ತುಕ್ಕು ಹಿಡಿಯುತ್ತಿರುವ ಚಂದ್ರ ( Moon is Rusting )

Share

ಹೌದು, ನಾಸಾದ ವಿಜ್ಞಾನಿಗಳು ಭಾರತದ ಚಂದ್ರಯಾನ ೧ರಲ್ಲಿರುವ Moon Mineralogy Mapperನ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಣೆ ಮಾಡಿದಾಗ ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿರುವ ಶಿಖರಗಳಲ್ಲಿ ಕಬ್ಬಿಣದ ಖನಿಜ ಆಮ್ಲಜನಕದೊಂದಿಗೆ (Oxygen) ರಾಸಾಯನಿಕ ಪ್ರತಿಕ್ರಿಯಗೆ ಒಳಗಾಗಿ Iron Oxide ಆಗಿ ಬದಲಾಗಿರುವುದು ಕಂಡು ಬಂದಿದೆ.

ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವದಲ್ಲಿ ಕಂಡು ಬಂದಿರುವ ಐರನ್ ಆಕ್ಸೈಡ್ ಖನಿಜ

ವಿಜ್ಞಾನಿಗಳ ಪ್ರಕಾರ ಇದರ ಕಾರಣ ಭೂಮಿ. ಹಲವು ಬಿಲಿಯನ್ ವರ್ಷಗಳಿಂದ ಆಮ್ಲಜನಕವು ಭೂಮಿಯ ಹೊರಭಾಗದ ವಾತಾವರಣದಿಂದ ಸೌರ ಮಾರುತಗಳ (Solar Winds) ಮುಖಾಂತರ ಚಂದ್ರನ ಕಡೆಗೆ ಬೀಸುತ್ತಾ ಬಂದಿರುವುದು ಇದಕ್ಕೆ ಕಾರಣವಿರಬಹುದು ಎಂದು ಅಂದಾಜಿಸಿದ್ದಾರೆ.

ಹೆಮಟೈಟ್ (ಐರನ್ ಆಕ್ಸೈಡ್) ಅಂಶ ಚಂದ್ರನ ವಾತಾವರಣದಲ್ಲಿ ಅಲ್ಪ ಪ್ರಮಾಣದ ಆಮ್ಲಜನಕದ ಇರುವಿಕೆಯ ಸಾಧ್ಯತೆಯನ್ನು ಖಚಿತಪಡಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದಾದ್ದರಿಂದ ಇದು ಖಗೋಳ ವಿಜ್ಞಾನದ ಆಸಕ್ತರಲ್ಲಿ ಕುತೂಹಲ ಕೆರಳಿಸಿದೆ.

ಇತ್ತೀಚಿಗೆ ನಾಸಾ ಖಾಸಗಿ ಸ್ಪೇಸ್ ಸಂಸ್ಥೆಗಳಿಗೆ ಆರ್ಟೆಮಿಸ್ (Artemis) ಯೋಜನೆಯಡಿಯಲ್ಲಿ ಚಂದ್ರನಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲು ಕರೆ ನೀಡಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ಈ ಲೇಖನ ಓದಬಹುದು.

ಮಾಹಿತಿ ಮೂಲ : https://advances.sciencemag.org/content/6/36/eaba1940