ನಿಮಗೆ ಗೊತ್ತಿರುವಂತಯೇ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗು ಇನ್ನಿತರ ಸಾಮಾಜಿಕ ಜಾಲತಾಣಗಳು ಜಾಹಿರಾತುಗಳನ್ನು ನಿಮ್ಮ ಚಟುವಟಿಕೆಗಳ ಆಧಾರದ ಮೇಲೆ ಆಯಾ ಕಂಪನಿಗಳಿಂದ ಹಣ ಪಡೆದು ತೋರಿಸಲಾಗುತ್ತದೆ.
ಉದಾಹರಣೆಗೆ ನೀವು ಫ್ಲಿಪ್ ಕಾರ್ಟ್ ನಲ್ಲಿ ಫೇಸ್ಬುಕ್ ಬಳಸಿ ಲಾಗಿನ್ ಆಗಿದ್ದೀರಿ ಎಂದುಕೊಳ್ಳೋಣ ಹಾಗು ಅಲ್ಲಿ samsungನ ಸ್ಮಾರ್ಟ್ ಫೋನ್ ಬಗ್ಗೆ ಹುಡುಕಿದ್ದೀರಿ ಎಂದುಕೊಳ್ಳೋಣ. ಈಗ ಫ್ಲಿಪ್ ಕಾರ್ಟ್ ಹಾಗು samsung ಕಂಪನಿಗಳು ಫೇಸ್ ಬುಕ್ ಗೆ ಈ ಡೇಟಾ ನೀಡುವ ಮೂಲಕ ನಿಮ್ಮ ಕಂಟೆಂಟ್ feedನಲ್ಲಿ ಇದರ ಸಂಬಂಧಿತ ಜಾಹೀರಾತುಗಳನ್ನು ಇರಿಸಲಾಗುತ್ತದೆ.
ಈ ರೀತಿ ಫೇಸ್ಬುಕ್ ನ ಹೊರತಾದ ತಂತ್ರಾಂಶ ಹಾಗು ಅಪ್ಲಿಕೇಶನ್ ಗಳಿಂದ ಬರುವ ಡೇಟಾ ಅನುಸಾರ ಬರುವ ಜಾಹಿರಾತುಗಳನ್ನು ನಿಯಂತ್ರಿಸಲು “Off-Facebook Activity” ಎಂಬ ಆಯ್ಕೆ ಲಭ್ಯವಿದೆ. ಇದರಲ್ಲಿ ಆಯ್ದ ತಂತ್ರಾಂಶ ಮತ್ತು ಅಪ್ಲಿಕೇಶನ್ ಗಳಿಂದ ಇನ್ನು ಮುಂದಕ್ಕೆ ಯಾವುದೇ ಜಾಹಿರಾತುಗಳು ಬರದಂತೆ ಮಾಡಬಹುದಾಗಿದೆ.
ಇದರೊಟ್ಟಿಗೆ “Future Off-Facebook Activity” ಆಯ್ಕೆ ನಿಷ್ಕ್ರಿಯಗೊಳಿಸುವ ಮೂಲಕ ಸಂಪೂರ್ಣವಾಗಿ ನೀವು ಫೇಸ್ಬುಕ್ ಬಳಸಿ ಲಾಗಿನ್ ಆದ ತಂತ್ರಾಂಶ ಹಾಗು ಅಪ್ಲಿಕೇಶನ್ ಗಳಿಂದ ಬರುವ ಡೇಟಾ ಬಳಸಿ ಉದ್ದೇಶಿತ ಜಾಹಿರಾತುಗಳನ್ನು ತಡೆಹಿಡಿಯಬಹುದಾಗಿದೆ.
ಹೀಗೆ ನಿಷ್ಕಿರ್ಯಗೊಳಿಸಿದ ಕೂಡಲೇ ನಿಮಗೆ ಫೇಸ್ ಬುಕ್ ನಲ್ಲಿ ಯಾವುದೇ ಜಾಹಿರಾತು ಬರುವುದಿಲ್ಲವೆಂದು ಖುಷಿ ಪಡಬೇಡಿ. ನೀವು ಫೇಸ್ ಬುಕ್ ನಲ್ಲಿ ಹಿಂಬಾಲಿಸುತ್ತಿರುವ Product pageಗಳು ಹಾಗು ನಿಮ್ಮ ದೈನಂದಿನ ಚಟುವಟಿಕೆಯ ಆಧಾರದ ಮೇಲೂ ಜಾಹಿರಾತುಗಳನ್ನು ತೋರಿಸಲಾಗುತ್ತದೆ. ಆದರೆ “Future Off-Facebook Activity” ನಿಷ್ಕ್ರಿಯೆಗೊಳಿಸುವುದರಿಂದ ಕೊಳ್ಳುಬಾಕ ಸಂಸ್ಕೃತಿಗೆ ಕೊಂಚವಾದರೂ ಕಡಿವಾಣ ಹಾಕಿದಂತಾಗುತ್ತದೆ.
“Future Off-Facebook Activity” ನಿಷ್ಕ್ರಿಯಗೊಳಿಸಲು ಕೆಳಗೆ ತೋರಿಸಿದ ಹಾಗೆ ಅನುಸರಿಸಿ
1. ಫೇಸ್ ಬುಕ್ ನ settings>Your Facebook Information ಆಯ್ದುಕೊಳ್ಳಿ.


2. ನಂತರ Off-Facebook Activity > ಬಲ ತುದಿಯಲ್ಲಿರುವ 3 ಚುಕ್ಕೆಗಳನ್ನು ಒತ್ತುವ ಮೂಲಕ manage future activity ಆಯ್ದುಕೊಳ್ಳಿ


3. password ನೀಡಿದ ನಂತರ future off Facebook activity ನಿಷ್ಕ್ರಿಯಗೊಳಿಸಿ.

