
MapmyIndia ಮತ್ತು ISRO ಜೊತೆಗೂಡಿ ಮೇಕ್ ಇನ್ ಇಂಡಿಯಾ ಭಾಗವಾಗಿ, ಭಾರತದ ನಕ್ಷೆಯನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ.
ಇದಕ್ಕಾಗಿ MapmyIndia ಇಸ್ರೋ ನ ಸ್ಯಾಟಲೈಟ್ ಗಳನ್ನು ಬಳಸಲಿದ್ದು, ಸ್ಯಾಟಲೈಟ್ ಚಿತ್ರಗಳು ಮತ್ತು earth observation data ಬಳಸಿ ಭೂಮಿಯ ಮೇಲ್ಮೈ ಲಕ್ಷಣಗಳನ್ನು ಗುರುತಿಸಲು ಬಳಸಲಾಗುವುದು.
ಇದರ ಜೊತೆಗೆ, ಸ್ವದೇಶೀ ನಿರ್ಮಿತ NavIC (Navigation with Indian Constellation) ಕೂಡ ಈ ಮ್ಯಾಪ್ ನ ಬಳಕೆ ಮಾಡಲಿದ್ದು, ವಿದೇಶಿ ಮ್ಯಾಪಿಂಗ್ ತಂತ್ರಾಂಶಗಳ ನೆರವು ಪಡೆಯುವ ಅವಶ್ಯಕತೆ ಕಡಿಮೆಯಾದಂತಾಗುತ್ತದೆ.
ಇಸ್ರೋ ನ Bhuvan ಕೂಡ ಭೌಗೋಳಿಕ ನಕ್ಷೆ ಮತ್ತು ಇತರೆ ಅಧ್ಯಯನಕ್ಕಾಗಿ ಬೇಕಾದ ಅಂಕಿ ಅಂಶಗಳನ್ನು ಪಡೆಯುವಲ್ಲಿ ನೆರವಾಗಲಿದೆ.
ಇಸ್ರೋ ನ VEDAS ಮತ್ತು MOSDAC ನಂತಹ platform ಗಳು ಭೂಮಿಯ ಹವಾಮಾನ, ಸಮುದ್ರದಲ್ಲಿ ಏಳುವ ಅಲೆಗಳ ಪ್ರಮಾಣ, ಮತ್ತು ನೀರಿನ ಭಾಷ್ಪೀಭವನ ಚಕ್ರದ ಬಗ್ಗೆ ಉಪಯುಕ್ತ ಮಾಹಿತಿ ಪಡೆಯಲಿವೆ.
MapmyIndia ದ ಸಿಇಒ ರೋಹನ್ ವರ್ಮಾ ಮಾತನಾಡುತ್ತಾ, – ಕೆಲ ವಿದೇಶಿ ಕಂಪನಿಗಳು ಮ್ಯಾಪಿಂಗ್ ತಂತ್ರಾಂಶಗಳನ್ನು ಮೇಲ್ನೋಟಕ್ಕೆ ಉಚಿತವಾಗಿ ನೀಡಿದರೂ, ಬೇರೆ ಕಂಪನಿಗಳು ಅವರ ನಕ್ಷೆ ಬಳಸಲು ದುಬಾರಿ ಶುಲ್ಕ ಕಟ್ಟಬೇಕು. ಇದರಿಂದಾಗಿ ಮುಂದಿನ ಯೋಜನೆಗಳಿಗೆ ಉಚಿತವಾಗಿ ದೇಶೀಯ ನಿರ್ಮಿತ ನಕ್ಷೆಗಳನ್ನು ಬಳಸಬಹುದು ಎಂದು ಹೇಳಿದ್ದಾರೆ.