ಈ ವರ್ಷದ ಮೊದಲಲ್ಲಿ ಬಿಡುಗಡೆಯಾದ ಆಪಲ್ ಕಂಪನಿಯ ಐಪ್ಯಾಡ್ ಪ್ರೊ (iPad Pro ) LiDAR ಸೆನ್ಸರ್ ನ ಬಳಕೆಗೆ ಬಾರಿ ಸುದ್ದಿ ಮಾಡಿತ್ತು . LiDAR ತಂತ್ರಜ್ಞಾನದ ಬಳಕೆ ಹೊಸದೇನಲ್ಲ ಈ ತಂತ್ರಜ್ಞಾನವನ್ನು ಭೂಮಿಯ ಸಮೀಕ್ಷೆ, ಬೆಟ್ಟ ಗುಡ್ಡಗಳ 3D ಮ್ಯಾಪಿಂಗ್ ಮಾಡಲು, ಸ್ವಯಂ ಚಾಲಿತ ವಾಹನಗಳಲ್ಲಿ ಹಾಗು ಇನ್ನಿತರ ಕ್ಷೇತ್ರಗಳಲ್ಲಿ ಬಳಸುತ್ತಾರೆ. ಈ ಲೇಖನದಲ್ಲಿ LiDAR ತಂತ್ರಜ್ಞಾನ ಹಾಗೂ ಅದರ ಉಪಯೋಗಗಳನ್ನು ತಿಳಿಯೋಣ.
LiDAR ಎಂದರೆ Light Detection And Ranging. LiDAR ತಂತ್ರಜ್ಞಾನ RADAR ತಂತ್ರಜ್ಞಾನದಂತೆ ಕೆಲಸ ಸಾಧಿಸುತ್ತದೆ. ಲೇಸರ್(Laser)ಅನ್ನು ತನ್ನಿಂದ ಹೊರಬಿಟ್ಟು, ಒಮ್ಮೆ ಲೇಸರ್ ಯಾವುದಾದರು ವಸ್ತುವಿನ ಮೇಲಿಂದ ಪ್ರತಿಫಲನ ಹೊಂದಿ ಪುನಃ LiDAR ಕಡೆಗೆ ಬಂದಾಗ ತನ್ನಿಂದ ಆ ವಸ್ತುವಿಗೆ ಇರುವ ದೂರ ಹಾಗು ಅದರ ಗಾತ್ರ ಮತ್ತು ಆಕಾರಗಳನ್ನು 3Dನಲ್ಲಿ ಮ್ಯಾಪ್ ಮಾಡಬಹುದು.
ಸ್ವಯಂ ಚಾಲಿತ ವಾಹನಗಳಲ್ಲಿ ಇದನ್ನು ಬಳಸುವುದರಿಂದ ವಾಹನದ ಸುತ್ತಮುತ್ತಲಿರುವ ವಸ್ತುಗಳನ್ನು real timeನಲ್ಲಿ ಎಷ್ಟು ದೂರದಲ್ಲಿವೆ ಹಾಗು ಅವುಗಳ ನಿಖರವಾದ 3D ಮ್ಯಾಪಿಂಗ್, ಸ್ವಯಂಚಾಲನೆ(self driving) ಪ್ರಕ್ರಿಯೆಯನ್ನು ಇನ್ನಷ್ಟು ನಿಖರ ಹಾಗು ಸುರಕ್ಷಿತವಾಗಿಸಿದೆ.
ಐಪ್ಯಾಡ್ ಪ್ರೊನಲ್ಲಿರುವ LiDAR ಸೆನ್ಸರ್ ವಸ್ತುವಿನ ದೂರವನ್ನು ಅಳೆಯಲು ಹಾಗು augmented reality ಅಪ್ಲಿಕೇಶನ್ ಗಳಲ್ಲಿ ಬಳಸಲಾಗುತ್ತಿದೆ. ಇದು 5ಮೀ ನ ವರೆಗೆ ಇರುವ ಯಾವುದೇ ವಸ್ತುವನ್ನು ಗುರುತಿಸಿ ಅದರ ದೂರವನ್ನು ಅಳೆಯುವ ಸಾಮರ್ಥ್ಯ ಹೊಂದಿದೆ. ಆಪಲ್ ನ Measurement, Room Scan ಅಪ್ಲಿಕೇಶನ್ಗಳು ಇದರ ಸಂಪೂರ್ಣ ಲಾಭ ಪಡೆಯುತ್ತಿವೆ.
ಮೊದಲೇ ಹೇಳಿದಂತೆ LiDAR ನಿಂದ ವಸ್ತುವಿನ ಅಕಾರ ಮತ್ತು ಗಾತ್ರದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗುವುದರಿಂದ augmented realityಯಲ್ಲಿ ಕಂಪ್ಯೂಟರ್ ಜನರೇಟೆಡ್(computer generated) ವಸ್ತುಗಳನ್ನು real timeನಲ್ಲಿ ಅವುಗಳ ಗಾತ್ರಕ್ಕೆ ತಕ್ಕಂತೆ ಅಳವಡಿಸಲು ಅನುಕೂಲವಾಗುತ್ತದೆ.

LiDAR ನ ಭಾದಕಗಳೆಂದರೆ ಮಂಜು, ಹೊಗೆ ಹಾಗು ಮಳೆಯ ವಾತಾವರಣದಲ್ಲಿ ಇದರ ಕಾರ್ಯ ನಿರ್ವಹಣೆ ಅಷ್ಟಕ್ಕಷ್ಟೇ. ಗಾಜಿನ ಗೋಡೆ ಅಥವಾ ವಸ್ತುಗಳು ಪಾರದರ್ಶಕವಾದ್ದರಿಂದ(transparent) LiDAR ಗೆ ಗುರುತಿಸಲು ಕಷ್ಟವಾಗುತ್ತದೆ. LiDAR ಸೆನ್ಸರ್ ದುಬಾರಿಯಾದ್ದರಿಂದ, ಸಧ್ಯಕ್ಕೆ ಕೇವಲ flagship ಮೊಬೈಲ್ಗಳಲ್ಲಿ ಮಾತ್ರ ದೊರೆಯುವ ಸಂಭವ ಹೆಚ್ಚಿದೆ. ಒಂದು ಮೂಲದ ಪ್ರಕಾರ ಐಫೋನ್ 12ರಲ್ಲಿ LiDAR ಸೆನ್ಸರ್ ಅಳವಡಿಸಲಾಗಿದೆ ಎನ್ನುವ ವದಂತಿ ಇದೆ. ನಾಳೆ ಸೆಪ್ಟೆಂಬರ್ 15ರಂದು ಆಪಲ್ ನ ವಾರ್ಷಿಕ event ಇದ್ದು, ಎಲ್ಲರ ಚಿತ್ತ ಅದರತ್ತಲಿದೆ.