ಎರೆಡೆರಡು ಪರದೆಯುಳ್ಳ LG Wing

Share

ಮಾರುಕಟ್ಟೆಯಲ್ಲಿ ಲಭ್ಯವಿರುವ ಡುಯಲ್ ಸ್ಕ್ರೀನ್ ಮೊಬೈಲುಗಳಿಗೆ ಹೋಲಿಸಿದರೆ, LG Electronics “Explorer Project” ಬ್ರಾಂಡಿಂಗ್ನಲ್ಲಿ ಹೊರತಂದಿರುವ LG Wing ವಿಚಿತ್ರವಾಗಿದೆ. ಈ ರೀತಿ ತಿರುಗುವ ಪರದೆಯ ಮೊಬೈಲುಗಳನ್ನು ದಶಕದ ಹಿಂದೆಯೇ LG ಬಿಡುಗಡೆಮಾಡಿತ್ತು. ಅದರ ಮುಂದುವರಿದ ಭಾಗವಿರಬಹುದು.

ಹೊಸ ಅನ್ವೇಷಣೆಯಲ್ಲಿ ನಾವು ಹಿಂದೆ ಇಲ್ಲ ಎಂಬಂತೆ ತನ್ನದೇ ಆದ ಶೈಲಿಯಲ್ಲಿ ಹಿಂದೆಯೂ ಸಹ ಎರಡು ಪರದೆಗಳ ವಿನ್ಯಾಸಗಳನ್ನು LG ಮಾಡಿದೆ. ಉದಾಹರಣೆಗೆ V60 ThinQ. ಈಗ ಬಿಡುಗಡೆಗೊಳಿಸಿರುವ ಸ್ಮಾರ್ಟ್ ಮೊಬೈಲ್ ಇನ್ನಿತರ full screen ಮೊಬೈಲುಗಳಂತೆ ಕಾಣುವ ಈ Wing, ಮೊದಲನೆಯ ಪರದೆಯನ್ನು ತಿರುಗಿಸಿದರೆ ಅಂಗ್ಲ ಭಾಷೆಯ T ಆಕಾರದಲ್ಲಿ ಕಾಣುತ್ತದೆ. ಮೊದಲನೇ ಪರದೆಗಿಂತ ಎರಡನೆಯದು ಸಣ್ಣದಿದೆ. ಎರಡೂ OLED ಪರದೆಗಳಾಗಿವೆ.

ಕಂಪನಿಯ ಮಹತ್ವಾಕಾಂಕ್ಷೆಯ ವಿನ್ಯಾಸ, ಮಲ್ಟಿಟಾಸ್ಕಿಂಗ್ ಮಾಡಲು ಅಂದರೆ ವೀಡಿಯೊ ನೋಡುವಾಗ ಎರಡನೆಯ ಪರದೆಯಲ್ಲಿ ಸಂದೇಶ ಕಳಿಸಲು, goolge maps ಬಳಸಿ ನ್ಯಾವಿಗೇಷನ್ ಮಾಡುವಾಗ ಇನ್ನೊಂದರಲ್ಲಿ ಮೀಡಿಯಾಗೆ ಸಂಬಂಧಪಟ್ಟ ಕಂಟ್ರೋಲುಗಳನ್ನು ಮಾಡಬಹುದಾಗಿದೆ. ಅದಲ್ಲದೆ ಎಲ್ಲಾ ಅಪ್ಲಿಕೇಷನ್ನುಗಳು ಇದರ ಸದುಪಯೋಗ ಪಡೆದರೆ ಚೆನ್ನಾಗಿರುತ್ತದೆ. ಇಲ್ಲವಾದಲ್ಲಿ ಕೆಲವಕ್ಕೆ ಮಾತ್ರ ಸೀಮಿತವಾಗುತ್ತದೆ.

ಇನ್ನು ಕ್ಯಾಮರಾಕ್ಕೆ ಬಂದರೆ ಹಿಂಭಾಗದಲ್ಲಿ 3 ಲೆನ್ಸ್ ಇದ್ದು, ಮುಂಭಾಗದಲ್ಲಿ 32MP pop-up ಸೆಲ್ಫಿ ಕ್ಯಾಮೆರಾ ಇದೆ. ಎರಡನೇ ಪರದೆಯನ್ನು ಹಿಡಿಕೆಯಾಗಿಸಿಕೊಂಡು, gimbleನಲ್ಲಿ ಚಿತ್ರೀಕರಿಸಿದಂತೆ ಎರಡೂ ಕಡೆಯ ಕ್ಯಾಮೆರಾ ಬಳಸಿ ಒಮ್ಮೆಲೆ ಮಾಡಬಹುದಾಗಿದೆ.

ಈ ರೀತಿಯ ಮೊಬೈಲುಗಳು ಬಾಳಿಕೆಯ ವಿಷಯದಲ್ಲಿ ಹಿಂದುಳಿಯುತ್ತವೆ. ಆದರೆ ತಿರುಗಿಸುವ ವಿಧಾನವನ್ನು 2ಲಕ್ಷಕ್ಕೂ ಅಧಿಕಬಾರಿ ಪರೀಕ್ಷಿಸಿದೆ ಎಂದು LG ಹೇಳಿದೆ. ಇನ್ನುಳಿದ ಮಾಹಿತಿ ಕೆಳಕಂಡಂತಿವೆ.

ಪ್ರೊಸೆಸರ್Qualcomm® Snapdragon™ 765G 5G
ಗಾತ್ರ169.5 x 74.5 x 10.9 mm
ತೂಕ260g
ಪರದೆಯ ಗಾತ್ರ– ಮುಖ್ಯ ಪರದೆ: 6.8-inch 20.5:9 FHD+ P-OLED FullVision (2,460 x 1,080 / 395ppi)
– ಎರಡನೇ ಪರದೆ: 3.9-inch 1.15:1 G-OLED (1,240 x 1,080 / 419ppi)
RAM8GB
ಸ್ಟೋರೇಜ್128 or 256GB 
Expandable ಸ್ಟೋರೇಜ್microSD (up to 2TB)
ಬ್ಯಾಟರಿ4,000mAh
ಆಪರೇಟಿಂಗ್ ಸಿಸ್ಟಮ್ ಆವೃತ್ತಿAndroid 10.0 (Q OS)
ಕ್ಯಾಮೆರಾ– ಹಿಂಭಾಗ: Ultra High Resolution (64MP Standard 2 (F1.8 / 78°/ 0.8µm) / 13MP Ultra Wide (F1.9 / 117° / 1.0µm) / 12MP Ultra Wide Big Pixel (F2.2 / 120° / 1.4µm)
–ಮುಂಭಾಗ: 32MP Standard 3 (F1.9 / 79.6° / 0.8µm)
ಬಣ್ಣಗಳ ಆಯ್ಕೆAurora Gray / Illusion Sky
ಬೆಲೆಲಭ್ಯವಿಲ್ಲ