ಕೆಲ ದಿನಗಳ ಹಿಂದೆ ನ್ಯೂರಾಲಿಂಕ್ ಕಂಪನಿ ದಿ ಲಿಂಕ್ (The Link ) ಎನ್ನುವ ಗ್ಯಾಜೆಟನ್ನು ಅನಾವರಣಗೊಳಿಸಿತು . ಏನಿದರ ವಿಶೇಷತೆ ಎಂದು ತಿಳಿಯೋಣ .
ನಮ್ಮ ಮೆದುಳಿನಲ್ಲಿ ಇರುವ ಮಿಲಿಯಾಂತರ ನ್ಯೂರಾನ್ ಗಳು ವಿದ್ಯುತ್ ಸಂಕೇತಗಳಿಂದ ಸಂದೇಶ ರವಾನೆ ಮಾಡುತ್ತವೆಂದು ನಮಗೆಲ್ಲ ಗೊತ್ತು. ಇದೇ ಆಧಾರದ ಮೇಲೆ ಈ ಕಂಪನಿ ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ (BCI) ಎನ್ನುವ ತಂತ್ರಜ್ಞಾನ ಬಳಸಿ ಈ ಸಾಧನವನ್ನು ತಯಾರಿಸಿದ್ದಾರೆ.

ಕಂಪನಿಯ ಮುಖ್ಯ ನ್ಯೂರೋಸೈನ್ಸ್ ಸರ್ಜನ್ ಮ್ಯಾಥ್ಯೂ ಮ್ಯಾಕ್‌ಡೌಗಲ್ ಮಾತನಾಡುತ್ತಾ, ನ್ಯೂರಾಲಿಂಕ್ ನ ಪ್ರಥಮ ಕ್ಲಿನಿಕಲ್ ಪ್ರಯೋಗಗಳು paraplegia (ಪ್ಯಾರಾಲಿಸಿಸ್ ) ರೋಗಿಗಳ ಚಿಕಿತ್ಸೆ ಬಗ್ಗೆ ಒತ್ತು ನೀಡುವುದಾಗಿ ಹೇಳಿದರು.
ನ್ಯೂರಾಲಿಂಕ್ ಸಾಧನನ ಒಂದು ರೂಪಾಯಿಯಷ್ಟು ಸುತ್ತಳತೆ ಹೊಂದಿದ್ದು, ಬ್ಲೂಟೂತ್ ನಿಂದ ನಿಮ್ಮ ಮೊಬೈಲ್ ಗೆಸಂಪರ್ಕ ಸಾಧಿಸಬಲ್ಲದು. ಈ ಸಾಧನವು ಬುರುಡೆ ಒಳಗೆ ಇಂಪ್ಲಾಂಟ್ಮಾಡಲಾಗುವುದಾದ್ದರಿಂದ ನಿಸ್ತಂತು (wireless ) ಚಾರ್ಜಿಂಗ್ ಅನ್ನು ಹೊಂದಿದೆ.
ಕಳೆದ ಜುಲೈ ತಿಂಗಳಿನಲ್ಲಿ ಯುನೈಟೆಡ್ ಸ್ಟೇಟ್ಸ್ ನ FDA ಸಂಸ್ಥೆಯಿಂದ ಅನುಮತಿ ದೊರೆತಿದ್ದು, ಕಂಪನಿಯು ಇದರ ಬೆಲೆಯನ್ನು ಕ್ರಮೇಣ ಕಣ್ಣಿನ ಲೇಸರ್ ಸರ್ಜರಿಯಷ್ಟು ಮಾಡುವ ಉದ್ದೇಶ ಹೊಂದಿದೆ.