ನಿಮ್ಮ ಬ್ರೌಸರ್ನಲ್ಲಿ ಬಹಳಷ್ಟು ಟ್ಯಾಬ್ ಗಳನ್ನು ತೆರೆದು ಅವುಗಳ ನಡುವೆ switch ಆಗಲು ಕಷ್ಟವಾಗುತ್ತಿದೆಯೇ? ಯೋಚನೆ ಬೇಡ. Microsoft Edge ಬ್ರೌಸರ್ ತನ್ನ ಹೊಸ ಅಪ್ಡೇಟ್ ನಲ್ಲಿ vertical ಟ್ಯಾಬ್ ಗಳ ವಿನ್ಯಾಸ ಹೊರಬಿಟ್ಟಿದೆ. ವರ್ಷದ ಮೊದಲಲ್ಲಿ ಬಿಡುಗಡೆಯಾದ Microsoft Edge ಬ್ರೌಸರ್ 10 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ ಗಳಿಂದ ಜನಮನ ಗೆದ್ದಿತ್ತು. ಹೊಸ featureಗಳ ಮೂಲಕ browsing ಅನುಭವ ಸುಧಾರಿಸಿದ್ದು, ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕಳೆದ ಮಾರ್ಚ್ ನಲ್ಲಿ Microsoft Edge, vertical ಟ್ಯಾಬ್ ಗಳ ಬಗ್ಗೆ ಮಾತನಾಡಿತ್ತು ಆದರೆ ಅದಾದ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ನಿನ್ನೆಯಿಂದ ಕೆಲವು ಬಳಕೆದಾರರಿಗೆ ಟೆಸ್ಟಿಂಗ್ ಅಂಗವಾಗಿ ಪ್ರಯೋಗಾತ್ಮಕವಾಗಿ ಹೊರಬಿಟ್ಟಿದೆ. Microsoft Edge vertical ಟ್ಯಾಬ್ ಜೋಡಣೆ ಹೊಂದಿರುವ ಮೊದಲ ಬ್ರೌಸರ್.
ಟ್ಯಾಬ್ ಗಳನ್ನು ವರ್ಟಿಕಲ್ ಆಗಿ ಜೋಡಿಸುವುದರಿಂದ ಸುಲಭವಾಗಿ ಆಯ್ದುಕೊಳ್ಳಲು ಸಹಕಾರಿಯಾಗಲಿದ್ದು, ಟ್ಯಾಬ್ ಗಳ ನಡುವೆ switch ಆಗಲು ಸುಲಭವಾಗುತ್ತದೆ.
ಈ ಅಪ್ಡೇಟ್ ನ ಮೂಲಕ Microsoft, ಗೂಗಲ್ ನ chrome ಬ್ರೌಸರ್ ಗೆ ಕಠಿಣ ಪೈಪೋಟಿ ಒಡ್ಡಿದೆ. ನಿಮ್ಮ ಬಳಸುತ್ತಿರುವ Microsoft Edge ನಲ್ಲಿ vertical ಟ್ಯಾಬ್ ಜೋಡಣೆಯ ಆಯ್ಕೆ ಲಭ್ಯವಿದೆಯೇ ಪರೀಕ್ಷಿಸಿಕೊಳ್ಳಿ.