Android Goನಲ್ಲಿ ಬರಲಿದೆ Night Mode ಆಯ್ಕೆ

Share

ಕಳೆದ ವರ್ಷ ಗೂಗಲ್, 2 ಜಿಬಿಗಿಂತ ಕಡಿಮೆ RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗಾಗಿ ಆಂಡ್ರಾಯ್ಡ್ ಗೋ OS ಆವೃತ್ತಿಯನ್ನು ನಿರ್ಮಿಸಿತ್ತು. ಈಗ ಈ OSನಲ್ಲಿರುವ ಕ್ಯಾಮೆರಾ ಗೋ ಅಪ್ಲಿಕೇಶನಿನಲ್ಲಿ ಗೂಗಲ್ ಪಿಕ್ಸೆಲ್ ಶ್ರೇಣಿಯ ಫೋನುಗಳಲ್ಲಿರುವಂತೆಯೇ ನೈಟ್ ಮೋಡ್ ಹಾಗು HDR ಆಯ್ಕೆಯನ್ನು ಬಿಡುಗಡೆಗೊಳಿಸಲಿದೆ. ಫ್ಲ್ಯಾಷ್ ಇಲ್ಲದೆ, ಕಡಿಮೆ-ವೆಚ್ಚದ ಫೋನ್‌ಗಳಲ್ಲಿ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಇದು ಸಹಕಾರಿಯಾಗುತ್ತದೆ.

ಕಡಿಮೆ ಬೆಳಕಿನ ಸಮಯದಲ್ಲಿ ತೆಗೆದ ಪಟ ಚೆನ್ನಾಗಿ ಕಾಣಬೇಕಾದರೆ Long Exposure ಹಾಗು Noise reduction ಮಾಡುವ ಸಾಮರ್ಥ್ಯ ಹೊಂದಿರಬೇಕು. ಇದು ಸಾಮಾನ್ಯವಾಗಿ ಕಡಿಮೆ ವೆಚ್ಚದ ಫೋನ್‌ಗಳಲ್ಲಿ ಕಾಣಸಿಗುವುದಿಲ್ಲ. ಅದಕ್ಕೆ ಪ್ರತಿಯಾಗಿ ಕ್ಯಾಮೆರಾದಲ್ಲಿನ Burst-modeಅನ್ನು ಫ್ಲಾಶ್ ಇಲ್ಲದೇ ಬಳಸಿ ಬಹಳಷ್ಟು ಪಟಗಳನ್ನು ಒಮ್ಮೆಲೆ ಕ್ಲಿಕ್ಕಿಸಿ, ತತ್ರಾಂಶದ ಸಹಾಯದಿಂದ ಉತ್ತಮವಾಗಿ ಕಾಣುವಂತೆ ಮಾಡಲಾಗಿದೆ. ಆದರೆ ಪಿಕ್ಸೆಲ್ ನ ‘ನೈಟ್ ಸೈಟ್’ನಲ್ಲಿರುವ ಗುಣಮಟ್ಟ ಇಲ್ಲಿ ಇರುವುದಿಲ್ಲ ನಿಮಿಗಿದು ತಿಳಿದಿರಲಿ.

ಗೂಗಲ್ ಮೊದಲು ನೋಕಿಯಾ 1.3(Nokia 1.3), ವಿಕೊ ವೈ 61(Wiko Y61) ಮತ್ತು ವಿಕೊ ವೈ 81(Wiko Y81) ಮೊಬೈಲುಗಳಿಗೆ, ‘ನೈಟ್ ಮೋಡ್’ ಅನ್ನು ಲಭ್ಯವಾಗುವಂತೆ ಮಾಡುತ್ತಿದೆ. ನವೀಕರಿಸಿದ ಕ್ಯಾಮೆರಾ ಅಪ್ಲಿಕೇಶನ್ ಇತರ ಆಂಡ್ರಾಯ್ಡ್ ಗೋ ಮಾದರಿಗಳಲ್ಲಿ ಬರಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಇನ್ನು HDR ಬೆಂಬಲ ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಗೋನಲ್ಲಿ ಬರುವುದಾಗಿ ಹೇಳಿರುವುದರಿಂದ, ಇನ್ನಷ್ಟು ಗುಣಮಟ್ಟದ ಪಟಗಳನ್ನು ತೆಗೆಯಲು ಸಹಕಾರಿಯಾಗುತ್ತದೆ. ಈ ವೈಶಿಷ್ಟ್ಯಗಳು, ವಿಭಿನ್ನ ಹಾರ್ಡ್ವೇರ್ ಹೊಂದಿರುವ ಫೋನುಗಳಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ಕಾದು ನೋಡಬೇಕು.