Netflixನಲ್ಲಿರುವ ಕನ್ನಡ ಸಿನಿಮಾಗಳು[Oct, 2020]

Share

ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ಹೋಗಿ ನೋಡುವ ಕಾಲವೊಂದಿತ್ತು. ಆದರೆ ಈಗ ಎಲ್ಲಾ ಬದಲಾಗಿದೆ. ನಮ್ಮಲ್ಲಿರುವ ಸಣ್ಣ ಪರದೆಯ ಫೋನುಗಳಿಂದ ಹಿಡಿದು ಗೋಡೆಗೆ ನೇತಾಕಿರುವ ಸಾಮರ್ಥ್ಯಕ್ಕೆ ತಕ್ಕ ದೂರದರ್ಶನಗಳಲ್ಲಿ ಯಾವಾಗ ಬೇಕಾದರೂ ಸಿನಿಮಾಗಳು, ದಾರವಾಹಿಗಳು ಮತ್ತು ಸಾಕ್ಷ್ಯ ಚಿತ್ರಗಳನ್ನು ನೋಡಬಹುದು.

ನೋಡುಗ ತನ್ನ ಇಚ್ಛೆಯನುಸಾರ ದೃಶ್ಯದಿಂದ ದೃಶ್ಯಕ್ಕೆ ಎಷ್ಟು ಬಾರಿಯಾದರೂ ಹಿಂದೆ ಮುಂದೆ ಓಡಿಸುತ್ತಾ, ಬೇಡವೆಂದಾಗ ನಿಲ್ಲಿಸಿ, ಬೇಕಾದಾಗ ಮತ್ತೆ ಪ್ರಾರಂಭಿಸಿ ವೀಕ್ಷಿಸಬಹುದು. ಹೀಗಿರುವಾಗ ಈ ತರಹದ ನೋಡುಗನನ್ನು ಮೆಚ್ಚಿಸುವುದು ಕಷ್ಟಸಾಧ್ಯ.

OTT ಪ್ಲಾಟ್‌ಫಾರ್ಮ್‌ಗಳಲ್ಲಿ ಪಾರುಪತ್ಯ ಸಾಧಿಸುತ್ತಾ ಬಂದಿರುವ Netflixನಲ್ಲಿ ನೋಡುಗರೆ ಇಲ್ಲ ಎಂದು ಕಾರಣ ಹೇಳಿ ಕನ್ನಡ ಸಿನಿಮಾಗಳ ಆಯ್ಕೆ ತೀರಾ ಕಡಿಮೆ. ಆದರೂ ಒಂದು ಚಲನಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿದ್ದರೆ ಅದು ನೀವು ಕೊಡುವ ಸಮಯಕ್ಕೆ ಯೋಗ್ಯವಾಗಿರುತ್ತದೆ ಎಂದು ಪರಿಗಣಿಸಿ ಪಟ್ಟಿಮಾಡಿರುವ ಸಿನಿಮಾಗಳನ್ನು ನೋಡಿ ಆನಂದಿಸಿ.

ಸಿನಿಮಾಗಳ ಪಟ್ಟಿ:

ನಾತಿಚರಾಮಿ Nathicharami (2018)

ನಾತಿಚರಾಮಿ ಮನ್ಸೂರೆ ನಿರ್ದೇಶನದ ಸಿನಿಮಾ. 2019 ರಲ್ಲಿ ನಡೆದ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಐದು ಪ್ರಶಸ್ತಿಗಳನ್ನು ಗೆದ್ದಿದೆ.

ವಿಜಯ ಕರ್ನಾಟಕ ಚಿತ್ರವಿಮರ್ಶೆ

Rich result on Google's SERP when searching "nathicharami"

ಶುದ್ಧಿ Shuddhi (2017)

ಆದಿಶ್ ಈಶ್ವರಪ್ಪ ಬರೆದು, ನಿರ್ದೇಶಿಸಿರುವ ಸಿನೆಮಾ ಶುದ್ಧಿ.

ಕನ್ನಡಪ್ರಭ ಸಿನಿಮಾ ವಿಮರ್ಶೆ

Rich result on Google's SERP when searching "shudhi"

ಅಯನ Ayana (2017)

ಅಯನ, ಗಂಗಾಧರ್ ಸಾಲೀಮಠ ನಿರ್ದೇಶನದ ಸಾಫ್ಟ್‌ವೇರ್ ಉದ್ಯಮಿಯ ಕತೆ.

ವಿಜಯ ಕರ್ನಾಟಕ ಚಿತ್ರವಿಮರ್ಶೆ

Rich result on Google's SERP when searching "ayana"

ಹೊಂಬಣ್ಣ Hombanna (2017)

ರಕ್ಷಿತ್ ತೀರ್ಥಹಳ್ಳಿ ಅವರು ಬರೆದು, ನಿರ್ದೇಶಿಸಿದ ಮಲೆನಾಡಿನ ಅರಣ್ಯ ಒತ್ತುವರಿ ಆಧಾರದ ಸಿನೆಮಾ.

ವಿಜಯ ಕರ್ನಾಟಕ ಚಿತ್ರವಿಮರ್ಶೆ

Rich result on Google's SERP when searching "hombanna"

ಉರ್ವಿ Urvi (2017)

ಉರ್ವಿ ಬಿ.ಎಸ್. ಪ್ರದೀಪ್ ವರ್ಮಾ ನಿರ್ದೇಶಿಸಿರುವ ಸಿನಿಮಾ.

ವಿಮರ್ಶೆ: ಜೋಗಿ, ಕನ್ನಡಪ್ರಭ

Rich result on Google's SERP when searching "urvi"

ಯು ಟರ್ನ್ U Turn (2016)

ಪವನ್ ಕುಮಾರ್ ಬರೆದು, ನಿರ್ಮಿಸಿ ಮತ್ತು ನಿರ್ದೇಶಿಸಿದ ಚಿತ್ರ.

ಕನ್ನಡಪ್ರಭ ಸಿನಿಮಾ ವಿಮರ್ಶೆ

Rich result on Google's SERP when searching "uturn"

ತಿಥಿ Thithi (2015)

ಈರೇಗೌಡ ಮತ್ತು ರಾಮ್ ರೆಡ್ಡಿ ಬರೆದಿರುವ ತಿಥಿ, 68ನೇ ಲೊಕಾರ್ನೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡಿದೆ. ಹಾಗು ಕನ್ನಡದ ಅತ್ಯುತ್ತಮ ಚಲನಚಿತ್ರ ಎಂದು 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಲಭಿಸಿದೆ.

ವಿಜಯ ಕರ್ನಾಟಕ ಚಿತ್ರವಿಮರ್ಶೆ

Rich result on Google's SERP when searching "thithi"