ಡಾರ್ಕ್ ವೆಬ್‌ನಲ್ಲಿ ಪಿಎಂ ನರೇಂದ್ರ ಮೋದಿಯವರ ವೆಬ್‌ಸೈಟ್‌ನ ಡೇಟಾ ಸೋರಿಕೆ: CYBLE, INC ವರದಿ

Share

ಸೆಪ್ಟೆಂಬರ್ 3ರಂದು ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ, ಪ್ರಧಾನಿ ಮಂತ್ರಿ ಕೋವಿಡ್ 19 ಪರಿಹಾರ ನಿಧಿಗೆ ಹಣ ನೀಡುವಂತೆ ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಮೂಲ ಕಾರಣ ಮೋದಿಯವರ ವೈಯಕ್ತಿಕ ವೆಬ್ಸೈಟ್ narendramodi.in ಗೆ ಲಿಂಕ್ ಆಗಿರುವುದು ಎಂದು ಹೇಳಲಾಗಿತ್ತು.

ಸೈಬರ್ ಸುರಕ್ಷತಾ ಸಂಸ್ಥೆ, ಸೈಬಲ್, ವರದಿಯಲ್ಲಿ ವೈಯಕ್ತಿಕವಾಗಿ-ಗುರುತಿಸಬಹುದಾದ 5,74,000 ಬಳಕೆದಾರರ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ ಮತ್ತು ಅದರಲ್ಲಿ 2,92,000 ಕ್ಕೂ ಹೆಚ್ಚು ಹಣ ದೇಣಿಗೆ ನೀಡಿದವರಾಗಿದ್ದಾರೆ ಎಂದು ಪ್ರಕಟಿಸಿದೆ.

ಸೋರಿಕೆಯಾದ ಡೇಟಾಬೇಸ್‌ಗಳಲ್ಲಿ, ಒಂದರಲ್ಲಿ ಹೆಸರುಗಳು, ಇಮೇಲ್ ವಿಳಾಸಗಳು ಮತ್ತು ಮೊಬೈಲ್ ಸಂಖ್ಯೆಗಳು ಒಳಗೊಂಡಿದೆ ಹಾಗು ಇನ್ನೊಂದರಲ್ಲಿ ಬ್ಯಾಂಕ್ ಉಲ್ಲೇಖ ಸಂಖ್ಯೆಗಳು, ಪಾವತಿಸಿದ ವಿಧಾನಗಳು ಸೇರಿದಂತೆ ದೇಣಿಗೆಯ ವಿವರಗಳಿವೆ.

ದೊರಕಿರುವ ಡೇಟಾಬೇಸ್ ನಲ್ಲಿ ಪ್ರಧಾನಿ ಮಂತ್ರಿ ಕೋವಿಡ್ 19 ಪರಿಹಾರ ನಿಧಿ, ಸ್ವಚ್ಚ ಭಾರತ್, ಬೇಟಿ ಬಚಾವ್ ಬೇಟಿ ಪಡಾವೋ ಮತ್ತು ಬಿಜೆಪಿಯ ಪಾರ್ಟಿ ಫಂಡ್ ಗೆ ನೀಡಿರುವ ಹಣದ ಮಾಹಿತಿ ಲಭ್ಯವಾಗಿದೆ. ಈ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲಾಸಂಭವವಿದೆ.

ಸೋರಿಕೆಯಾಗಿರುವ ಡೇಟಾ amibreached.com ನಲ್ಲಿ ಲಭ್ಯವಿದ್ದು, ನೀವೇನಾದರು ಮೋದಿಯವರ ವೆಬ್ಸೈಟಿನಲ್ಲಿ ಲಾಗಿನ್ ಆಗಿದ್ದಲ್ಲಿ ನಿಮ್ಮ ಡೇಟಾ ಬಹಿರಂಗವಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.