ಮಾನವನನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದ ಮೊದಲ ಖಾಸಗಿ ಕಂಪನಿ: Space-X

Share

ನಿಮಗೆಲ್ಲ ಗೊತ್ತಿದ್ದಂತೆಯೇ ನಾಸಾ ತನ್ನ ಗಗನಯಾತ್ರಿಕರನ್ನು ಬಾಹ್ಯಾಕಾಶಕ್ಕೆ ಕಳಿಸುವಲ್ಲಿ ಬಹಳಷ್ಟು ಬಾರಿ ಎಡವಿಡದ್ದರಿಂದ ಈ ಜವಾಬ್ದಾರಿಯನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆಗೆ ನೀಡಲಾಗಿತ್ತು. ಆದರೆ ಖಾಸಗಿ ಕಂಪನಿ Space-X ಭೂಮಿಯಾಚೆಗೆ ಉಪಗ್ರಹ ಮತ್ತು International Space Station(ISS) ಗೆ ಬೇಕಾದ ಸರಕು ಸಾಮಗ್ರಿಗಳನ್ನು ಕಳಸುವಲ್ಲಿ ಯಶಸ್ವಿಯಾದ್ದರಿಂದ, ನಾಸಾ ತನ್ನ ಗಗನಯಾತ್ರಿಗಳನ್ನು ಕೊಂಡೊಯ್ಯುವಲ್ಲಿ Space-X ನ ಸಹಾಯ ಕೇಳಿತ್ತು.

ಟೆಸ್ಟಿಂಗ್ ಅಂಗವಾಗಿ ಕಳೆದ ಮೇ ತಿಂಗಳಲ್ಲಿ, Space-X, ನಾಸಾದ ಇಬ್ಬರು ಸಂಶೋಧಕರನ್ನು ISS ನತ್ತ ಕೊಂಡುಯ್ಯುವಲ್ಲಿ ಯಶಸ್ವಿಯಾಗಿತ್ತು. ಇದರ ಮುಂದುವರೆದ ಭಾಗವಾಗಿ ನವೆಂಬರ್ 15ರಂದು Crew-1 ಯೋಜನೆಯಡಿಯಲ್ಲಿ 4 (ನಾಸಾ ಗಗನಯಾತ್ರಿಗಳಾದ ಮೈಕೆಲ್ ಹಾಪ್ಕಿನ್ಸ್, ವಿಕ್ಟರ್ ಗ್ಲೋವರ್, ಶಾನನ್ ವಾಕರ್ ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ ಗಗನಯಾತ್ರಿ ಸೂಚಿ ನೊಗುಚಿ) ಗಗನಯಾತ್ರಿಗಳನ್ನೊಳಗೊಂಡ spacecraft ಮತ್ತು rocket ಯಶಸ್ವಿಯಾಗಿ ISS ನೆಡೆಗೆ ಚಿಮ್ಮಿತ್ತು. ಇಂದು ISSಗೆ docking ಪ್ರಕ್ರಿಯೆ ಪೂರ್ಣಗೊಂಡಿದ್ದು Crew-1 ಬಹುತೇಕ ಯಶಸ್ವಿಯಾದಂತಾಗಿದೆ.

ಇನ್ನು ಮುಂದೆ ನಾಸಾದ ಗಗನಯಾನಿಗಳನ್ನು ಭೂಮಿಯಿಂದ ISS ಗೆ ಮತ್ತು ISS ನಿಂದ ಭೂಮಿಯೆಡೆಗೆ ಕರೆದೊಯ್ಯುವ ಹೊಣೆಯನ್ನು Space-X ನಿರ್ವಹಿಸಲಿದೆ. Crew-1ನ ಗಗನಯಾತ್ರಿಗಳು 6 ತಿಂಗಳ ಕಾಲ ISS ನಲ್ಲಿಯೇ ಉಳಿಯಲಿದ್ದಾರೆ. Space-X ತನ್ನ Crew-2 ಯೋಜನೆಯಲ್ಲಿ ಭೂಮಿಯಿಂದ ಮತ್ತೆ 4 ಗಗನಯಾತ್ರಿಗಳನ್ನು ISS ಗೆ ಸೇರಿಸಲಿದ್ದು, Crew-1 ನಲ್ಲಿ ಪಾಲ್ಗೊಂಡಿದ್ದ ಗಗನಯಾತ್ರಿಗಳು ವಾಪಸಾಗಲಿದ್ದಾರೆ.

ಈ ಮೂಲಕ ಮಾನವನ್ನೊಳಗೊಂಡ ಗಗನಯಾನದಲ್ಲಿ ಖಾಸಗಿ ಕಂಪನಿಗಳು ಪ್ರವೇಶ ಪಡೆದಂತಾಗಿದೆ. ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

Docking ಪ್ರಕ್ರಿಯೆಯ ಸಂಪೂರ್ಣ ವಿಡಿಯೋ ನಾಸಾ ಮತ್ತು Space-X ನ ಯೌಟ್ಯೂಬ್ ನಲ್ಲಿ ಲಭ್ಯವಿದೆ.