ನೀವು ವಿಡಿಯೋ ಗೇಮ್ಸ್ ಪ್ರಿಯರಾಗಿದ್ದಲ್ಲಿ ಬೆಥೆಸ್ಡಾ ಸಾಫ್ಟ್ ವರ್ಕ್ಸ್(Bethesda softworks) ಕಂಪನಿಯ ಬಗ್ಗೆ ಕೇಳಿರುತ್ತೀರಿ. ಬೆಥೆಸ್ಡಾ ಸಾಫ್ಟ್ ವರ್ಕ್ಸ್ ಈಗ ಝೆನಿಮ್ಯಾಕ್ಸ್ ಕಂಪನಿಯ ಒಡೆತನದಲ್ಲಿದೆ. ಬೆಥೆಸ್ಡಾ ಸಾಫ್ಟ್ ವರ್ಕ್ಸ್ , Wolfenstein, The Elder Scrolls ಮತ್ತು Dishonored ಗೇಮ್ ಗಳು ಸೇರಿದಂತೆ ಹಲವಾರು ಹಿಟ್ ಗೇಮ್ಗಳನ್ನು ವಿಡಿಯೋ ಗೇಮಿಂಗ್ ಪ್ರಪಂಚಕ್ಕೆ ಕೊಟ್ಟಿದೆ.
ಮೈಕ್ರೋಸಾಫ್ಟ್ ಝೆನಿಮ್ಯಾಕ್ಸ್ ಅನ್ನು ಬರೋಬ್ಬರಿ 7.5 ಬಿಲಿಯನ್ ಡಾಲರ್ ಗೆ ಕೊಳ್ಳುವ ಬಗ್ಗೆ ಹೇಳಿಕೊಂಡಿದೆ. ಮೈಕ್ರೋಸಾಫ್ಟ್ ನ ಗೇಮಿಂಗ್ ಕನ್ಸೋಲ್ X Box ಗಳು ವಿಡಿಯೋ ಗೇಮಿಂಗ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು ಬೆಥೆಸ್ಡಾದ ಮುಂಬರಲಿರುವ ಗೇಮುಗಳು X Box Game Pass ನ ಚಂದಾದಾರರಿಗೆ ಲಭ್ಯವಿರುತ್ತವೆ.
ಝೆನಿಮ್ಯಾಕ್ಸ್ ನ ಸೇರ್ಪಡೆ 2021ರ ಮೊದಲಾರ್ಧದಲ್ಲಿ ಪೂರ್ಣಗೊಳ್ಳಲಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ಝೆನಿಮ್ಯಾಕ್ಸ್ ನ ಸೇರ್ಪಡೆ ಮೈಕ್ರೋಸಾಫ್ಟ್ ನ ವಿಡಿಯೋ ಗೇಮಿಂಗ್ ವಿಭಾಗವನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ. ಮೈಕ್ರೋಸಾಫ್ಟ್ X Box ಸರಣಿಯ Xbox Series X ಮತ್ತು Xbox Series S ಗೇಮಿಂಗ್ ಕನ್ಸೋಲ್ ಗಳು ಇದೆ ನವೆಂಬರ್ 10ಕ್ಕೆ ಮಾರುಕಟ್ಟೆಗೆ ಬರಲಿವೆ.
ಸುದ್ದಿಯ ಮೂಲ: ಮೈಕ್ರೋಸಾಫ್ಟ್ ಬ್ಲಾಗ್