿ ಹಿಡಿಯುವ ಮೂಲಕ ಡಿಲೀಟ್ ಆಯ್ಕೆಯನ್ನು ಪಡೆಯಬಹುದಾಗಿದೆ. ಗ್ಗ್ರೂಪ್ ಚಾಟ್ ಕೂಡ ದೊರೆತಿದ್ದು 50 ಮಂದಿ ಒಮ್ಮೆಲೆ ಭಾಗಿಯಾಗಬಹುದು.
ಸ್ನ್ಯಾಪ್‌ಚಾಟ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರೀಸ್ ಅಪ್ಲೋಡ್ ಮಾಡಿದಂತೆಯೇ ಲಿಂಕ್ಡ್ ಇನ್ ಸ್ಟೋರೀಸ್ ಪರಿಚಯಿಸಲಾಗಿದ್ದು, ಇಲ್ಲೂ ಕೂಡ ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ಕಿಸಿ, ಫೋಟೋ/ವಿಡಿಯೋ ಆಯ್ದುಕೊಂಡು ಅಪ್ಲೋಡ್ ಮಾಡಬಹುದಾಗಿದೆ. ಸ್ಟೋರೀಸ್ 24 ಗಂಟೆಗಳ ಕಾಲ ಉಳಿಯಲಿವೆ.