ಭಾರತೀಯರಿಗೆ Netflix ಉಚಿತ!

Share

ಜಗತ್ತಿನಾದ್ಯಂತ ಸುಮಾರು 19 ಕೋಟಿಯಷ್ಟು ಚಂದಾದಾರರನ್ನು ಹೊಂದಿರುವ ಅಮೆರಿಕಾದ ಆನ್ಲೈನ್ ಸ್ಟ್ರೀಮಿಂಗ್ ಕಂಪನಿ Netflix, ಡಿಸೆಂಬರಿನಲ್ಲಿ 2 ದಿನಗಳ ಕಾಲ ಭಾರತೀಯರಿಗೆ ಉಚಿತವಾಗಿ ಸೇವೆಯನ್ನು ನೀಡಲಿದೆ. ಈ ಸೇವೆಗೆ ‘StreamFest’ ಎಂದು ಹೆಸರಿಡಲಾಗಿದೆ.

ಕಂಪನಿಯ ಸಿ.ಓ.ಓ. ಗ್ರೆಗ್ ಪೀಟರ್ಸ್ ಮಾಹಿತಿಯನ್ನು ಖಚಿತಪಡಿಸಿದ್ದಾರೆ ಎಂದು Protocol ವರದಿ ಮಾಡಿದೆ. Netflix ನಲ್ಲಿ ‘StreamFest’ ಡಿಸೆಂಬರ್ 4 ರಂದು ಆರಂಭಗೊಳ್ಳಲಿದೆ. ಈ ಸೇವೆಯನ್ನು ಇಂತಿಷ್ಟು ಮಂದಿಗೆ ಮಾತ್ರ ಸೀಮಿತ ಎಂದು ತಿಳಿಸಲಾಗಿದೆ.

ಇತ್ತೀಚೆಗಷ್ಟೇ Netflix ತನ್ನ 30 ದಿನದ ಉಚಿತ ಸೇವೆಯನ್ನು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ರದ್ದುಗೊಳಿಸಿತ್ತು. ‘StreamFest’ ಮೂಲಕ ಭಾರತದಲ್ಲಿ ಹೊಸ ಚಂದಾದಾರರನ್ನು ಸೆಳೆಯುವ ಪ್ರಯತ್ನ ನಡೆಸಿದೆ.

ಈ ಹಿಂದೆ Netflix ತನ್ನ 30 ದಿನದ ಉಚಿತ ಸೇವೆ ಪಡೆಯಲು ಪೇಮೆಂಟ್ ಆಯ್ಕೆಗಳನ್ನು ಕಡ್ಡಾಯವಾಗಿ ನೀಡಬೇಕಿತ್ತು. ಆದರೆ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲಾಗುವ ಉಚಿತ ಸೇವೆಯಲ್ಲಿ ಯಾವುದೇ ಪೇಮೆಂಟ್ ಆಯ್ಕೆ ನೀಡುವ ಅವಶ್ಯಕತೆ ಇಲ್ಲ. ಕೇವಲ ನಿಮ್ಮ ಇಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಿ signup ಆಗುವ ಮೂಲಕ ಸೇವೆಯನ್ನು ಸವಿಯಬಹುದು. 2 ದಿನದ ಉಚಿತ ಸೇವೆ ಮುಗಿದ ನಂತರ ಚಂದಾದಾರಿಕೆಯನ್ನು ಕೊಳ್ಳಬೇಕಾಗುತ್ತದೆ.

streamfest ಬಗೆಗಿನ ಸಂಪೂರ್ಣ ಮಾಹಿತಿ Netflix ಅಧಿಕೃತವಾಗಿ ಹೊರಬಿಡುವವರಿಗು ಕಾದುನೋಡಬೇಕಷ್ಟೆ.