LG ಮೊಬೈಲ್ಗೆ ರೆಕ್ಕೆ ಬಂದಾಗ!

Share

ಹೌದು, LG ಕಂಪನಿಯು ಲಂಬವಾಗಿ ತಿರುಗಬಲ್ಲ ಎರೆಡೆರಡು ಪರದೆಗಳನ್ನು ಹೊಂದಿರುವ WING(ರೆಕ್ಕೆ) ಮಾದರಿಯ ಮೊಬೈಲ್ ಇದೇ ಸೆಪ್ಟೆಂಬರ್ ತಿಂಗಳ 14ರಂದು ಲೋಕಾರ್ಪಣೆ ಮಾಡುವುದಾಗಿ ತನ್ನ YouTube channelನಲ್ಲಿ ಹಂಚಿಕೊಂಡಿದೆ.

ವದಂತಿಗಳ ಪ್ರಕಾರ ಮುಖ್ಯ ಪರದೆ 6.8 ಇಂಚು ಹಾಗು ಎರಡನೆಯದು 4 ಇಂಚುಷ್ಟಿದೆ. Qualcomm 700 ಸರಣಿಯ ಪ್ರೊಸೆಸರ್ 765/765G ಚಿಪ್ ಬಳಸಲಾಗಿದೆ. ಇದು 5G ಟೆಕ್ನಾಲಜಿಯನ್ನು ಬೆಂಬಲಿಸುತ್ತದೆ.

ಇದು Samsung ಕಂಪನಿಯ Fold ಮಾದರಿಯ ಅನ್ವೇಷಣೆಗೆ LG ಕಡೆಯಿಂದ ಉತ್ತರವಿರಬಹುದು.