ನಾಸಾದಿಂದ ಖಾಸಗಿ ಸ್ಪೇಸ್ ಏಜನ್ಸಿಗಳಿಗೆ ಚಂದ್ರನ ಚೂರು ತರುವ ಸವಾಲು(NASA Asks Commercial Companies to Collect Moon Rocks)

Share

ನಾಸಾ 2030ರಲ್ಲಿ ಮೊದಲ ಮಾನವನನ್ನು ಮಂಗಳ ಗ್ರಹಕ್ಕೆ (Mars ) ಕಳಿಸುವ ಯೋಜನೆ ಹೊಂದಿದೆ ಹಾಗೂ ಈ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಸಹ ಮಾಡಿಕೊಳ್ಳುತ್ತಿದೆ.ಇದರ ಜೊತೆಗೆ ಆರ್ಟೆಮಿಸ್ (Artemis) ಯೋಜನೆಯಡಿಯಲ್ಲಿ 2024 ರ ಒಳಗೆ ಮೊದಲ ಮಹಿಳಾ ಗಗನಯಾತ್ರಿ ಯನ್ನು ಚಂದ್ರನಲ್ಲಿ ಕಳಿಸಲಿದೆ. ಆರ್ಟೆಮಿಸ್ ಯೋಜನೆಯ ಮುಖ್ಯ ಉದ್ದೇಶ, ಮುಂದಿನ ದಶಕದೊಳಗೆ ಚಂದ್ರನಲ್ಲಿ ಮಾನವ ನೆಲೆ ಕಂಡುಕೊಂಡು ವೈಜ್ಞಾನಿಕ ಪಯೋಗಗಳನ್ನು ನಡೆಸುವಂತಾಗಬೇಕು ಎನ್ನುವುದಗಿದೆ.

ಆರ್ಟೆಮಿಸ್ ಯೋಜನೆಯಡಿಯಲ್ಲಿ ನಾಸಾ ಖಾಸಗಿ ಸ್ಪೇಸ್ ಏಜನ್ಸಿಗಳಿಗೆ ಚಂದ್ರನ ಅಂಗಳದಿಂದ ಮಣ್ಣು /ಕಲ್ಲಿನ ಮಾದರಿಗಳನ್ನು ತರಲು ಸವಾಲು ಹಾಕಿದೆ.ಆರ್ಟೆಮಿಸ್ ನಲ್ಲಿ ಭಾಗವಿಸುವ ಇಚ್ಛೆಯಿರುವ ಕಂಪನಿಯು ಚಂದ್ರನ ಅಂಗಳದಿಂದ ಮಣ್ಣು /ಕಲ್ಲಿನ ಮಾದರಿ ಸಂಗ್ರಹಿಸುವ ದೃಶ್ಯ ಹಾಗೂ ಸಂಗ್ರಹಿಸಿದ ಸ್ಥಳದ ಮಾಹಿತಿಯನ್ನು ನಾಸಾಗೆ ನೀಡಬೇಕು.ಇದು ಬಾಹ್ಯಾಕಾಶವನ್ನುವಾಣಿಜ್ಯ ವಹಿವಾಟಿಗೆ ಬಳಸುವ ಮೊದಲ ಹೆಜ್ಜೆ. ಆರ್ಟೆಮಿಸ್ ಯೋಜನೆಯಿಂದ ಚಂದ್ರನಂಗಳದಲ್ಲಿ ಮಂಗಳಕ್ಕೆ ಹೋಗುವ ಮುನ್ನ ಬಾಹ್ಯಾಕಾಶ ಉಪಕರಣ ಹಾಗು ತಂತ್ರಜ್ಞಾನ ವನ್ನು ಪರೀಕ್ಷಿಸಲು ಉತ್ತಮ ಅವಕಾಶ ದೊರೆಯಲಿದೆ ಎಂದು ನಾಸಾ ತಿಳಿಸಿದೆ .

ಸ್ಪೇಸ್ ಎಕ್ಸ್ (SpaceX), ಬ್ಲೂ ಆರಿಜಿನ್ (blue origin ) ಮುಂತಾದ ಖಾಸಗಿ ಸ್ಪೇಸ್ ಏಜೆನ್ಸಿ ಗಳು ನಾಸಾದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಹಾತೊರೆಯುತ್ತಿರಬಹುದು.